SBI ಲೈಫ್ ಫ್ಲೆಕ್ಸಿ ಸ್ಮಾರ್ಟ್ ಪ್ಲಸ್ - ವೇರಿಯೇಬಲ್ ಲೈಫ್ ವಿಮೆ ಪಾಲಿಸಿ
SBI Logo

Join Us

Tool Free 1800 22 9090

ಎಸ್‌‌ಬಿಐ ಲೈಫ್‌ - ಫ್ಲೆಕ್ಸಿ ಸ್ಮಾರ್ಟ್ ಪ್ಲಸ್

UIN: 111N093V01

ಯೋಜನೆ ಕೋಡ್: 1M

null

ಖಾತ್ರಿಯುತ ಸಮೃದ್ಧತೆ ಮತ್ತು ಸುರಕ್ಷತೆ.

  • ಎರಡು ಯೋಜನೆ ಆಯ್ಕೆ
  • ಸಂಪತ್ತಿನ ವೃದ್ಧಿ
  • ಭಾಗಶಃ ಹಿಂಪಡೆಯುವಿಕೆ
  • ವಿಮಾ ಮೊತ್ತ ಮತ್ತು ಪಾಲಿಸಿ ಅವಧಿ ಬದಲಾವಣೆಯ ಆಯ್ಕೆ
ಈ ಯೋಜನೆಯು ಒಪ್ಪಂದದ ಮೊದಲ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಆಸ್ತಿಯನ್ನು ಒದಗಿಸುವುದಿಲ್ಲ. 5 ನೇ ಪಾಲಿಸಿ ವರ್ಷದ ಮುಕ್ತಾಯದವರೆಗೆ ಪಾಲಿಸಿದಾರರಿಗೆ ಹೂಡಿಕೆ ಮಾಡಿದ ಹಣವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಜೀವನದ ಬದಲಾವಣೆಗಳಿಗೆ ಹೊಂದಿಕೆಕೊಳ್ಳುವ ಸಾಕಷ್ಟು ಅನುಕೂಲತೆಯನ್ನು ಒದಗಿಸುವ ಜೀವ ವಿಮಾ ಯೋಜನೆ ನಿಮ್ಮ ಬಳಿ ಇದೆಯೇ?

ಎಸ್‌‌ಬಿಐ ಲೈಫ್‌ - ಫ್ಲೆಕ್ಸಿ ಸ್ಮಾರ್ಟ್ ಪ್ಲಸ್ ನಿಮಗೆ ನಿಮ್ಮ ಎಂದೆಂದಿಗೂ ಬದಲಾಗುವ ಅಗತ್ಯತೆಗಳ ಪ್ರಕಾರ ನಿಮ್ಮ ವಿಮಾ ಯೋಜನೆಯನ್ನು ಮಾರ್ಪಡಿಸಲು ಅವಕಾಶ ನೀಡುತ್ತದೆ. ಇದು ನಿಮ್ಮ ಉಳಿತಾಯವು ವರ್ಧಿಸಲು ಸಹಾಯ ಮಾಡುವುದಕ್ಕಾಗಿ ನಿಯಮಿತ ಬೋನಸ್ ಬಡ್ಡಿಯನ್ನು ಸಹ ನೀಡುತ್ತದೆ.

ಯೋಜನೆಯು ಇವುಗಳನ್ನು ನೀಡುತ್ತದೆ -
  • ಭದ್ರತೆ –ನಮ್ಮ ಕುಟುಂಬದ ಹಣಕಾಸು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ
  • ವಿಶ್ವಾಸಾರ್ಹತೆ –ಜಾರಿಯಲ್ಲಿರುವ ಪಾಲಿಸಿಗಳಿಗೆ ಖಾತ್ರಿಯುತ ಕನಿಷ್ಠ ಬೋನಸ್ ಬಡ್ಡಿಯ ದರ.
  • ಅನುಕೂಲತೆ –ನಿಮ್ಮ ಬದಲಾಗುತ್ತಿರುವ ಅಗತ್ಯತೆಗಳ ಪ್ರಕಾರ ನಿಮ್ಮ ಪಾಲಿಸಿ ಅವಧಿ ಮತ್ತು ವಿಮಾ ಮೊತ್ತವನ್ನು ಸರಿಹೊಂದಿಸಿ
  • ಲಿಕ್ವಿಡಿಟಿ – 6ನೇ ಪಾಲಿಸಿ ವರ್ಷದಿಂದ ಯಾವುದೇ ಮುಂಗಾಣಲಾಗದ ವೆಚ್ಚಗಳನ್ನು ಪೂರೈಸಲು ಭಾಗಶಃ ಹಿಂಪಡೆಯುವಿಕೆಗಳು

ಕೆಳಗಿನ ಪ್ರಯೋಜನದ ಉದಾಹರಣೆಯನ್ನು ಪ್ರಯತ್ನಿಸಿ ಮತ್ತು ನಿಮ್ಮ ಭವಿಷ್ಯವನ್ನು ನೀವು ಹೇಗೆ ಸುರಕ್ಷಿತಗೊಳಿಸಬಹುದು ಎಂಬುದನ್ನು ನೋಡಿ.

ಮುಖ್ಯಾಂಶಗಳು

null

ವೈಯಕ್ತಿಕ,ಪಾರ್ಟಿಸಿಪೇಟಿಂಗ್,ಮಾರ್ಪಡಿಸಬಹುದಾದ ವಿಮಾ ಯೋಜನೆ

ವೈಶಿಷ್ಟ್ಯಗಳು

  • ಎರಡು ಯೋಜನೆ ಆಯ್ಕೆಗಳ ನಡುವೆ ಆರಿಸಿಕೊಳ್ಳಿ
  • ಜಾರಿಯಲ್ಲಿರುವ ಪಾಲಿಸಿಗಳಿಗೆ, ಅವಧಿಯಾದ್ಯಂತ ವಾರ್ಷಿಕ 1.00% ದರದಲ್ಲಿ ಖಾತ್ರಿಯುತ ಕನಿಷ್ಠ ಬೋನಸ್ ಬಡ್ಡಿ
  • ನಿಮ್ಮ ವಿಮಾ ಮೊತ್ತವನ್ನು ಮಾರ್ಪಡಿಸಿ ಮತ್ತು ನಿಮ್ಮ ಪಾಲಿಸಿ ಅವಧಿಯನ್ನು ಹೆಚ್ಚಿಸಿ
  • 6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂಪಡೆಯುವಿಕೆಗಳನ್ನು ಪಡೆಯಿರಿ

ಪ್ರಯೋಜನಗಳು

ಸುರಕ್ಷತೆ

  • ಎರಡು ಯೋಜನೆಯ ಆಯ್ಕೆಗಳು – ನಿಮ್ಮ ಕುಟುಂಬದ ಹಣಕಾಸು ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ನಿಮಗೆ ವಿಮಾ ಮೊತ್ತವನ್ನು ಒದಗಿಸಲು ಗೋಲ್ಡ್ ಮತ್ತು ಪ್ಲಾಟಿನಮ್

ವಿಶ್ವಾಸಾರ್ಹತೆ

  • ಹಲವಾರು ವರ್ಷಗಳಲ್ಲಿ ನಿಮ್ಮ ಸಂಪತ್ತನ್ನು ನಿರ್ಮಿಸಿಕೊಳ್ಳಿ ಮತ್ತು ನಿಮ್ಮ ಆರ್ಥಿಕ ಕನಸುಗಳನ್ನು ಪೂರ್ಣಗೊಳಿಸಿ

ಹೊಂದಿಕೊಳ್ಳುವಿಕೆ

  • ನಿಮ್ಮ ಬದಲಾಗುತ್ತಿರುವ ಅಗತ್ಯತೆಗಳ ಪ್ರಕಾರ ವಿಮಾ ಮೊತ್ತವನ್ನು ಹೆಚ್ಚಿಸಿ ಅಥವಾ ಇಳಿಕೆ ಮಾಡಿ
  • ನಿಮ್ಮ ಆಯ್ಕೆಮಾಡಿದ ಪಾಲಿಸಿ ಅವಧಿಯನ್ನು ಹೆಚ್ಚಿಸುವು ಆಯ್ಕೆಯೊಂದಿಗೆ ನಿಮ್ಮ ಸಂಪತ್ತನ್ನು ವರ್ಧಿಸಿ

ಲಿಕ್ವಿಡಿಟಿ

  • ಯಾವುದೇ ಅನಿರೀಕ್ಷಿತ ವೆಚ್ಚಗಳನ್ನು ನಿರ್ವಹಣೆ ಮಾಡುವುದಕ್ಕಾಗಿ 6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂಪಡೆಯುವಿಕೆಗಳನ್ನು ಅನುಮತಿಸಲಾಗುತ್ತದೆ

ತೆರಿಗೆ ಪ್ರಯೋಜನಗಳನ್ನು ಪಡೆಯಿರಿ*

  • ಮರಣದ ಸಂದರ್ಭದಲ್ಲಿ

ವಿಮಾದಾರರು ದುರದೃಷ್ಟಕರವಾಗಿ ಮರಣ ಹೊಂದಿದ ಸಂದರ್ಭದಲ್ಲಿ, ಫಲಾನುಭವಿಯು ಮುಂದಿನ ಪ್ರಯೋಜನವನ್ನು ಸ್ವೀಕರಿಸುತ್ತಾರೆ:

 

ಗೋಲ್ಡ್ ಆಯ್ಕೆಗಾಗಿ: ಅನ್ವಯಿಸಿದ ಪ್ರಕಾರವಾಗಿ ಪಾಲಿಸಿ ಖಾತೆ ಮೌಲ್ಯದ$ ಅಥವಾ ವಿಮಾ ಮೊತ್ತದ ಹೆಚ್ಚು^ / ಪಾವತಿಸಿದ ವಿಮಾ ಮೊತ್ತ^ ಅಥವಾ ಮರಣದ ಕ್ಲೈಮ್ ಸೂಚನೆಯ ದಿನಾಂಕದಂತೆ 105% ಒಟ್ಟು ಪಾವತಿಸಿದ ಪ್ರೀಮಿಯಂ.

^ವಿಮಾ ಮೊತ್ತವನ್ನು 60 ವರ್ಷಕ್ಕಿಂತ ಕೆಳಗಿನ ಸಾವಿನ ಸಮಯದಲ್ಲಿನ ವಯಸ್ಸಿಗೆ ಕಳೆದ 2 ವರ್ಷಗಳಲ್ಲಿ ಮಾಡಲಾದ ಭಾಗಶಃ ಹಿಂಪಡೆಯುವಿಕೆಗಳ ಮಟ್ಟಕ್ಕೆ ಮತ್ತು 60 ವರ್ಷಗಳಿಗಿಂತ ಮೇಲಿನ ಮರಣದ ಸಮಯದಲ್ಲಿನ ವಯಸ್ಸಿಗೆ 58 ವರ್ಷಗಳಿಗಿಂತ ನಂತರ ಮಾಡಲಾದ ಎಲ್ಲಾ ಭಾಗಶಃ ಹಿಂಪಡೆಯುವಿಕೆಗಳಿಗೆ ಕಡಿಮೆಗೊಳಿಸಲಾಗುತ್ತದೆ.

 

ಪ್ಲಾಟಿನಂ ಆಯ್ಕೆಗೆ: ಅನ್ವಯಿಸಿದ ಪ್ರಕಾರವಾಗಿ ಪಾಲಿಸಿ ಖಾತೆ ಮೌಲ್ಯದ$ ಜೊತೆಗೆ ವಿಮಾ ಮೊತ್ತ / ಪಾವತಿಸಿದ ವಿಮಾ ಮೊತ್ತ ಅಥವಾ ಮರಣದ ಕ್ಲೈಮ್ ಸೂಚನೆಯ ದಿನಾಂಕದಂತೆ 105% ಒಟ್ಟು ಪಾವತಿಸಿದ ಪ್ರೀಮಿಯಂಗಳು.

  • ಜೀವಂತವಿರುವಾಗ

ವಾಯಿದೆಯ ಪ್ರಯೋಜನ: ವಾಯಿದೆಯ ಸಂದರ್ಭದಲ್ಲಿ, ಪಾಲಿಸಿದಾರರು ಯಾವುದೇ ಟರ್ಮಿನಲ್ ಬೋನಸ್ ಬಡ್ಡಿ ದರದ ಜೊತೆಗೆ ಪಾಲಿಸಿ ಖಾತೆ ಮೌಲ್ಯಕ್ಕೆ$ ಅರ್ಹರಾಗಿರುತ್ತಾರೆ, ಇದನ್ನು ವಾಯಿದೆ ದಿನಾಂಕದಂದು ಲೆಕ್ಕಾಚಾರ ಮಾಡಲಾಗುತ್ತದೆ ಮತ್ತು ವಾಯಿದೆಯ ಸಂದರ್ಭದಲ್ಲಿ ಒಟ್ಟು ಮೊತ್ತವಾಗಿ ಪಾವತಿಸಲಾಗುತ್ತದೆ.

ಪಾಲಿಸಿ ಖಾತೆ ಮೌಲ್ಯ

ಪಾಲಿಸಿ ಖಾತೆಯು ನಿಮಗೆ ಸೇರಿರುವ ಫಂಡ್ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಪಾಲಿಸಿ ಖಾತೆಗೆ ಪಾವತಿಸಿದ ಪ್ರೀಮಿಯಂಗಳು, ಪಾಲಿಸಿಯ ಅಡಿಯಲ್ಲಿನ ಎಲ್ಲಾ ಪ್ರೀಮಿಯಂ ನಿಗದಿಪಡಿಸುವಿಕೆ ವೆಚ್ಚದ ಒಟ್ಟು ಮೊತ್ತವನ್ನು ಕೆಳಗೆ ತಿಳಿಸಿದ ಸೇರ್ಪಡೆಯ ಪ್ರಕಾರ ಸಂದಾಯ ಮಾಡಲಾಗುತ್ತದೆ. ಇತರ ಎಲ್ಲಾ ವೆಚ್ಚಗಳನ್ನು ಪಾಲಿಸಿ ಖಾತೆಯ ಮೌಲ್ಯದಿಂದ ಮರುಪಡೆಯಲಾಗುತ್ತದೆ. ಎಲ್ಲಾ ಹಿಂಪಡೆಯುವಿಕೆಗಳು, ಮಾಡಲಾದ ಪೇಔಟ್‌ಗಳು ಇತ್ಯಾದಿಗಳನ್ನು ನಿಮ್ಮ ಪಾಲಿಸಿ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.

ಪಾಲಿಸಿ ಖಾತೆಗೆ ಅನ್ವಯಿಸಲ್ಪಡುವ ಸೇರ್ಪಡೆಗಳ ವಿವಿಧ ಪದರಗಳನ್ನು ಕೆಳಗೆ ತಿಳಿಸಲಾಗಿದೆ -

  • ಯೋಜನೆಗಾಗಿ ಖಾತ್ರಿಯುತ ಕನಿಷ್ಠ ಬೋನಸ್ ಬಡ್ಡಿ ದರವು ಜಾರಿಯಲ್ಲಿರುವ ಪಾಲಿಸಿಗಳಿಗೆ ಸಂಪೂರ್ಣ ಅವಧಿಗಾಗಿ ವಾರ್ಷಿಕ 1.00% ಆಗಿರುತ್ತದೆ
  • ಮೇಲಿನವುಗಳ ಜೊತೆಗೆ, ಸ್ವತ್ತುಗಳು ಮತ್ತು ಬಾಧ್ಯತೆಗಳ ಶಾಸನಬದ್ಧ ಲೆಕ್ಕಾಚಾರದ ಆಧಾರದಿಂದ ದೊರಕುವ ಸರ್‌ಪ್ಲಸ್‌ ಆಧರಿಸಿ ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಶೂನ್ಯವಲ್ಲದ ಧನಾತ್ಮಕ ನಿಯಮಿತ ಬೋನಸ್ ಬಡ್ಡಿ ದರವನ್ನು ಘೋಷಿಸಲಾಗುತ್ತದೆ.
  • ಪ್ರತಿ ಹಣಕಾಸು ವರ್ಷದ ಪ್ರಾರಂಭದಲ್ಲಿ ಮಧ್ಯಂತರ ಬೋನಸ್ ಬಡ್ಡಿ ದರವನ್ನು ಘೋಷಿಸಲಾಗುತ್ತದೆ ಮತ್ತು ಇದು ಹಣಕಾಸು ವರ್ಷದಲ್ಲಿ ಅಸ್ತಿತ್ವದಲ್ಲಿರುವ ಪಾಲಿಸಿಗಳಿಗೆ ಅನ್ವಯಿಸುತ್ತದೆ. ವರ್ಷದ ಕೊನೆಯಲ್ಲಿ ಘೋಷಿಸಲಾಗುವ ನಿಯಮಿತ ಬೋನಸ್ ಬಡ್ಡಿ ದರವು ಮಧ್ಯಂತರ ಬೋನಸ್ ಬಡ್ಡಿ ದರಕ್ಕಿಂತ ಕಡಿಮೆಯಾಗಿರುವುದಿಲ್ಲ.
  • ಪಾಲಿಸಿಯಿಂದ ನಿರ್ಗಮಿಸುವ ಸಮಯದಲ್ಲಿ (ವಾಯಿದೆ/ಮರಣ/ಹಿಂತಿರುಗಿಸುವಿಕೆ), ಟರ್ಮಿನಲ್ ಬೋನಸ್ ಬಡ್ಡಿ ದರವನ್ನು ಪಾವತಿಸಲಾಗಬಹುದು.
 

ತೆರಿಗೆ ಪ್ರಯೋಜನಗಳು*

ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ನೀವು ಅರ್ಹರಾಗಿದ್ದು, ಈ ಕಾನೂನುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ವೆಬ್‌ಸೈಟ್‌ಗೆ ನೀವು ಭೇಟಿ ಮಾಡಬಹುದು: http://www.sbilife.co.in/sbilife/content/21_3672#5. ವಿವರಗಳಿಗೆ ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.

ಅಪಾಯದ ಅಂಶಗಳು, ಎಸ್‌ಬಿಐ ಲೈಫ್ - ಫ್ಲೆಕ್ಸಿ ಸ್ಮಾರ್ಟ್ ಪ್ಲಸ್ ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಮುಂದಿನ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿರಿ.
null
^ಎಲ್ಲಾ ಉಲ್ಲೇಖದ ವಯಸ್ಸು ಕೊನೆಯ ಜನ್ಮದಿನದ ಪ್ರಕಾರ ಇರತಕ್ಕದ್ದು.
## ಮಾಸಿಕ ವಿಧಾನಕ್ಕೆ, ಮುಂಚಿತವಾಗಿ 3 ತಿಂಗಳುಗಳ ಪ್ರೀಮಿಂಯ ಅನ್ನು ಪಾವತಿಸಬೇಕು ಮತ್ತು ನವೀಕರಣದ ಪ್ರೀಮಿಂಯ ಪಾವತಿಯನ್ನು ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಂ (ECS), ಕ್ರೆಡಿಟ್ ಕಾರ್ಡ್, ಡೈರೆಕ್ಟ್ ಡೆಬಿಟ್ ಮತ್ತು SI-EFT ಮೂಲಕ ಮಾತ್ರ ಅನುಮತಿಸಲಾಗುತ್ತದೆ.

1M.ver.04-10/17 WEB KAN

**ಕ್ರಮವಾಗಿ ವಾರ್ಷಿಕ @4 ಮತ್ತು @8ರ ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ. ಬೋನಸ್ ದರಗಳು ಬೋನಸ್ ಸಂಚಯದ ಕಾಲಾವಧಿಯಲ್ಲಿ ಸ್ಥಿರವಾಗಿವೆ ಎಂದು ಊಹಿಸಲಾಗಿದೆ ಆದರೆ ಕಂಪೆನಿಯ ವಿನಿಯೋಜನೆಯ ಅನುಭವವನ್ನು ಆಧರಿಸಿ ವಾಸ್ತವಿಕ ಬೋನಸ್‌ನಲ್ಲಿ ವ್ಯತ್ಯಾಸವಾಗಬಹುದು. (ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ). ಪ್ರತಿಫಲಗಳು ಭವಿಷ್ಯದ ವಿನಿಯೋಜನೆಯ ಕಾರ್ಯಾಚರಣೆಯನ್ನೊಳಗೊಂಡು ಅನೇಕ ಅಂಶಗಳನ್ನು ಅವಲಂಬಿಸಿದೆ.

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್‌ಸೈಟ್‌ಗೆ ನೀವು ಭೇಟಿ ನೀಡಬಹುದು.ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ