ಸ್ಮಾರ್ಟ್ ವುಮನ್ ಅಡ್ವಾಂಟೇಜ್ |ಉಳಿತಾಯದೊಂದಿಗೆ ಮಹಿಳಾ ಇನ್ಶುರೆನ್ಸ್ ಪ್ಲಾನ್ - ಎಸ್ ಬಿಐ ಲೈಫ್
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಸ್ಮಾರ್ಟ್ ವುಮನ್ ಅಡ್ವಾಂಟೇಜ್

UIN: 111N106V01

ಯೋಜನೆ ಕೋಡ್: 2C

null

ಮಹಿಳೆಯರು ಚಾಣಾಕ್ಷರಾಗಿರುತ್ತಾರೆ. ಅವರಂತೆಯೇ ಚಾಣಾಕ್ಷವಾದ ಜೀವ ವಿಮೆ ಯೋಜನೆಯನ್ನು ಪ್ರಸ್ತುತಪಡಿಸಲಾಗುತ್ತಿದೆ.

 • ಮಹಿಳೆಯರಿಗಾಗಿ ಮೀಸಲಿರುವ ಯೋಜನೆ
 • ಮೂರು ಪಟ್ಟು ಪ್ರಯೋಜನಗಳು
 • ಆಂತರಿಕ ಪ್ರೀಮಿಯಂ ಮನ್ನಾ ಆಯ್ಕೆ
 • ಉಭಯ ಯೋಜನೆಯ ಆಯ್ಕೆಗಳು
ಮಹಿಳೆಯಾಗಿ ನೀವು, ನಿಮ್ಮ ಆತ್ಮೀಯ ಮತ್ತು ಪ್ರೀತಿಪಾತ್ರರ ಜೊತೆಗೆ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತೀರಿ. ನಿಮಗೆ ನೀವೇ ಹೆಚ್ಚು ಅಗತ್ಯವಿರುವ ರಕ್ಷಣೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಿಕೊಳ್ಳುವ ಕುರಿತು ನೀವು ಗಮನ ಕೇಂದ್ರೀಕರಿಸಿದ್ದೀರಾ?
ಎಸ್‌ಬಿಐ ಲೈಫ್ – ಸ್ಮಾರ್ಟ್ ವುಮನ್ ಅಡ್ವಾಂಟೇಜ್ ಮೂಲಕ ಜೀವ ರಕ್ಷಣೆಯ, ಉಳಿತಾಯದ ಮತ್ತು ಒಬ್ಬಂಟಿ ಮಹಿಳೆಗೆ ಮೀಸಲಿರಿಸಿದ ಯೋಜನೆಯ ಅಡಿಯಲ್ಲಿ ಗಂಭೀರ ಖಾಯಿಲೆ ಪ್ರಯೋಜನದ (CI) ಮೂರು ಪಟ್ಟು ಪ್ರಯೋಜನಗಳನ್ನು ಪಡೆಯಿರಿ. ಈ ಮೂರು ಪಟ್ಟು ಪ್ರಯೋಜನಗಳ ಮೂಲಕ ನಿಮ್ಮ ಕನಸುಗಳನ್ನು ಸಾಕಾರಗೊಳಿಸಿ.

ಈ ಯೋಜನೆ ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದೆ, ಅವುಗಳೆಂದರೆ -
 • ಭದ್ರತೆ - ಯಾವುದೇ ಘಟನೆ ಸಂಭವಿಸಿದ ಸಮಯದಲ್ಲಿ ನಿಮ್ಮ ಕುಟುಂಬವನ್ನು ರಕ್ಷಿಸಲು
 • ವಿಶ್ವಾಸಾರ್ಹತೆ - ಪರಿಪೂರ್ಣ ರಕ್ಷಣೆಯ ಮೂಲಕ
 • ನಮ್ಯತೆ - ಎರಡು ಯೋಜನೆಗಳ ನಡುವೆ ಆಯ್ಕೆ ಮಾಡುವಿಕೆ ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಗು ಜನನ ಸಂಬಂಧಿತ ವೈಪರಿತ್ಯಗಳ ಕುರಿತಾದ ರಕ್ಷಣೆ

ಕೆಳಗಿನ ನಮ್ಮ ಪ್ರಯೋಜನ ಸಚಿತ್ರಣದಲ್ಲಿ ನಿಮ್ಮ ವೈಯಕ್ತಿಕ ಮತ್ತು ಪಾಲಿಸಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಿ, ಮತ್ತು ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯನ್ನು ಭದ್ರಗೊಳಿಸಿ.

ಜಗತ್ತಿನಲ್ಲಿ ಸ್ವಾವಲಂಬಿಯಾಗಿ ಬದುಕಿ.

ಮುಖ್ಯಾಂಶಗಳು

null

ಪಾರ್ಟಿಸಿಪೇಟಿಂಗ್ ಇಂಡಿವಿಜುವಲ್ ಟ್ರೆಡಿಶನಲ್ ಎಂಡೋಮೆಂಟ್ ಪ್ಲಾನ್

ಸಮತಾ ಅವರು 30 ವರ್ಷದ ಮಾರ್ಕೆಟಿಂಗ್ ಸಲಹೆಗಾರರಾಗಿದ್ದು, ಈ ಯೋಜನೆಯ ಮೂಲಕ ಅವರು ತಮ್ಮ ಭವಿಷ್ಯವನ್ನು ಮತ್ತು ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿದ ಗಂಭೀರ ಖಾಯಿಲೆ ಕುರಿತ ಅವರ ಆರೋಗ್ಯ ಕಾಳಜಿಯ ಅಗತ್ಯತೆಗಳನ್ನು ಕೂಡಾ ಭದ್ರಗೊಳಿಸಿದ್ದಾರೆ.

ಎಸ್‌ಬಿಐ ಲೈಫ್ – ಸ್ಮಾರ್ಟ್ ವುಮನ್ ಅಡ್ವಾಂಟೇಜ್ ಮೂಲಕ ವಾಯಿದೆ ಪ್ರಯೋಜನೆಗಳ ಜೊತೆಗೆ ವ್ಯಾಪಕವಾದ ರಕ್ಷಣೆಯನ್ನು ಸ್ವೀಕರಿಸಲು ಈ ಯೋಜನೆಗೆ ನೀವು ಕೂಡಾ ನೋಂದಾಯಿಸಿಕೊಳ್ಳಬಹುದು.

Name:

DOB:

Gender:

Female

Discount:

Staff None

Kerala Resident:

Yes No

Let's finalize the policy duration you are comfortable with...

Policy Term

10 Years
15 Years

Plan

Platinum
Gold

A little information about the premium options...

Premium Frequency

Basic Sum Assured

2,00,000 10,00,000

Sum Assured Multiplier Factor


Let's finalize the rider options...

APC & CA Option:

APC & CA Sum Assured

Critical Illness Sum Assured


Reset

Base Sum Assured

CI Sum Assured


Premium frequency

Premium amount
(excluding taxes)


Premium Payment Term


Policy Term


Maturity Benefit

At assumed rate of returns** @ 4%


or
@ 8%

Give a Missed Call

ವೈಶಿಷ್ಟ್ಯಗಳು

 • ಜೀವ ವಿಮಾ ರಕ್ಷಣೆ
 • ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ದೊಡ್ಡ ಹಂತದ ಸಿಐನ ಈವೆಂಟ್‌ನಲ್ಲಿ ಆಂತರಿಕ ಪ್ರೀಮಿಯಂ ಮನ್ನಾ ಪ್ರಯೋಜನ
 • ವಾಯಿದೆಯಲ್ಲಿನ ವಿಮಾ ಮೊತ್ತದ ಜೊತೆಗೆ, ನಿಯಮಿತ ಬೋನಸ್‌ಗಳು (ಯಾವುದಾದರೂ ಇದ್ದರೆ)
 • ಎರಡು ಯೋಜನೆ ಆಯ್ಕೆಗಳು* – ಗೋಲ್ಡ್ ಮತ್ತು ಪ್ಲಾಟಿನಮ್
 • ಮರಣ ರಕ್ಷಣೆ ಮತ್ತು ಸಿಐ ರಕ್ಷಣೆಯ ಮಟ್ಟವನ್ನು ಆಯ್ಕೆ ಮಾಡಿ
 • ಹೆಚ್ಚುವರಿ ಗರ್ಭಧಾರಣೆಯ ಸಮಸ್ಯೆಗಳು ಮತ್ತು ಜನ್ಮಜಾತ ವೈಪರೀತ್ಯಗಳ (APC ಮತ್ತು CA)ಆಯ್ಕೆಗಳು

* ಆಯ್ಕೆ ಮಾಡಿದ ಯೋಜನೆಯ ಅನುಗುಣವಾಗಿ ನಿರ್ದಿಷ್ಟ ಗಂಭೀರ ಕಾಯಿಲೆಗೆ (CA) ರಕ್ಷಣೆ ನೀಡಲಾಗುತ್ತದೆ. ಆರಂಭದಲ್ಲಿ ಒಮ್ಮೆ ಯೋಜನೆಯನ್ನು ಆಯ್ಕೆ ಮಾಡಿದರೆ ಪಾಲಿಸಿ ಅವಧಿಯ ಸಮಯದಲ್ಲಿ ಬದಲಾಯಿಸಲು ಸಾಧ್ಯವಿಲ್ಲ.

ಪ್ರಯೋಜನಗಳು

ಸುರಕ್ಷತೆ

 • ನಿಮ್ಮ ಕುಟುಂಬದ ಆರ್ಥಿಕ ಅಗತ್ಯತೆಗಳನ್ನು ಖಚಿತಪಡಿಸಿಕೊಳ್ಳಿ
 • ನಿಮ್ಮ ಆರೋಗ್ಯವನ್ನು ರಕ್ಷಿಸಲು ಆರ್ಥಿಕ ಭದ್ರತೆ
 • ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಗು ಜನನಕ್ಕೆ ಸಂಬಂಧಿಸಿ ಉದ್ಭವಿಸುವ ವೈಪರಿತ್ಯಗಳಂತಹ ಯಾವುದೇ ಸಂದರ್ಭದಲ್ಲಿ ಹೆಚ್ಚಿನ ರಕ್ಷಣೆಯನ್ನು ಪಡೆಯಿರಿ

ವಿಶ್ವಾಸಾರ್ಹತೆ

 • ರಕ್ಷಣೆಯ, ಉಳಿತಾಯದ ಮತ್ತು ಸಿಐ ಪ್ರಯೋಜನಗಳ ಪರಿಪೂರ್ಣ, ಮೂರು ಪಟ್ಟು ಪ್ರಯೋಜನಗಳನ್ನು ಆನಂದಿಸಿ
 • ದೊಡ್ಡ ಪ್ರಮಾಣದ ಗಂಭೀರ ಕಾಯಿಲೆಯ ಸಂದರ್ಭದಲ್ಲಿ, ಮುಂದಿನ ಪ್ರೀಮಿಯಂ ಪಾವತಿಗಳ ಯಾವುದೇ ಅಗತ್ಯವಿಲ್ಲದೆಯೇ ಯೋಜನೆಯ ಪ್ರಯೋಜನಗಳನ್ನು ಸ್ವೀಕರಿಸುವುದನ್ನು ಮುಂದುವರಿಸಿ.

ಹೊಂದಿಕೊಳ್ಳುವಿಕೆ

 • ನಿಮ್ಮ ಆಯ್ಕೆಯ ಪ್ರಕಾರ CI ಅಥವಾ ಮರಣ ರಕ್ಷಣೆಯ ಪ್ರಮಾಣವನ್ನು ಆಯ್ಕೆ ಮಾಡಿ
 • ಮಹಿಳಾ ಸಂಬಂಧಿ CI ಗಾಗಿ ಅಥವಾ ಮಹಿಳಾ ಸಂಬಂಧಿ ಹಾಗೂ ಇತರ ರಕ್ಷಣೆಯ CI ಎರಡಕ್ಕೂ ಆಯ್ಕೆ ಮಾಡಲು ಗೋಲ್ಡ್ ಮತ್ತು ಪ್ಲಾಟಿನಮ್ ಎರಡು ವಿಭಿನ್ನ ಯೋಜನೆಯ ನಡುವೆ ಆಯ್ಕೆ ಮಾಡಿ

ತೆರಿಗೆ ಪ್ರಯೋಜನಗಳನ್ನು ಪಡೆಯಿರಿ

ಮುಕ್ತಾಯದ ಪ್ರಯೋಜನ (ಚಾಲ್ತಿಯಲ್ಲಿರುವ ಪಾಲಿಸಿಗಳಿಗಾಗಿ):

ವಾಯಿದೆಯವರೆಗೆ ಜೀವ ವಿಮಾದಾರರು ಬದುಕಿದಲ್ಲಿ, ಮೂಲ ವಿಮಾ ಮೊತ್ತ* + ವಿನಿಯೋಜಿಸಿದ ಸರಳ ಹಿಮ್ಮರಳಿಸುವ ಬೋನಸ್ + ಅಂತಿಮ ಬೋನಸ್, ಯಾವುದಾದರೂ ಇದ್ದರೆ, ಪಾವತಿಸಲಾಗುತ್ತದೆ.
* ಇಲ್ಲಿ, ಮೂಲ ವಿಮಾ ಮೊತ್ತವು ವಾಯಿದೆಯಲ್ಲಿ ಖಾತರಿಪಡಿಸಿದ ವಿಮಾ ಮೊತ್ತಕ್ಕೆ ಸಮವಾಗಿರುತ್ತದೆ.

 

ಮರಣ ಪ್ರಯೋಜನ (ಚಾಲ್ತಿಯಲ್ಲಿರುವ ಪಾಲಿಸಿಗಳಿಗಾಗಿ):

ಜೀವ ವಿಮಾದಾರರ ಅನಿರೀಕ್ಷಿತ ಮರಣ ಸಂಭವಿಸಿದಲ್ಲಿ, ‘ಮರಣ ನಂತರದ ವಿಮಾ ಮೊತ್ತ’ ಇದರೊಂದಿಗೆ ವಿನಿಯೋಜಿಸಿದ ಸರಳ ಹಿಮ್ಮರಳಿಸುವ ಬೋನಸ್ ಜೊತೆಗೆ ಅಂತಿಮ ಬೋನಸ್ (ಯಾವುದಾದರೂ ಇದ್ದರೆ) ಅಥವಾ ಪಾವತಿಸಿದ ಪ್ರೀಮಿಯಂಗಳ 105%, ಯಾವುದು ಹೆಚ್ಚು ಇರುತ್ತದೆಯೋ ಅದನ್ನು ಫಲಾನುಭವಿಗೆ ಪಾವತಿಸಲಾಗುತ್ತದೆ. ಇಲ್ಲಿ, ಮರಣ ನಂತರದ ವಿಮಾ ಮೊತ್ತವು ಕೆಳಗಿನವುಗಳಷ್ಟು ಹೆಚ್ಚು ಇರುತ್ತದೆ:

 • ವಾರ್ಷಿಕ ಪ್ರೀಮಿಯಂನ 10 ಪಟ್ಟು,
 • ವಾಯಿದೆ ನಂತರ ಖಾತರಿಪಡಿಸಿದ ವಿಮಾ ಮೊತ್ತ,
 • ಮರಣ ನಂತರ ಪಾತಿಸಲಾಗುವ ವಿಮಾದಾರರ ಪರಿಪೂರ್ಣ ಮೊತ್ತ, SAMF x ವಾಯಿದೆಯಲ್ಲಿನ ಮೂಲ ವಿಮಾ ಮೊತ್ತ.

ಮರಣ ಪ್ರಯೋಜನದ ಪಾವತಿಯ ನಂತರ ಪಾಲಿಸಿಯನ್ನು ಅಂತ್ಯಗೊಳಿಸಬಹುದು.

ಗಂಭೀರ ಕಾಯಿಲೆ ಪ್ರಯೋಜನ (ಚಾಲ್ತಿಯಲ್ಲಿರುವ ಪಾಲಿಸಿಗಳಿಗಾಗಿ):

ತೀವ್ರತೆಯ ಪ್ರಮಾಣವನ್ನು ಆಧರಿಸಿ ಪಾತಿಸಲಾಗುತ್ತದೆ:-

 • CI ನ ಸಣ್ಣ ಪ್ರಮಾಣದಲ್ಲಿ, CI ವಿಮಾ ಮೊತ್ತದ 25% ಪ್ರಯೋಜನವನ್ನು ಪಾವತಿಸಲಾಗುತ್ತದೆ.
 • CI ನ ದೊಡ್ಡ ಪ್ರಮಾಣದಲ್ಲಿ, ಪಾಲಿಸಿಯ ಅಡಿಯಲ್ಲಿ ಹಿಂದೆ ಪಾವತಿಸಿದ ಯಾವುದೇ CI ಕ್ಲೈಮ್‌ಗಳನ್ನು ಕಡಿತಗೊಳಿಸಿ CI ವಿಮಾ ಮೊತ್ತದ 100% ಪ್ರಯೋಜನವನ್ನು ಪಾವತಿಸಲಾಗುತ್ತದೆ.
 • CI ನ ಸುಧಾರಿತ ಪ್ರಮಾಣದಲ್ಲಿ, ಪಾಲಿಸಿಯ ಅಡಿಯಲ್ಲಿ ಹಿಂದೆ ಪಾವತಿಸಿದ ಯಾವುದೇ CI ಕ್ಲೈಮ್‌ಗಳನ್ನು ಕಡಿತಗೊಳಿಸಿ CI ವಿಮಾ ಮೊತ್ತದ 150% ಪ್ರಯೋಜನವನ್ನು ಪಾವತಿಸಲಾಗುತ್ತದೆ.

ಇಲ್ಲಿ CI ವಿಮಾ ಮೊತ್ತ = SAMF x ವಾಯಿದೆ ನಂತರ ಖಾತರಿಪಡಿಸಿದ ವಿಮಾ ಮೊತ್ತ.
CI ವಿಮಾ ಮೊತ್ತ ಮತ್ತು ಮರಣ ನಂತರದ ವಿಮಾದಾರರ ಪರಿಪೂರ್ಣ ಮೊತ್ತಕ್ಕೆ ಸಮ.

ಅಂತರ್ನಿರ್ಮಿತ ಪ್ರಯೋಜನ:

 • ಪ್ರೀಮಿಯಂ ಮನ್ನಾ ಪ್ರಯೋಜನ (ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ): CI ನ ದೊಡ್ಡ ಪ್ರಮಾಣದ ಅಡಿಯಲ್ಲಿ ಒಂದು ಬಾರಿ ಕ್ಲೈಮ್ ಕಂಪನಿಯ ಮೂಲಕ ಅಂಗೀಕರಿಸಲ್ಪಟ್ಟಲ್ಲಿ, APC ಮತ್ತು CA ಆಯ್ಕೆ ಪ್ರೀಮಿಯಂ ಯಾವುದಾದರೂ ಇದ್ದರೆ ಅವುಗಳನ್ನು ಒಳಗೊಂಡಂತೆ ಪಾಲಿಸಿಗಾಗಿನ ಎಲ್ಲ ಭವಿಷ್ಯದ ಪ್ರೀಮಿಯಂಗಳನ್ನು, ವೈದ್ಯಕೀಯ ಪರಿಸ್ಥಿತಿಯ ರೋಗನಿರ್ಣಯ ದಿನಾಂಕದಿಂದ ಉಳಿದ ಪಾಲಿಸಿ ಅವಧಿಗಾಗಿ ಮನ್ನಾ ಮಾಡಲಾಗುತ್ತದೆ. ಉಳಿದ ಪಾಲಿಸಿ ಪ್ರಯೋಜನಗಳು ಪಾಲಿಸಿ ಅವಧಿಯಾದ್ಯಂತ ಮುಂದುವರಿಯುತ್ತವೆ.
 • ಹೆಚ್ಚುವರಿ ಗರ್ಭಧಾರಣೆಯ ಸಮಸ್ಯೆಗಳು ಮತ್ತು ಜನ್ಮಜಾತ ವೈಪರೀತ್ಯಗಳು (APC ಮತ್ತು CA) ಆಯ್ಕೆ:ಗರ್ಭಧಾರಣೆಯ ಸಂಬಂಧಿತ ಸಮಸ್ಯೆಗಳು ಮತ್ತು ಮಗು ಜನನ ಸಂಬಂಧಿ ವೈಪರೀತ್ಯಗಳಿಗೆ ರಕ್ಷಣೆಯನ್ನು ಒದಗಿಸಲಾಗುತ್ತದೆ ವಿಮಾ ಮೊತ್ತವು ಮೂಲ ವಿಮಾ ಮೊತ್ತದ 20% ನಿಗಧಿಪಡಿಸಲಾಗಿರುತ್ತದೆ. ಈ ಪ್ರಯೋಜನವನ್ನು ಆಯ್ಕೆಯ ಅವಧಿಯ ಸಮಯದಲ್ಲಿ ಅಥವಾ 45 ವರ್ಷಗಳ ವಯಸ್ಸಿನವರೆಗೆ ಮೊದಲ ಆದ್ಯತೆಯ ಮೇಲೆ ಒಂದು ಬಾರಿ ಮಾತ್ರ ಪಾವತಿಸಲಾಗುತ್ತದೆ. ಈ ಆಯ್ಕೆಗಾಗಿ ಪಾವತಿಸಲಾಗುವ ಪ್ರೀಮಿಯಂ ಅನ್ನು ಕೂಡಾ ತಡೆಯಲಾಗುತ್ತದೆ.

~ತೆರಿಗೆ ಪ್ರಯೋಜನಗಳು:

 • ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ನೀವು ಅರ್ಹರಾಗಿದ್ದು, ಈ ಕಾನೂನುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನೀವು ಭೇಟಿ ಮಾಡಬಹುದು:
  http://www.sbilife.co.in/sbilife/content/21_3672#5. ವಿವರಗಳಿಗೆ ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.

ಗಂಭೀರ ಕಾಯಿಲೆಯ (CI) ರಕ್ಷಣೆ ಮತ್ತು APC ಹಾಗೂ CA ಆಯ್ಕೆ, ವ್ಯಾಖ್ಯಾನಗಳು, ಕಾಯುವ ಸಮಯ, ಬಹಿಷ್ಕರಣಗಳು ಮುಂತಾದ ರಕ್ಷಣೆಯ ಕುರಿತ ವಿವರಗಳಿಗಾಗಿ, ದಯವಿಟ್ಟು ಮಾರಾಟ ಕೈಪಿಡಿಯನ್ನು ನೋಡಿ.
ಇತರ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಮಾರಾಟವನ್ನು ಪೂರ್ಣಗೊಳಿಸುವ ಮೊದಲು ದಯವಿಟ್ಟು ಮಾರಾಟ ಕೈಪಿಡಿಯನ್ನು ಗಮನವಿಟ್ಟು ಓದಿರಿ.
ಅಪಾಯದ ಅಂಶಗಳು, ಎಸ್‌ಬಿಐ ಲೈಫ್ - ಸ್ಮಾರ್ಟ್ ವುಮನ್ ಅಡ್ವಾಂಟೇಜ್‌ನ ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಮುಂದಿನ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿರಿ.
**ಎಲ್ಲಾ ಉಲ್ಲೇಖದ ವಯಸ್ಸು ಕೊನೆಯ ಜನ್ಮದಿನದ ಪ್ರಕಾರ ಇರತಕ್ಕದ್ದು.
## ಮಾಸಿಕ ಮೋಡ್‌ಗಾಗಿ, ಮುಂಚಿತವಾಗಿಯೆ 3 ತಿಂಗಳ ಪ್ರೀಮಿಯಮ್ ಅನ್ನು ಪಾವತಿಸಲಾಗುವುದು ಮತ್ತು ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಂ (ECS) ಅಥವಾ ಸ್ಟ್ಯಾಂಡಿಂಗ್ ಸೂಚನೆಗಳ ಮೂಲಕ ಪ್ರೀಮಿಯಮ್ ಪಾವತಿಯನ್ನು ನವೀಕರಿಸಲಾಗುವುದು (ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಡೈರೆಕ್ಟ್ ಡೆಬಿಟ್ ಮಾಡುವ ಮೂಲಕ ಪಾವತಿಯನ್ನು ಮಾಡಲಾಗುತ್ತದೆ) ಮಾಸಿಕ ವೇತನ ಉಳಿತಾಯ ಸ್ಕೀಮ್‌ಗಾಗಿ (SSS), ಮುಂಚಿತವಾಗಿಯೆ 2 ತಿಂಗಳ ಪ್ರೀಮಿಯಮ್ ಪಾವತಿಸಲಾಗುವುದು ಹಾಗೂ ವೇತನ ಕಡಿತಗೊಳಿಸುವಿಕೆಯ ಮೂಲಕ ನವೀಕೃತ ಪ್ರೀಮಿಯಮ್ ಪಾವತಿಯನ್ನು ಅನುಮತಿಸಲಾಗುವುದು.
^ APC ಮತ್ತು CA ಆಯ್ಕೆಯನ್ನು ಆಯ್ಕೆ ಮಾಡಿದ ಸಂದರ್ಭಗಳಲ್ಲಿ, ಪಾಲಿಸಿ ಅವಧಿಯನ್ನು ಸೂಕ್ತವಾಗಿ ಆಯ್ಕೆ ಮಾಡಬೇಕಾಗುತ್ತದೆ, ಆದ್ದರಿಂದ ಆಯ್ಕೆಯ ವಾಯಿದೆಯಲ್ಲಿನ ಗರಿಷ್ಠ ವಯಸ್ಸನ್ನು ಉಲ್ಲಂಘಿಸಲಾಗುವುದಿಲ್ಲ.

2C.ver.03-10/17 WEB KAN

**ಕ್ರಮವಾಗಿ ವಾರ್ಷಿಕ @4 ಮತ್ತು @8ರ ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ. ಬೋನಸ್ ದರಗಳು ಬೋನಸ್ ಸಂಚಯದ ಕಾಲಾವಧಿಯಲ್ಲಿ ಸ್ಥಿರವಾಗಿವೆ ಎಂದು ಊಹಿಸಲಾಗಿದೆ ಆದರೆ ಕಂಪೆನಿಯ ವಿನಿಯೋಜನೆಯ ಅನುಭವವನ್ನು ಆಧರಿಸಿ ವಾಸ್ತವಿಕ ಬೋನಸ್‌ನಲ್ಲಿ ವ್ಯತ್ಯಾಸವಾಗಬಹುದು. (ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ). ಪ್ರತಿಫಲಗಳು ಭವಿಷ್ಯದ ವಿನಿಯೋಜನೆಯ ಕಾರ್ಯಾಚರಣೆಯನ್ನೊಳಗೊಂಡು ಅನೇಕ ಅಂಶಗಳನ್ನು ಅವಲಂಬಿಸಿದೆ.

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್‌ಸೈಟ್‌ಗೆ ನೀವು ಭೇಟಿ ನೀಡಬಹುದು.ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

ಟೋಲ್‌‌ ಫ್ರೀ ಸಂಖ್ಯೆಗೆ ಕರೆ ಮಾಡಿ

1800 267 9090(ಪ್ರತಿದಿನ ಬೆಳಿಗ್ಗೆ 9.00 ರಿಂದ ರಾತ್ರಿ 9.00 ವರೆಗೆ ಲಭ್ಯ)

ನಮಗೆ ಇಮೇಲ್ ಮಾಡಿ

info@sbilife.co.in