ಒಂದು ವ್ಯಕ್ತಿಗತ, ನಾನ್-ಲಿಂಕ್ಡ್ , ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್ ಉಳಿತಾಯ ಉತ್ಪನ್ನವಾಗಿದೆ.
ನಮ್ಮ ಸ್ವಂತ ಕನಸುಗಳು ಮತ್ತು ಆಕಾಂಕ್ಷೆಗಳು ಪ್ರಾಮುಖ್ಯ ಎಂದು ನೆನಪಿಟ್ಟುಕೊಳ್ಳುವುದು ಅತೀ ಮುಖ್ಯವಾಗಿದೆ. ಅವನ್ನು ನನಸಾಗಿಸುವುದು ನಮಗೆ ಮಾತ್ರವಲ್ಲ ನಮ್ಮ ಪ್ರಿಯ ಜನರಿಗೂ ಕೂಡಾ ಆನಂದವನ್ನು ನೀಡುವ ಉದ್ದೇಶವನ್ನು ನಾವು ಹೊಂದಿದ್ದವೆ. ಕನಸಿನ ಪ್ರವಾಸವಾಗಿರಲಿ, ಒಂದು ಹವ್ಯಾಸವನ್ನು ಕಾರ್ಯಗತಗೊಳಿಸುವುದಿರಲ್ಲಿ ಅಥವಾ ನಾವು ಬಯಸುವ ವಸ್ತುಗಳನ್ನು ಖರೀದಿಸುವುದೇ ಆಗಿರಲಿ, ಹೀಗೆ ನಮ್ಮದೇ ಆದ ಗುರಿಗಳಿಗೆ ಆದ್ಯತೆ ನೀಡುವ ಬಗ್ಗೆ ಸಮಯ ಕಳೆಯುವುದು ಹೆಚ್ಚು ಸಮತೋಲನದ ಹಾಗೂ ಸಮಾಧನಕಾರ ಜೀವನಕ್ಕೆ ದಾರಿಯಾಗುತ್ತದೆ.
ಎಸ್‌ಬಿಐ ಲೈಫ್‌ನಲ್ಲಿ ನಿಮ್ಮ ಅವಶ್ಯಕತೆಯಂತೆ ರಚಿಸಲಾದ ಲೈಫ್ ಇನ್‌ಶೂರೆನ್ಸ್ ಉತ್ಪನ್ನಗಳನ್ನು ಒದಗಿಸಲು ನಾವು ವಚನಬದ್ದರಾಗಿದ್ದೇವೆ. ಉಳಿತಾಯಗಳೊಂದಿಗೆ ನಿಮ್ಮ ಅವಶ್ಯಕತೆಯನ್ನು ಪೂರೈಸಲು ನಾವು ನಿಮಗೆ ಎಸ್‌ಬಿಐ ಲೈಫ್ - ಸ್ಮಾರ್ಟ್ ಬಚಟ್ ಪ್ಲಸ್ ಅನ್ನು ಪರಿಚಯಿಸುತ್ತಿದ್ದು, ಇದು ಒಂದು ವ್ಯಕ್ತಿಗತ, ನಾನ್-ಲಿಂಕ್ಡ್, ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್ ಸೇವಿಂಗ್ಸ್ ಉತ್ಪನ್ನವಾಗಿದೆ. ನೀವು ಉತ್ಪನ್ನದಡಿಯಲ್ಲಿ ಉಪಲಬ್ಧವಿರುವ ಲಾಭಗಳ ಎರಡು ವಿಕಲ್ಪಗಳ ಪೈಕಿ ಒಂದನ್ನು ಆಯ್ದುಕೊಳ್ಳಬಹುದು. ಅಂದರೆ, ಲೈಫ್ ಅಥವಾ ಲೈಫ್ ಪ್ಲಸ್, ಇನ್-ಬಿಲ್ಟ್ ಅಪಘಾತ ಮೃತ್ಯು ಮತ್ತು ಅಪಘಾತ ಸಂಪೂರ್ಣ ಖಾಯಂ ಅಶಕ್ತತೆಯ ಲಾಭದೊಂದಿಗೆ (ಎಡಿ ಮತ್ತು ಎಟಿಪಿಡಿ). ಇದು ಸ್ವತಃ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವನದ ಪ್ರತಿಯೊಂದು ಹಂತದ ಗುರಿಗಳನ್ನು ತಲುಪಲು ನಿಮ್ಮ ಅವಶ್ಯಕತೆಯಂತೆ ನಿಮ್ಮ ಪ್ರೀಮಿಯಮ್ ಪಾವತಿಸುವ ಅವಧಿ ಮತ್ತು ಪಾಲಿಸಿ ಅವಧಿಯನ್ನು ಆಯ್ಕೆ ಮಾಡುವ ಪರಿವರ್ತನೀಯತೆಯನ್ನು ಕೂಡಾ ನೀಡುತ್ತದೆ. ಇದು ಒಂದು ಪಾರ್ಟಿಸಿಪೇಟಿಂಗ್ ಪ್ಲಾನ್ ಆಗಿರುವುದರಿಂದ ರಿವರ್ಶನರಿ ಬೋನಸ್ ಮತ್ತು ಒಂದು ವೇಳೆ ಘೋಷಿಸಲಾದರೆ, ಟರ್ಮಿನಲ್ ಬೋನಸ್ ರೂಪದಲ್ಲಿ ಕಂಪೆನಿಯ 'ಪಾರ್ಟಿಸಿಪೇಟಿಂಗ್ ಲೈಫ್ ಇನ್‌ಶೂರೆನ್ಸ್ ವ್ಯಾಪಾರದಿಂದ’ ಬರುವ ಲಾಭಗಳ ಪಾಲನ್ನು ಪಡೆಯಲು ನೀವು ಅರ್ಹರಿರುತ್ತೀರಿ.
Individual, Non-linked, Participating Endowment Assurance Plan