SBI ಲೈಫ್ ಶುಭ್ ನಿವೇಶ್ - ಅತ್ಯುತ್ತಮ ದತ್ತಿ ನೀತಿ | ಸಂಪೂರ್ಣ ಜೀವ ವಿಮೆ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌‌ಬಿಐ ಲೈಫ್‌ – ಶುಭ್‌ ನಿವೇಶ್‌

UIN: 111N055V04

ಯೋಜನೆ ಕೋಡ್: 35

ಎಸ್‌‌ಬಿಐ ಲೈಫ್‌ – ಶುಭ್‌ ನಿವೇಶ್

ನಿಯಮಿತ ಆದಾಯದೊಂದಿಗೆ
ಒಂದು ಮಂಗಳಕರ
ಆರಂಭವನ್ನು
ಮಾಡಿರಿ.

ವ್ಯಕ್ತಿಗತ, ನಾನ್-ಲಿಂಕ್ಡ್ , ಪಾರ್ಟಿಸಿಪೇಟಿಂಗ್, ಲೈಫ್ ಇನ್ಶೂರೆನ್ಸ್ ಉಳಿತಾಯ ಉತ್ಪನ್ನ.

ನಿಮ್ಮ ಕುಟುಂಬದ ಗುರಿಗಳನ್ನು ತಲುಪುವುದು, ಬೆಳೆಯುತ್ತಿರುವ ನಿಮ್ಮ ಜೀವನ ಶೈಲಿಯ ಅವಶ್ಯಕತೆಗಳನ್ನು ಪೂರೈಸುವುದು ಮತ್ತು ನಿಮ್ಮ ಪ್ರಿಯ ಜನರನ್ನು ಸಂರಕ್ಷಿಸುವುದು, ಇವು ಯಾವಾಗಲೂ ನಿಮ್ಮ ಆದ್ಯತೆಯಾಗಿವೆ. ಈಗ ಎಸ್‌‌ಬಿಐ ಲೈಫ್ - ಶುಭ ನಿವೇಶ್‌ ನೊಂದಿಗೆ ನಾಳಿನ ಭವಿಷ್ಯವನ್ನು ಸುನಿಶ್ಚಿತಗೊಳಿಸುವ ಆನಂದ ಪಡೆಯಿರಿ, ಇದು ಜೀವನಕ್ಕಾಗಿ ಒಂದು ಸುಭದ್ರವಾದ ಆರ್ಥಿಕ ಕಾರ್ಪಸ್ ನ್ನು ರಚಿಸಲು ನಿಮಗೆ ಸಂರಕ್ಷಣೆ, ಉಳಿತಾಯ ಮತ್ತು ನಿಯಮಿತ ಕಾರ್ಪಸ್ ನ್ನು ಒದಗಿಸುತ್ತದೆ.

ಮುಖ್ಯ ಪ್ರಯೋಜನಗಳು :
  • ವಿಮಾ ಕವರ್, ಉಳಿತಾಯಗಳು ಮತ್ತು ನಿಯಮಿತ ಆದಾಯದ ಮೂರು ಲಾಭಗಳು
  • ಹೋಲ್ ಲೈಫ್ ವಿಕಲ್ಪದೊಂದಿಗಿನ ಎಂಡೊಮೆಂಟ್ನಲ್ಲಿ 100 ವರ್ಷ ವಯಸ್ಸಿನ ತನಕ ವಿಮಾ ಕವರ್
  • ಮಾಮೂಲಿ ವೆಚ್ಚದಲ್ಲಿ ಮೂರು ರೈಡರ್ ವಿಕಲ್ಪಗಳ ಮೂಲಕ ನಿಮ್ಮ ಕವರೇಜ್‌ನ್ನು ಹೆಚ್ಚಿಸಿರಿ
 
^ಎಸ್‌‌ಬಿಐ ಲೈಫ್ - ಪ್ರಿಫರ್ಡ್ ಟರ್ಮ್ ರೈಡರ್ (UIN:111B014V02), ಎಸ್‌‌ಬಿಐ ಲೈಫ್ - ಎಕ್ಸಿಡೆಂಟಲ್ ಡೆತ್ ಬೆನಿಫಿಟ್ (ADB) ರೈಡರ್ (UIN:111B015V03), ಎಸ್‌‌ಬಿಐ ಲೈಫ್ - ಎಕ್ಸಿಡೆಂಟಲ್ ಟೋಟಲ್ ಆ್ಯಂಡ್ ಪರ್ಮನೆಂಟ್ ಡಿಸ್ಯಾಬಿಲಿಟಿ (ATPD) ಬೆನಿಫಿಟ್ ರೈಡರ್ (UIN:111B016V03)

ಮುಖ್ಯಾಂಶಗಳು

ಎಸ್‌‌ಬಿಐ ಲೈಫ್‌ – ಶುಭ್‌ ನಿವೇಶ್

ಒಂದು ವೈಯಕ್ತಿಕ, ನಾನ್-ಲಿಂಕ್ಡ್ , ಪಾರ್ಟಿಸಿಪೇಟಿಂಗ್, ಲೈಫ್ ಇನ್ಶೂರೆನ್ಸ್, ಸೇವಿಂಗ್ಸ್ ಉತ್ಪನ್ನ ಆಗಿದೆ

plan profile

ದಿನೇಶ್, 47 ವರ್ಷದ ಪ್ರೊಫೆಸರ್‌ ಆಗಿದ್ದು, ಅವರು ತಮ್ಮ ಕುಟುಂಬದ ಹಣಕಾಸು ಅಗತ್ಯತೆಗಳು ಮತ್ತು ಜೀವ ರಕ್ಷಣೆ ಕುರಿತು ಕಾಳಜಿ ವಹಿಸಲು ಪೂರ್ಣ ಜೀವ ರಕ್ಷಣೆಯೊಂದಿಗೆ ಎಂಡೋಮೆಂಟ್ ಪ್ಲಾನ್‌‌ ಅನ್ನು ಆರಿಸಿಕೊಂಡಿದ್ದಾರೆ.

ಎಸ್‌ಬಿಐ ಲೈಫ್ - ಶುಭ್ ನಿವೇಶ್‌ನ ಮೂಲಕ ಒತ್ತಡ ಮುಕ್ತ ಜೀವನವನ್ನು ನೀವು ಹೇಗೆ ಸಾಗಿಸಬಹುದು ಎಂಬುದನ್ನು ನೋಡಲು ಕೆಳಗಿನ ನಮೂನೆ ಕ್ಷೇತ್ರಗಳನ್ನು ಬದಲಾಯಿಸಿ.

Name:

DOB:

Gender:

Male Female Third Gender

Staff:

Yes No

Let's finalize the policy duration you are comfortable with...

Policy Term

5 30

Plan

Endowment Option
Endowment with Whole Life Option

A little information about the premium options...

Premium Frequency

Sum Assured

75,000 25,00,00,000

Let's finalize the rider options...

SBI Life - Preferred Term Rider (UIN:111B014V02):

Term for preferred Term Rider

5 30

Preferred Term Rider Sum Assured

25,000 50,00,000

SBI Life - Accidental Death Benefit Rider (UIN:111B015V03):

Term for ADB Rider

5 30

ADB Rider Sum Assured

25,000 50,00,000

SBI Life - Accidental Total & Permanent Disablity Benefit Rider (UIN:111B016V03):

Term for ATPDB Rider

5 30

ATPDB Rider Sum Assured

25,000 50,00,000

Reset
sum assured

Sum Assured


premium frequency

Premium frequency

Premium amount
(excluding taxes)


premium paying

Premium Payment Term


policy term

Policy Term


maturity benefits

Maturity Benefit

At assumed rate of returns** @ 4%


or
@ 8%

Give a Missed Call

ವೈಶಿಷ್ಟ್ಯಗಳು

  • ನಿಮ್ಮ ವಿಮೆಯ ಅವಶ್ಯಕತೆಗಳನ್ನು ಅವಲಂಬಿಸಿ 30 ವರ್ಷಗಳ ತನಕ ಅಥವಾ ಜೀವಮಾನವಿಡೀ ಲೈಫ್ ಕವರ್ ಪಡೆಯಿರಿ.
  • ಪಾಲಿಸಿ ಅವಧಿಯಾದ್ಯಂತ ಸಿಂಪಲ್ ರಿವರ್ಷನರಿ ಬೋನಸ್‌ಗಳು
  • ಎರಡು ಪ್ಲಾನ್ ಆಯ್ಕೆಗಳು - ಎಂಡೊಮೆಂಟ್ ಆಯ್ಕೆ ಮತ್ತು ಹೋಲ್ ಲೈಫ್ ಆಯ್ಕೆಯೊಂದಿಗೆ ಎಂಡೊಮೆಂಟ್
  • ಮೂರು ರೈಡರ್ ಆಯ್ಕೆಗಳೊಂದಿಗೆ ಕೈ ಗೆಟಕುವ ವೆಚ್ಚದಲ್ಲಿ ಸಮಗ್ರ ಕವರೇಜ್ ಪಡೆಯಿರಿ.
  • ಹೋಲ್ ಲೈಫ್ ಆಯ್ಕೆಯೊಂದಿಗೆ ಎಂಡೊಮೆಂಟ್‌ನಡಿಯಲ್ಲಿ , ಪರಿಪಕ್ವತೆಯ ನಂತರ ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದಲ್ಲಿ ಹೆಚ್ಚುವರಿ ಮೂಲ ಆಶ್ವಾಸಿತ ಮೊತ್ತವನ್ನು ಒದಗಿಸುತ್ತದೆ

ಪ್ರಯೋಜನಗಳು

ಸುರಕ್ಷಿತತೆ
  • ನಿಮ್ಮ ಕುಟುಂಬವನ್ನು ಸಂರಕ್ಷಿಸುತ್ತದೆ ಮತ್ತು ಅವರ ಆಕಾಂಕ್ಷೆಗಳನ್ನು ಪೂರ್ಣಗೊಳಿಸಲು ಅವರನ್ನು ಸಶಕ್ತಗೊಳಿಸುತ್ತದೆ.
  • ನಿಮ್ಮ ಆರ್ಥಿಕ ಗುರಿಗಳನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ
ಭರವಸೆಯುಕ್ತ
  • ಪಾಲಿಸಿ ಅವಧಿಯಾದ್ಯಂತ ಸಿಂಪಲ್‌ ರಿವರ್ಷನರಿ ಬೋನಸ್‌ಗಳ ಮೂಲಕ ನಿಮ್ಮ ನಿಧಿಯನ್ನು ರಚಿಸಿರಿ.
ಪರಿವರ್ತನೀಯತೆ
  • ನಿಮ್ಮ ಆರ್ಥಿಕ ಅವಶ್ಯತೆಗಳನ್ನು ಪೂರ್ಣಗೊಳಿಸಲು ನಿಮಗೆ ಲೈಫ್ ಕವರ್ ಒದಗಿಸಲು ಎರಡು ಪ್ಲಾನ್ ಆಯ್ಕೆಗಳು
  • ನಿಮ್ಮ ಆರ್ಥಿಕ ಅವಶ್ಯಕತೆಗಳಿಗೆ ಸೂಕ್ತವಾದ ನಿಯಮಿತ ಆದಾಯ ಪಡೆಯುವ ಆಯ್ಕೆ
  • ಏಕ ಅಥವಾ ನಿಯಮಿತ ಪ್ರೀಮಿಯಮ್ ಪಾವತಿಯ ಆಯ್ಕೆ
ಮಿತವ್ಯಯಕರ
  • ಮಾಮೂಲಿ ವೆಚ್ಚದಲ್ಲಿ ಮೂರು ರೈಡರ್ ಆಯ್ಕೆಗಳ ಮೂಲಕ ನಿಮ್ಮ ಕವರೇಜ್‌ನ್ನು ಹೆಚ್ಚಿಸಿರಿ.
    • ಎಸ್‌ಬಿಐ ಲೈಫ್ : ಪ್ರಿಫರ್ಡ್‌ ಟರ್ಮ್ ರೈಡರ್
    • ಎಸ್‌ಬಿಐ ಲೈಫ್ : ಎಕ್ಸಿಡೆಂಟಲ್ ಡೆತ್ ಬೆನಿಫಿಟ್ ರೈಡರ್
    • ಎಸ್‌ಬಿಐ ಲೈಫ್ : ಎಕ್ಸಿಡೆಂಟಲ್ ಟೋಟಲ್ ಆ್ಯಂಡ್ ಪರ್ಮನೆಂಟ್ ಡಿಸ್ಯಾಬಿಲಿಟಿ ಬೆನಿಫಿಟ್ ರೈಡರ್
ತೆರಿಗೆ ಲಾಭಗಳನ್ನು ಪಡೆಯಿರಿ*

ಪಕ್ವತೆಯ ಲಾಭ


ಆಯ್ದುಕೊಂಡ ಪ್ಲಾನ್ ಆಯ್ಕೆಯನ್ನು ಆಧರಿಸಿರುತ್ತದೆ


ಎಂಡೋವ್‌ಮೆಂಟ್ ಆಯ್ಕೆ

  • ಎಂಡೋವ್‌ಮೆಂಟ್ ಅವಧಿ ಪೂರ್ಣಗೊಂಡ ಬಳಿಕ ಮೂಲ ಆಶ್ವಾಸಿತ ಮೊತ್ತ + ವಿನಿಯೋಜಿತ ಸರಳ ರಿವರ್‌ಶನರೀ ಬೋನಸ್‌ಗಳು + ಟರ್ಮಿನಲ್ ಬೋನಸ್, ಏನಾದರೂ ಇದ್ದರೆ ಪಾವತಿಸಲಾಗುವುದು, ಒಂದುವೇಳೆ ಪಾಲಿಸಿಯು ಊರ್ಜಿತದಲ್ಲಿದ್ದರೆ.
  • ಮುಂದೂಡಿದ ಪಕ್ವತೆಯ ಲಾಭದ ಆಯ್ಕೆ ಉಪಲಬ್ಧವಿದೆ : ಎಂಡೋವ್‌ಮೆಂಟ್ ಅವಧಿಯ ಕೊನೆಯಲ್ಲಿ ಆಯ್ಕೆ ಮಾಡಬಹುದು

ಎಂಡೋವ್‌ಮೆಂಟ್ ಜೊತೆ ವ್ಹೋಲ್ ಲೈಫ್ ಆಯ್ಕೆ
  • ಎಂಡೋವ್‌ಮೆಂಟ್ ಅವಧಿ ಪೂರ್ಣಗೊಳಿಸಿದ ಬಳಿಕ, ಮೂಲ ಆಶ್ವಾಸಿತ ಮೊತ್ತ + ವಿನಿಯೋಜಿಸಿದ ಸರಳ ರಿವರ್‌ಶನರೀ ಬೋನಸ್‌ಗಳು + ಟರ್ಮಿನಲ್ ಬೋನಸ್ ಏನಾದರೂ ಇದ್ದರೆ ಪಾವತಿಸಲಾಗುವುದು, ಒಂದುವೇಳೆ ಪಾಲಿಸಿಯು ಊರ್ಜಿತದಲ್ಲಿದ್ದರೆ.
  • 100ನೇ ಹುಟ್ಟು ಹಬ್ಬದ ದಿನ ತಲುಪಿದಾಗ : ಮೂಲ ಆಶ್ವಾಸಿತ ಮೊತ್ತವನ್ನು ಪಾವತಿಸಲಾಗುವುದು.
  • ಮುಂದೂಡಿದ ಪಕ್ವತೆಯ ಲಾಭದ ಆಯ್ಕೆ ಉಪಲಬ್ಧವಿದೆ : ಎಂಡೋವ್‌ಮೆಂಟ್‌ ಅವಧಿಯ ಕೊನೆಯಲ್ಲಿ ಆಯ್ಕೆ ಮಾಡಬಹುದು

ಮರಣ ಲಾಭ :

ಜೀವನ ಆಶ್ವಾಸಿತ ಮಾಡಿಸಿಕೊಂಡವರ ದುರದೃಷ್ಟಕರ ಮರಣದ ಸಂದರ್ಭದಲ್ಲಿ, ಆಯ್ದುಕೊಂಡ ಪ್ಲಾನ್ ಆಯ್ಕೆ ಆಧರಿಸಿ:


ಎಂಡೋವ್ಮೆಂಟ್ ಆಯ್ಕೆ :


ಪಾಲಿಸಿಯು ಊರ್ಜಿತದಲ್ಲಿದ್ದರೆ, ಎಂಡೊಮೆಂಟ್ ಅವಧಿ ಪೂರ್ಣಗೊಳ್ಳುವ ಮೊದಲು:

ನಿಯಮಿತ ಪ್ರೀಮಿಯಮ್ಗಾಗಿ: (ಎ, ಬಿ)ಗಳ ಪೈಕಿ ಅಧಿಕ ಇರುವಂಥಾದ್ದನ್ನು ನಾಮನಿರ್ದೇಶಕರು/ಫಲಾನುಭವಿ/ವಾರಸುದಾರರಿಗೆ ಪಾವತಿಸಲಾಗುವುದು, ಇದರಲ್ಲಿ:


  • ಅ) ಮರಣದಲ್ಲಿ ಆಶ್ವಾಸಿತ ಮೊತ್ತ + ವಿನಿಯೋಜಿಸಿದ ರಿವರ್‌ಶನರೀ ಬೋನಸ್‌ಗಳು + ಟರ್ಮಿನಲ್ ಬೋನಸ್ ಏನಾದರೂ ಇದ್ದರೆ
    ಇಲ್ಲಿ ಮೃತ್ಯುವಿನಲ್ಲಿ ಆಶ್ವಾಸಿತ ಮೊತ್ತವು ಮೂಲ ಆಶ್ವಾಸಿತ ಮೊತ್ತ ಅಥವಾ ವಾರ್ಷಿಕೀಕೃತ$ ಪ್ರೀಮಿಯಮ್ನ 10 ಪಟ್ಟುಗಳು, ಇವುಗಳ ಪೈಕಿ ಅಧಿಕ ಇರುವಂತಹದ್ದಾಗಿದೆ.
    ವಾರ್ಷಿಕೀಕೃತ$ ಪ್ರೀಮಿಯಮ್ ಎಂದರೆ, ಅನ್ವಯವಾಗುವ ತೆರಿಗೆಗಳು, ರೈಡರ್ ಪ್ರೀಮಿಯಮ್ಗಳು, ಅಂಡರ್ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್ಗಳು ಮತ್ತು ಮೊಡೆಲ್ ಪ್ರೀಮಿಯಮ್ಗಳಿಗಾಗಿ ಲೋಡಿಂಗ್ಸ್ , ಏನಾದರೂ ಇದ್ದರೆ, ಇವನ್ನು ಹೊರತುಪಡಿಸಿ ಪಾಲಿಸಿದಾರರಿಂದ ಆಯ್ಕೆ ಮಾಡಲಾದಂತೆ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರೀಮಿಯಮ್ ಮೊತ್ತವಾಗಿದೆ.
  • ಆ) ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸಲಾದ@ ಒಟ್ಟು ಪ್ರೀಮಿಯಂನ 105%.

@ಪಾವತಿಸಲಾದ/ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ಗಳೆಂದರೆ ಯಾವುದೇ ಹೆಚ್ಚುವರಿ ಪ್ರೀಮಿಯಮ್, ರೈಡರ್ ಪ್ರೀಮಿಯಮ್ ಮತ್ತು ಕರಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್‌ಗಳಾಗಿವೆ:/p>


ಸಿಂಗಲ್ ಪ್ರೀಮಿಯಮ್ಗಾಗಿ :

ಮರಣದಲ್ಲಿ ಆಶ್ವಾಸಿತ ಮೊತ್ತ + ವಿನಿಯೋಜಿಸಿದ ರಿವರ್‌ಶನರೀ ಬೋನಸ್‌ಗಳು + ಟರ್ಮಿನಲ್ ಬೋನಸ್ ಏನಾದರೂ ಇದ್ದರೆ ಅದನ್ನು ನಾಮನಿರ್ದೇಶಕರು/ಫಲಾನುಭವಿ/ವಾರಸುದಾರರಿಗೆ ಪಾವತಿಸಲಾಗುವುದು:


ಇಲ್ಲಿ ಮೃತ್ಯುವಿನಲ್ಲಿ ಆಶ್ವಾಸಿತ ಮೊತ್ತವು ಮೂಲ ಆಶ್ವಾಸಿತ ಮೊತ್ತ ಅಥವಾ ಸಿಂಗಲ್ ಪ್ರೀಮಿಯಮ್‌ನ 1.25 ಪಟ್ಟುಗಳು, ಇವುಗಳ ಪೈಕಿ ಅಧಿಕ ಇರುವಂತಹದ್ದಾಗಿದೆ.


ಎಂಡೋವ್‌ಮೆಂಟ್ ಜೊತೆ ವ್ಹೋಲ್ ಲೈಫ್ ಆಯ್ಕೆ

  • ಪಾಲಿಸಿಯು ಊರ್ಜಿತದಲ್ಲಿದ್ದರೆ, ಎಂಡೊಮೆಂಟ್ ಅವಧಿ ಪೂರ್ಣಗೊಳ್ಳುವ ಮೊದಲು:
  • ಎಂಡೋವ್‌ಮೆಂಟ್ ಆಯ್ಕೆಯ ಪಾಯಿಂಟ್ 1ರ ಅನುಸಾರ ಮರಣ ಲಾಭವನ್ನು ನಾಮನಿರ್ದೇಶಕರು/ಫಲಾನುಭವಿ/ವಾರಸುದಾರರಿಗೆ ಪಾವತಿಸಲಾಗುವುದು.
  • ಹೋಲ್ ಲೈಫ್ ಆಯ್ಕೆಯನ್ನು ಆಯ್ದುಕೊಳ್ಳಲಾಗಿದ್ದರೆ, ಎಂಡೊಮೆಂಟ್ ಅವಧಿ ಪೂರ್ಣಗೊಂಡ ನಂತರ
  • ನಾಮನಿರ್ದೇಶಿತರು/ಫಲಾನುಭವಿ/ವಾರಸುದಾರರಿಗೆ ಮೂಲ ಆಶ್ವಾಸಿತ ಮೊತ್ತದ ಲಾಭವನ್ನು ಪಾವತಿಸಲಾಗುತ್ತದೆ.

ಇತರ ಲಾಭಗಳು


ಮುಂದೂಡಿದ ವಾಯಿದೆಯ ಪಾವತಿಯ ಆಯ್ಕೆ:

ನೀವು ನಿಯಮಿತ ಅಂತರದಲ್ಲಿ ಆದಾಯ ಪಡೆಯಬಹುದು. ಎಂಡೋವ್‌ಮೆಂಟ್ ಅವಧಿಯ ಕೊನೆಯಲ್ಲಿ ಪೂರ್ಣ ಆಶ್ವಾಸಿತ ಮೊತ್ತದ ಜೊತೆ ಒಟ್ಟಾಗಿರುವ ಬೋನಸ್‌ಗಳನ್ನು ಪಡೆಯಬಹುದು ಅಥವಾ ಕೇವಲ ಬೋನಸ್ ಪಡೆದುಕೊಂಡು, ಮೂಲ ಆಶ್ವಾಸಿತ ಮೊಬಲಗನ್ನು ಹಿಂದಿರಿಸಿ 5, 10, 15 ಅಥವಾ 20 ವರ್ಷಗಳ ನಿಶ್ಚಿತ ಅವಧಿಯಲ್ಲಿ ನಿಯಮಿತ ಅಂತರದ ಆದಾಯ ರೂಪದಲ್ಲಿ ಪಡೆಯಬಹುದು. ಆದಾಯವನ್ನು ನಿಮ್ಮ ಆಯ್ಕೆಯ ಅಂತರದಲ್ಲಿ (ವಾರ್ಷಿಕ/ಅರ್ಧ-ವಾರ್ಷಿಕ/ತ್ರೈಮಾಸಿಕ/ಮಾಸಿಕ) ಪಾವತಿಸಲಾಗುವುದು.


ಮೂರು ರೈಡರ್ ಆಯ್ಕೆಗಳು -

  • ಎಸ್‌‌ಬಿಐ ಲೈಫ್ - ಪ್ರಿಫರ್ಡ್ ಟರ್ಮ್ ರೈಡರ್ (UIN: 111B014V02): ದುರಾದೃಷ್ಟಕರ ಮೃತ್ಯು ಸಂಭವಿಸಿದ ಪ್ರಸಂಗದಲ್ಲಿ, ಮೂಲ ಪಾಲಿಸಿಯಡಿಯಲ್ಲಿ ಮೃತ್ಯು ಲಾಭಕ್ಕೆ ಹೆಚ್ಚುವರಿಯಾಗಿ ರೈಡರ್ ಆಶ್ವಾಸಿತ ಮೊತ್ತವನ್ನು ಪಾವತಿಸಲಾಗುತ್ತದೆ.
  • ಎಸ್‌‌ಬಿಐ ಲೈಫ್ - ಎಕ್ಸಿಡೆಂಟಲ್ ಡೆತ್ ಬೆನಿಫಿಟ್ ರೈಡರ್ (UIN: 111B015V03): ಅಪಘಾತದ ಕಾರಣ ಮೃತ್ಯು ಸಂಭವಿಸಿದಲ್ಲಿ, ಮೂಲ ಪಾಲಿಸಿಯಡಿಯಲ್ಲಿ ಮೃತ್ಯು ಲಾಭಕ್ಕೆ ಹೆಚ್ಚುವರಿಯಾಗಿ ರೈಡರ್ ಆಶ್ವಾಸಿತ ಮೊತ್ತವನ್ನು ಪಾವತಿಸಲಾಗುತ್ತದೆ.
  • ಎಸ್‌‌ಬಿಐ ಲೈಫ್ - ಎಕ್ಸಿಡೆಂಟಲ್ ಟೋಟಲ್ ಆ್ಯಂಡ್ ಪರ್ಮನೆಂಟ್ ಡಿಸ್ಯಾಬಿಲಿಟಿ ಬೆನಿಫಿಟ್ ರೈಡರ್ (UIN 111B016V03): ಅಪಾಘಾತಗಳ ಬಗ್ಗೆ ಮುಂಚಿತವಾಗಿ ಹೇಳಲಾಗುವುದಿಲ್ಲ. ಅದು ಪೂರ್ಣ ಹಾಗೂ ಖಾಯಂ ಅಶಕ್ತತೆಗೆ ಕಾರಣವಾಗಬಹುದು ಮತ್ತು ಈ ರೈಡರ್ ಇಂತಹ ಅಶಕ್ತತೆಗಳ ವಿರುದ್ಧ ಸಂರಕ್ಷಣೆಯನ್ನು ಒದಗಿಸುತ್ತದೆ. ಎಟಿಪಿಡಿಯ ದುರಾದೃಷ್ಟಕರ ಪ್ರಸಂಗದಲ್ಲಿ ರೈಡರ್ ಆಶ್ವಾಸಿತ ಮೊತ್ತವನ್ನು ಪಾವತಿಸಲಾಗುತ್ತದೆ ಮತ್ತು ಪಾಲಿಸಿ  ಮತ್ತು ಇತರ ಲಾಭಗಳು ಮುಂದುವರಿಯುತ್ತವೆ.

ಪ್ರೀಮಿಯಮ್ಗಳನ್ನು ಪಾವತಿಸಿದಾಗ, ಬೇಸ್ ಕವರ್ಗಳು ಮತ್ತು ರೈಡರ್ಕವರ್ ನಿಮ್ಮಿಂದ ಆಯ್ಕೆ ಮಾಡಲಾದಂತೆ ಅವಧಿಯ ಕೊನೆಯ ತನಕ ಮುಂದುವರಿಯುತ್ತದೆ.

null
**ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ.
#ಮಾಸಿಕ ವಿಧಾನಕ್ಕಾಗಿ, 3 ತಿಂಗಳ ತನಕ ಪ್ರೀಮಿಯಮ್‌ನ್ನು ಮುಂದಾಗಿ ಪಾವತಿಸಬೇಕು. ನವೀಕರಣದ ಪ್ರೀಮಿಯಮ್ ಪಾವತಿ ಕೇವಲ ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ಇಸಿಎಸ್) ಮೂಲಕ ಅಥವಾ  ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್ಸ್  (ಬ್ಯಾಂಕ್ ಅಕೌಂಟಿನಿಂದ ಡೈರೆಕ್ಟ್ ಡೆಬಿಟ್ ಮೂಲಕ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ).
ಮಾಸಿಕ ವೇತನ ಉಳಿತಾಯ ಯೋಜನೆ (ಎಸ್‌ಎಸ್‌ಎಸ್), 2 ತನಕ ತಿಂಗಳ ಪ್ರೀಮಿಯಮ್ ಮುಂದಾಗಿ ಪಾವತಿಸಿರಿ ಮತ್ತು ರಿನೀವಲ್ ಪ್ರೀಮಿಯಮ್ ಪಾವತಿಯನ್ನು ಕೇವಲ ಸಂಬಳದಿಂದ ಕಡಿದು ಪಾವತಿಸುವುದಕ್ಕೆ ಅನುಮತಿಯಿದೆ.

NW/35/ver1/03/22/WEB/KAN

**@4% ಮತ್ತು @8%ರ  ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಎಲ್ಲಾ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಶ್ಯಗಳಾಗಿವೆ. ಬೋನಸ್ ದರಗಳು ಬೋನಸ್ ಸಂಚಯದ ಕಾಲಾವಧಿಯಲ್ಲಿ  ಸ್ಥಿರವಾಗಿವೆ ಎಂದು ಊಹಿಸಲಾಗಿದೆ ಆದರೆ ಕಂಪೆನಿಯ ವಿನಿಯೋಜನೆಯ ಅನುಭವವನ್ನು ಆಧರಿಸಿ ವಾಸ್ತವಿಕ ಬೋನಸ್‌ನಲ್ಲಿ ವ್ಯತ್ಯಾಸವಾಗಬಹುದು. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಪ್ರತಿಫಲಗಳು ಭವಿಷ್ಯದ ವಿನಿಯೋಜನೆಯ ಕಾರ್ಯಾಚರಣೆಯನ್ನೊಳಗೊಂಡು ಅನೇಕ ಅಂಶಗಳನ್ನು ಅವಲಂಬಿಸಿವೆ.

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

ಷರತ್ತುಗಳು ಹಾಗೂ ನಿಬಂಧನೆಗಳ ರೈಡರ್ಸ್‌ ಬಗೆಗಿನ ವಿವರಗಳಿಗೆ, ಯೋಜನೆಯನ್ನು ಖರೀದಿಸುವ ಮೊದಲು ದಯವಿಟ್ಟು ರೈಡರ್‌ ಬ್ರೋಶರನ್ನು ಗಮನದಿಂದ ಓದಿರಿ.


*ತೆರಿಗೆ ಪ್ರಯೋಜನಗಳು:

ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ.ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ  ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ