ಎಸ್‌ಬಿಐ ಲೈಫ್ – ಸ್ಮಾರ್ಟ್ ಫ್ಯೂಚರ್ ಚಾಯ್‌ಸೆಸ್‌ನ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಸ್ಮಾರ್ಟ್ ಫ್ಯೂಚರ್ ಚಾಯ್‌ಸೆಸ್‌ನ

UIN: 111N127V01

ಪ್ರೊಡಕ್ಟ್ ಕೋಡ್ : 2M

ಸೇವಿಂಗ್ಸ್ ಪ್ಲಾನ್

ಇಂದು ಇದರ ಆಯ್ಕೆ ಮಾಡಿರಿ
ಇದರಿಂದಾಗಿ ನಾಳೆ ನಿಮ್ಮಲ್ಲಿ ಆಯ್ಕೆ ಇರಬಹುದು.

ಒಂದು ವ್ಯಕ್ತಿಗತ, ನಾನ್-ಲಿಂಕ್ಡ್ , ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್ ಸೇವಿಂಗ್ಸ್ ಉತ್ಪನ್ನವಾಗಿದೆ.

ನಿಮ್ಮ ಕುಟುಂಬಕ್ಕೆ ಅದರದ್ದೇ ಆದ ಅವಶ್ಯಕತೆಗಳಿರುವಂತೆಯೇ ನಿಮಗೆ ಜೀವನದಲ್ಲಿ ನಿಮ್ಮದೇ ಆದ ಆಕಾಂಕ್ಷೆಗಳಿರುತ್ತವೆ, ಎಸ್‌ಬಿಐ ಲೈಫ್-ಸ್ಮಾರ್ಟ್ ಫ್ಯೂಚರ್ ಚಾಯ್‌ಸೆಸ್‌ನೊಂದಿಗೆ ಈಗ ನೀವು ಎರಡನ್ನೂ ಪೂರ್ಣಗೊಳಿಸಬಹುದಾಗಿದೆ. ಲೈಫ್ ಕವರ್‌ನೊಂದಿಗೆ ನಿಮ್ಮ ಕುಟುಂಬವನ್ನು ಸುರಕ್ಷಿತಗೊಳಿಸುವಂತೆಯೇ ನಿಮ್ಮ ಜೀವನದ ಗುರಿಗಳನ್ನು ತಲುಪಲು ನಗದು ಬೋನಸ್‌ಗಳನ್ನು ಪಡೆಯಿರಿ.

ಮುಖ್ಯ ಪ್ರಯೋಜನಗಳು :
  • ಬದಲಾಗುತ್ತಿರುವ ನಿಮ್ಮ ಅವಶ್ಯಕತೆಯಂತೆ ನಿಮ್ಮ ಲಾಭದ ಪಾವತಿಗಳನ್ನು ಆಯ್ದುಕೊಳ್ಳುವ ಪರಿವರ್ತನೀಯತೆಯನ್ನು ಆನಂದಿಸಿರಿ
  • ಬೇಕಾದಾಗ ಹಣದ^ ಆಯ್ಕೆಯೊಂದಿಗೆ ಆತ್ಮ ವಿಶ್ವಾಸದಿಂದಿರಿ
  • ಕಾಯುವ ಅವಶ್ಯಕತೆ ಇಲ್ಲದೆ ನೀವು ನಗದು ಬೋನಸ್^^ ಅನ್ನು ಆನಂದಿಸಿರಿ

^ಬೇಕಾದಾಗ ಹಣವು ಅಂದರೆ ಫ್ಲೆಕ್ಸಿ ಚಾಯ್ಸ್ ಆಯ್ಕೆಯಡಿಯಲ್ಲಿ ನಿಗದಿತ ಮಧ್ಯಂತರಗಳಲ್ಲಿ ಉಪಲಬ್ಥವಿರುವ ಸರ್ವೈವಲ್ ಲಾಭದ ಪಾವತಿಗಳಾಗಿವೆ. ಪಾಲಿಸಿದಾರರು ಈ ಪಾವತಿಗಳನ್ನು ತೆಗೆದುಕೊಳ್ಳಬಹುದು ಅಥವಾ ಮುಂದೂಡಬಹುದು. ಮುಂದೂಡಲಾದ ಪಾವತಿಗಳನ್ನು ಅನ್ವಯವಾಗುವ ಬಡ್ಡಿಯೊಂದಿಗೆ ಪಾಲಿಸಿಯ ಉಳಿದ ಅವಯಲ್ಲಿ ಯಾವುದೇ ಸಮಯದಲ್ಲಿ ಪಡೆದುಕೊಳ್ಳಬಹುದು.

^^ಮೊದಲನೆಯ ಪಾಲಿಸಿ ವರ್ಷ ಮತ್ತು ಎರಡನೇ ಪಾಲಿಸಿ ವರ್ಷದ ಸಲುವಾಗಿ ನಗದು ಬೋನಸ್ ಅನ್ನು (ಗಳನ್ನು) (ಒಂದು ವೇಳೆ ಘೋಷಿಸಲಾದರೆ) ಬಡ್ಡಿಯೊಂದಿಗೆ ಎರಡನೇ ಪಾಲಿಸಿ ವರ್ಷದ ಕೊನೆಗೆ ಪಾವತಿಸಲಾಗುತ್ತದೆ. ಮೂರನೇ ಪಾಲಿಸಿ ವರ್ಷದಿಂದ ಮುಂದೆ ನಗದು ಬೋನಸ್ (ಒಂದು ವೇಳೆ ಘೋಷಿಸಲಾದರೆ), ಪಾಲಿಸಿಯು ಚಾಲ್ತಿಯಲ್ಲಿದ್ದರೆ, ಪಾಲಿಸಿಯು ಕೊನೆಗೊಳ್ಳುವ ತನಕ ನಂತರದ ಪ್ರತೀ ಪಾಲಿಸಿ ವರ್ಷದ ಕೊನೆಯಲ್ಲಿ ಪಾವತಿಸಲಾಗುತ್ತದೆ.

ಮುಖ್ಯಾಂಶಗಳು

ಎಸ್‌ಬಿಐ ಲೈಫ್ – ಸ್ಮಾರ್ಟ್ ಫ್ಯೂಚರ್ ಚಾಯ್‌ಸೆಸ್‌ನ

ಒಂದು ವ್ಯಕ್ತಿಗತ, ನಾನ್-ಲಿಂಕ್ಡ್, ಪಾರ್ಟಿಸಿಪೇಟಿಂಗ್, ಲೈಫ್ ಇನ್ಶೂರೆನ್ಸ್ ಸೇವಿಂಗ್ಸ್ ಉತ್ಪನ್ನ

plan profile

Dinesh, a 37-year-old businessman, has opted for SBI Life - Smart Future Choices to enjoy regular cash flow, flexibility and provide financial protection to his family.

Change the form fields below to see how you too can live a tension-free life with SBI Life -Smart Future Choices.

Name:

DOB:

Gender:

Male Female Third Gender

Staff:

Yes No

Choose your policy term...

Premium Payment Term

Policy Term


Choose your plan options

Benefit Options

Bonus Options


A little information about the premium options...

Premium Frequency

Premium Amount

1,00,000 500000000

Reset
sum assured

Sum Assured


premium frequency

Premium frequency

Premium amount
(excluding taxes)


premium paying

Premium Payment Term


policy term

Policy Term


maturity benefits

Maturity Benefit

At assumed rate of returns** @ 4%


or
@ 8%

Give a Missed Call

ವೈಶಿಷ್ಟ್ಯಗಳು

  • ಸೇವಿಂಗ್ಸ್ ಪ್ಲಾನ್
  • ಆಯ್ಕೆಯ ಶಕ್ತಿ
    ವಿಭಿನ್ನ ಆಯ್ಕೆಗಳೊಂದಿಗೆ ನಿಮ್ಮ ‘ಆಯ್ಕೆಯ ಶಕ್ತಿ'ಯನ್ನು ಚಲಾಯಿಸಿ
  • ಮನಿ ಆನ್ ಡಿಮಾಂಡ್
  • ಆನ್‌ ಡಿಮಾಂಡ್‌^ ಆಯ್ಕೆಯೊಂದಿಗೆ ಆತ್ಮ ವಿಶ್ವಾಸದಿಂದಿರಿ
  • ನಗದು ಬೋನಸ್
  • ಲೈಫ್ ಕವರ್
  • ಕರ ಲಾಭಗಳು*

^ಮನಿ ಆನ್‌ ಡಿಮಾಂಡ್‌ ಅಂದರೆ ಫ್ಲೆಕ್ಸಿ ಚಾಯ್ಸ್ ಆಯ್ಕೆಯಡಿಯಲ್ಲಿ ನಿಗದಿತ ಮಧ್ಯಂತರಗಳಲ್ಲಿ ಉಪಲಬ್ಥವಿರುವ ಸರ್ವೆವೈವಲ್ ಲಾಭದ ಪಾವತಿಗಳಾಗಿವೆ. ಪಾಲಿಸಿದಾರರು ಈ ಪಾವತಿಗಳನ್ನು ತೆಗೆದುಕೊಳ್ಳಬಹುದು ಅಥವಾ ಮುಂದೂಡಬಹುದು. ಮುಂದೂಡಲಾದ ಪಾವತಿಗಳನ್ನು ಅನ್ವಯವಾಗುವ ಬಡ್ಡಿಯೊಂದಿಗೆ ಪಾಲಿಸಿಯ ಉಳಿದ ಅವಧಿಯಲ್ಲಿ ಯಾವುದೇ ಸಮಯದಲ್ಲಿ  ಪಡೆದುಕೊಳ್ಳಬಹುದು.

ಪ್ರಯೋಜನಗಳು


ಪರಿವರ್ತನೀಯತೆ

  • ನಿಮ್ಮ ಆಯ್ಕೆಯಂತೆ ಲಾಭದ ಆಯ್ಕೆಯನ್ನು ಆಯ್ದುಕೊಳ್ಳಿರ
    • ಕ್ಲಾಸಿಕ್ ಚಾಯ್ಸ್: ಪಾಲಿಸಿಯ ಅವಧಿಯಲ್ಲಿ ನಗದು ಬೋನಸ್ ಮತ್ತು ಪಾಲಿಸಿ ಅವಧಿಯ  ಕೊನೆಯಲ್ಲಿ  ಏಕ ಗಂಟಿನ ಪರಿಪಕ್ವತೆಯ ಲಾಭವನ್ನು ಪಡೆಯುವ ಆಯ್ಕೆ
    • ಫ್ಲೆಕ್ಸಿ ಚಾಯ್ಸ್: ನಿರ್ದಿಷ್ಟಪಡಿಸಲಾದ ಮಧ್ಯಾಂತರಗಳಲ್ಲಿ ಸರ್ವೈವಲ್ ಲಾಭದೊಂದಿಗೆ  ಪಾಲಿಸಿಯ ಕಾಲಾವಧಿಯಲ್ಲಿ ನಗದು ಬೋನಸ್  ಮತ್ತು ಪಾಲಿಸಿ ಅವಧಿಯ ಕೊನೆಯಲ್ಲಿ ಪರಿಪಕ್ವತೆಯ ಲಾಭವನ್ನು ಪಡೆಯುವ ಆಯ್ಕೆ.

ನಿಯಮಿತ ಆದಾಯ

  • ನಿಮ್ಮ ಆಯ್ಕೆಯಂತೆ ಪ್ರತಿ ವರ್ಷ ನಗದು ಬೋನಸ್ (ಘೋಷಿಸಲಾದರೆ) ಅಥವಾ ನಗದು ಬೋನಸ್ (ಘೋಷಿಸಿದರೆ) ಡೆಫರ್ ಮಾಡುವ ಆಯ್ಕೆ ಮಾಡಿರಿ.

ಅನುಕೂಲತೆ

  • ಪಾಲಿಸಿ ಅವಧಿಯಾದ್ಯಂತ ಲೈಫ್ ಕವರ್‌ನೊಂದಿಗೆ ಸೀಮಿತ ಪ್ರೀಮಿಯಮ್ ಪಾವತಿಯ ಉತ್ಪನ್ನ

ಸುರಕ್ಷತೆ

  • ಆಟೋ ಕವರ್‌ನ ಕಾಲಾವಧಿಯಲ್ಲಿ ತಡೆರಹಿತ ಲೈಫ್ ಕವರ್

ನಗದು ಬೋನಸ್ ​ ​:

ಪಾಲಿಸಿ ಅವಧಿಯಾದ್ಯಂತ ಪಾವತಿಸಲಾಗುವ ನಗದು ಬೋನಸ್‌ನ ಮೂಲಕ (ಘೋಷಿಸಿದರೆ)*ನಿಯಮಿತ ಆದಾಯ ಪಡೆಯಿರಿ, ಬಡ್ಡಿಯನ್ನು ಗಳಿಸಲು ಮತ್ತು ಅವಶ್ಯಕವಾದಾಗ ಹಿಂತೆಗೆದುಕೊಳ್ಳಲು ಡೆಫರ್ ಮಾಡುವ ಆಯ್ಕೆಯೊಂದಿಗೆ.

*ಪಾಲಿಸಿಯು ಊರ್ಜಿತದಲ್ಲಿದ್ದರೆ, ಮೊದಲನೆಯ ಮತ್ತು ಎರಡನೆಯ ಪಾಲಿಸಿ ವರ್ಷಕ್ಕಾಗಿ ನಗದು ಬೋನಸ್(ಗಳನ್ನು)ನ್ನು (ಘೋಷಿಸಿದರೆ) ಎರಡನೇ ಪಾಲಿಸಿ ವರ್ಷದ ಕೊನೆಯಲ್ಲಿ ಬಡ್ಡಿಯೊಂದಿಗೆ ಪಾವತಿಸಲಾಗುತ್ತದೆ. ಮೂರನೇ ಪಾಲಿಸಿ ವರ್ಷದಿಂದ ಮುಂದೆ ನಗದು ಬೋನಸ್‌ನ್ನು (ಘೋಷಿಸಿದರೆ) ನಂತರದ ಪ್ರತೀ ಪಾಲಿಸಿ ವರ್ಷದ ಕೊನೆಯಲ್ಲಿ ಪಾವತಿಸಲಾಗುತ್ತದೆ.


ಸರ್ವ್ವೈವಲ್ ಲಾಭಗಳು ​ :

ಫ್ಲೆಕ್ಸಿ ಚಾಯ್ಸ್ ಲಾಭದ ಆಯ್ಕೆಯಡಿಯಲ್ಲಿ, ಪಾಲಿಸಿ ಅವಧಿ ಮತ್ತು ನೀವು ಆಯ್ಕೆ ಮಾಡಿರುವ ಪ್ರೀಮಿಯಮ್ ಪಾವತಿ ಅವಧಿಯನ್ನು ಅವಲಂಬಿಸಿ ನೀವು ನಿರ್ದಿಷ್ಟಪಡಿಸಲಾದ ಮಧ್ಯಾಂತರಗಳಲ್ಲಿ ಮೂಲ ಆಶ್ವಾಸಿತ ಮೊತ್ತದ 10%ರ ಲಾಭದ ಪಾವತಿಯನ್ನು ಪಡೆಯಲು ಅರ್ಹರಿರುವಿರಿ.

ಸರ್ವೆವೈವಲ್ ಲಾಭವನ್ನು ಅದು ಪಾವತಿಸಲ್ಪಡುವಾಗ ಪಾವತಿಯಾಗಿ ಪಡೆದುಕೊಳ್ಳಬಹುದು ಅಥವಾ ಬಡ್ಡಿಯನ್ನು ಗಳಿಸಲು ಅದನ್ನು ಡೆಫರ್ ಮಾಡಬಹುದು ಮತ್ತು ಅವಶ್ಯಕವಾದಂತೆ ಹಿಂತೆಗೆದುಕೊಳ್ಳಬಹುದು. 


ಪರಿಪಕ್ವತೆಯ ಲಾಭಗಳು ​ ​:

ಪಾಲಿಸಿ ಅವಧಿಯ ಕೊನೆಯ ತನಕ ಬದುಕಿದಾಗ, ಈ ಕೆಳಗಿನವವುಗಳನ್ನು ಪಾವತಿಸಲಾಗುತ್ತದೆ :

ಎ) ಕ್ಲಾಸಿಕ್ ಚಾಯ್ಸ್‌ನಡಿಯಲ್ಲಿ: ಪರಿಪಕ್ವತೆಯಲ್ಲಿ ಗ್ಯಾರಂಟೀಡ್ ವಿಮಾ ಮೊತ್ತ + ಸಂಚಯಿತ ಡೆಫರ್ಡ್ ನಗದು ಬೋನಸ್, ಏನಾದರೂ ಇದ್ದರೆ + ಟರ್ಮಿನಲ್  ಬೋನಸ್, ಘೋಷಿಸಲಾಗಿದ್ದರೆ. ಇದರಲ್ಲಿ, ವಯಸ್ಸು, ಪಾಲಿಸಿ ಅವಧಿ ಮತ್ತು  ಆಯ್ದುಕೊಂಡ ಪ್ರೀಮಿಯಮ್ ಪಾವತಿ ಅವಧಿಯನ್ನು ಅವಲಂಬಿಸಿ ಪರಿಪಕ್ವತೆಯಲ್ಲಿ ಗ್ಯಾರಂಟೀಡ್ ವಿಮಾ ಮೊತ್ತವು ಮೂಲ ವಿಮಾ ಮೊತ್ತದ 138%ರ ತನಕ ಆಗಿರಬಹುದು.

ಬಿ) ಫ್ಲೆಕ್ಸಿ ಚಾಯ್ಸ್‌ನಡಿಯಲ್ಲಿ: ಪರಿಪಕ್ವತೆಯಲ್ಲಿ ಗ್ಯಾರಂಟೀಡ್ ವಿಮಾ ಮೊತ್ತ + ಸಂಚಯಿತ ಸರ್ವೈವಲ್ ಲಾಭಗಳು, ಏನಾದರೂ ಇದ್ದರೆ, + ಸಂಚಯಿತ ಡೆಫರ್ಡ್ ನಗದು ಬೋನಸ್, ಏನಾದರೂ ಇದ್ದರೆ + ಟರ್ಮಿನಲ್ ಬೋನಸ್, ಘೋಷಿಸಲಾಗಿದ್ದರೆ. ಇಲ್ಲಿ, ಪರಿಪಕ್ವತೆಯಲ್ಲಿ ಗ್ಯಾರಂಟೀಡ್ ವಿಮಾ ಮೊತ್ತವು ಮೂಲ ವಿಮಾ ಮೊತ್ತದ 80% ಕ್ಕೆ ಸಮನಾಗಿದೆ.

 

ಮರಣ ಲಾಭ    ​​:

ಕ್ಲಾಸಿಕ್ ಚಾಯ್ಸ್‌ಕ್ಕಾಗಿ :

ಎ ಅಥವಾ ಬಿ-ಯಲ್ಲಿ ಯಾವುದು ಹೆಚ್ಚೋ ಅದು; ಇಲ್ಲಿ :

ಎ = ಸಾವಿನ ವಿಮಾ ಮೊತ್ತ + ಸಂಚಯಿತ ಡೆಫರ್ಡ್ ನಗದು ಬೋನಸ್,  ಏನಾದರೂ ಇದ್ದರೆ + ಟರ್ಮಿನಲ್ ಬೋನಸ್, ಘೋಷಿಸಿದ್ದರೆ.

ಬಿ = ಸಾವಿನ ಕನಿಷ್ಠ ಪ್ರಯೋಜನ, ಅದು ಸಾವಿನ ದಿನಾಂಕದ ವರೆಗೆ ಕಟ್ಟಿರಲಾದ ಪ್ರೀಮಿಯಮ್‌ಗಳ 105%ಗೆ ಸಮನಾಗಿರುತ್ತದೆ.


ಫ್ಲೆಕ್ಸಿ ಚಾಯ್ಸ್‌ಕ್ಕಾಗಿ ​ :

ಎ ಅಥವಾ ಬಿ-ಯಲ್ಲಿ ಯಾವುದು ಹೆಚ್ಚೋ ಅದು; ಇಲ್ಲಿ :

ಎ = ಸಾವಿನ ವಿಮಾ ಮೊತ್ತ + ಸಂಚಯಿತ ಸರ್ವೈವಲ್ ಲಾಭಗಳು, ಏನಾದರೂ ಇದ್ದರೆ + ಸಂಚಯಿತ ಡೆಫರ್ಡ್ ನಗದು ಬೋನಸ್, ಏನಾದರೂ ಇದ್ದರೆ + ಟರ್ಮಿನಲ್ ಬೋನಸ್, ಘೋಷಿಸಿದ್ದರೆ.

ಬಿ = ಸಾವಿನ ಕನಿಷ್ಠ ಪ್ರಯೋಜನ, ಅದು ಸಾವಿನ ದಿನಾಂಕದ ವರೆಗೆ ಕಟ್ಟಿರಲಾದ ಪ್ರೀಮಿಯಮ್‌ಗಳ 105%ಗೆ ಸಮನಾಗಿರುತ್ತದೆ.

"ಸಾವಿನ ವಿಮಾ ಮೊತ್ತವು ವಾರ್ಷಿಕಗೊಳಿಸಲಾದ ಪ್ರೀಮಿಯಮ್‌ನ#  11 ಪಟ್ಟು ಆಗಿರುತ್ತದೆ"

@ಪಾವತಿಸಲಾದ/ಸ್ವೀಕರಿಸಲಾದ  ಒಟ್ಟು ಪ್ರೀಮಿಯಮ್‌ಗಳೆಂದರೆ ಯಾವುದೇ ಹೆಚ್ಚುವರಿ ಪ್ರೀಮಿಯಮ್ ಮತ್ತು ಅನ್ವಯವಾಗುವ ಕರಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ  ಪ್ರೀಮಿಯಮ್‌ಗಳ ಮೊತ್ತವಾಗಿದೆ.

#ವಾರ್ಷಿಕಗೊಳಿಸಲಾದ ಪ್ರೀಮಿಯಮ್  ಪಾಲಿಸಿದಾರನು ಒಂದು ವರ್ಷದಲ್ಲಿ ಕಟ್ಟಲು ಆಯ್ದುಕೊಂಡಿರುವ ಪ್ರೀಮಿಯಮ್ ಮೊತ್ತವಾಗಿರುತ್ತದೆ; ಇದರಲ್ಲಿ ಅನ್ವಯಿಸುವ ತೆರಿಗೆಗಳು, ಹೆಚ್ಚುವರಿ ಪ್ರೀಮಿಯಮ್‌ಗಳ ಅಂಡರ್‌ರೈಟಿಂಗ್ ಮತ್ತು ಮೋಡಲ್ ಪ್ರೀಮಿಯಮ್‌ನ ಲೋಡಿಂಗ್‌ಗಳು, ಏನಾದರೂ ಇದ್ದರೆ, ಸೇರಿರುವುದಿಲ್ಲ.

ಲಾಭಾರ್ಥಿಯು ಸಂಪೂರ್ಣ ಮೃತ್ಯು ಲಾಭವನ್ನು ಏಕ ಗಂಟಿನಲ್ಲಿ ಅಥವಾ 5 ವರ್ಷಗಳ ಅವಧಿಗಾಗಿ ಕಂತುಗಳಲ್ಲಿ ತೆಗೆದುಕೊಳ್ಳಬಹುದು.

ಆಟೋ ಕವರ್ ಅವಧಿ :

ಉತ್ಪನ್ನದಡಿಯಲ್ಲಿ ಒಂದು ಅಟೊ ಕವರ್ ಅವಧಿಯು ಉಪಲಬ್ಧವಿದ್ದು, ಈ ಕಾಲಾವಧಿಯಲ್ಲಿ ಕನಿಷ್ಠ 2 ಪೂರ್ಣ ವರ್ಷಗಳ ಪ್ರೀಮಿಯಮ್‌ಗಳನ್ನು ಪಾವತಿಸಲಾಗಿದ್ದರೆ ಮತ್ತು ನಂತರದ ಯಾವುದೇ ಪ್ರೀಮಿಯಮ್ ಅನ್ನು ಪಾವತಿಸಿರದಿದ್ದರೆ, ಪಾವತಿಸದಿರುವ ಮೊದಲ ಪ್ರೀಮಿಯಮ್ ಪಾವತಿಸಬೇಕಾಗಿದ್ದ ತಾರೀಖಿನಿಂದ 1 ವರ್ಷದ ಆಟೋ ಕವರ್ ಅವಧಿ ಉಪಲಬ್ಧವಿರುತ್ತದೆ ಮತ್ತು ಕನಿಷ್ಠ 5 ಪೂರ್ಣ ವರ್ಷಗಳ ಪ್ರೀಮಿಯಮ್‌ಗಳನ್ನು ಪಾವತಿಸಲಾಗಿದ್ದು ಮತ್ತು ನಂತರದ ಪ್ರೀಮಿಯಮ್ ಪಾವತಿಸಿರದಿದ್ದರೆ, ಪಾವತಿಸಬೇಕಾಗಿದ್ದ ಮೊದಲ ಪ್ರೀಮಿಯಮ್‌ನ ತಾರೀಖಿನಿಂದ 2 ವರ್ಷಗಳ ಆಟೋ ಕವರ್ ಅವಧಿಯು ಉಪಲಬ್ಧವಿರುತ್ತದೆ.


ಆಟೋ-ಕವರ್‌ನ ಕಾಲಾವಧಿಯಲ್ಲಿ, ಸರ್ವೈವಲ್ ಮತ್ತು ಪರಿಪಕ್ವತೆಯ ಲಾಭಗಳನ್ನು, ಪೈಡ್ -ಅಪ್ ಪಾಲಿಸಿಗಳಿಗೆ ಅನ್ವಯವಾಗುವಂತೆ ಪಾವತಿಸಲಾಗುತ್ತದೆ.


ಆಟೋ ಕವರ್ ಅವಧಿಯಲ್ಲಿ ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಅನ್ವಯವಾಗುವ ಮೃತ್ಯು ಲಾಭವು, ಪಾವತಿಸಿದಿರದ ಮತ್ತು/ಅಥವಾ ಬಾಕಿ ಪ್ರೀಮಿಯಮ್, ಅನ್ವಯವಾದರೆ, ಇವನ್ನು ಕಡಿತಗೊಳಿಸಿ, ಅನ್ವಯವಾಗುತ್ತದೆ.

ಆಟೋ ಕವರ್ ಅವಧಿಯಲ್ಲಿ ನಿಮ್ಮ ಪಾಲಿಸಿಯಡಿಯಲ್ಲಿ ನಗದು ಬೋನಸ್(ಗಳು) ಪಾವತಿಸ್ಪಡುವುದಿಲ್ಲ.
ಎಸ್‌ಬಿಐ ಲೈಫ್ – ಸ್ಮಾರ್ಟ್ ಫ್ಯೂಚರ್ ಚಾಯ್‌ಸೆಸ್‌ನ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳಿಗೆ, ಮುಂದಿನ ದಾಖಲೆಗಳನ್ನು ಗಮನವಿಟ್ಟು ಓದಿ .
null
**ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ

NW/2M/ver1/02/22/WEB/KAN


**ಪ್ರಯೋಜನಗಳು ವಿವರಣೆಯ ಉದ್ದೇಶಗಳಿಗಾಗಿ ಮಾತ್ರ ಮತ್ತು ಆರೋಗ್ಯವಂತ ಜೀವಕ್ಕಾಗಿ. ಈ ಮೇಲೆ ನಮೂದಿಸಲಾದ ವಾರ್ಷಿಕ @4% ಮತ್ತು @8%ರ  ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಎಲ್ಲಾ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ. ಬೋನಸ್ ದರಗಳು ಬೋನಸ್ ಸಂಚಯದ ಕಾಲಾವಧಿಯಲ್ಲಿ ಸ್ಥಿರವಾಗಿವೆ ಎಂದು ಊಹಿಸಲಾಗಿದೆ ಆದರೆ ಕಂಪೆನಿಯ ವಿನಿಯೋಜನೆಯ ಅನುಭವವನ್ನು ಆಧರಿಸಿ ವಾಸ್ತವಿಕ ಬೋನಸ್‌ನಲ್ಲಿ ವ್ಯತ್ಯಾಸವಾಗಬಹುದು. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಪ್ರತಿಫಲಗಳು ಭವಿಷ್ಯದ ವಿನಿಯೋಜನೆಯ ಕಾರ್ಯಾಚರಣೆಯನ್ನೊಳಗೊಂಡು ಅನೇಕ ಅಂಶಗಳನ್ನು ಅವಲಂಬಿಸಿವೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಪಾಲಿಸಿಗೆ ನಿರ್ದಿಷ್ಟವಾದ ಲಾಭದ ವಿವರಣೆಯನ್ನು ಕೇಳಿಕೊಳ್ಳಿರಿ.

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

*ಕರ ಲಾಭಗಳು :
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ.

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ಕರ ಕಾನೂನುಗಳ ಪ್ರಕಾರ ಆದಾಯ ಕರ ಲಾಭಗಳು/ವಿನಾಯಿತಿಗಳಿಗೆ  ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.