ಮೈಕ್ರೋ ವಿಮಾ ಯೋಜನೆ - SBI ಲೈಫ್ ಶಕ್ತಿ| ರಿಟರ್ನ್ ದರ 50%
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಶಕ್ತಿ

UIN: 111N038V03

ಯೋಜನೆ ಕೋಡ್: 095

null

ಪರಿಪಕ್ವತೆಯಲ್ಲಿ ಪ್ರೀಮಿಯಮ್‌ನ 50% ವಾಪಾಸಾತಿಯೊಂದಿಗಿನ ಒಂದು ಗ್ರೂಪ್ ಮೈಕ್ರೊ ಟರ್ಮ್ ವಿಮಾ ಯೋಜನೆ.

 • ಕೈಗೆಟಕುವ ವಿಮಾ ಸುರಕ್ಷೆ
 • ಕವರೇಜ್ ಮೊತ್ತದ ಪರಿವರ್ತನೀಯತೆ
 • ಪರಿಪಕ್ವತೆಯಲ್ಲಿ ಪ್ರೀಮಿಯಮ್‌ನ ವಾಪಾಸಾತಿ
ಪರಿಪಕ್ವತೆಯಲ್ಲಿ ಪ್ರೀಮಿಯಮ್‌ನ 50% ವಾಪಾಸಾತಿಯೊಂದಿಗಿನ ಒಂದು ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಗ್ರೂಪ್ ಮೈಕ್ರೊ ಟರ್ಮ್ ಇನ್‌ಶೂರೆನ್ಸ್ ಯೋಜನೆ

ನೀವು ನಿಮ್ಮ ಸದಸ್ಯರ ಜೀವಗಳನ್ನು ಸುರಕ್ಷಿತಗೊಳಿಸುವ ಕೈಗೆಟಕುವಂತಹ ಯೋಜನೆಗಳನ್ನು ಎದುರು ನೋಡುತ್ತಿರುವ ಒಂದು ಮೈಕ್ರೊ ಫೈನಾನ್ಶಿಯಲ್ ಸಂಸ್ಥೆ (ಎಮ್‌ಎಫ್‌ಐ) ಅಥವಾ ಒಂದು ಸರಕಾರೇತರ ಸಂಸ್ಥೆಯೇ (ಎನ್‌ಜಿಓ)?
ಎಸ್‌ಬಿ ಐ ಲೈಫ್-ಶಕ್ತಿಯನ್ನು ನಿಮ್ಮ ಸದಸ್ಯರಿಗೆ ಕವರೇಜ್‌ನ್ನು ಒದಗಿಸುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಮಾತ್ರವಲ್ಲದೆ ಪರಿಪಕ್ವತೆಯಲ್ಲಿ, ಅವರು ಪಾತಿಸಿರುವ ಪ್ರೀಮಿಯಮ್‌ನ 50% ನ್ನು ಮರಳಿ ಪಡೆಯುತ್ತಾರೆ.

ಎಸ್‌ಬಿಐ ಲೈಫ್ - ಶಕ್ತಿ ಪ್ಲಾನ್ ನೀಡುತ್ತಿದೆ –
 • ಭದ್ರತೆ - ಏನಾದರೂ ಸಂಭವನಿಯ ಸಂಧರ್ಭದಲ್ಲಿ ನಿಮ್ಮ ಸದಸ್ಯರು ಮತ್ತು ಅವರ ಕುಟುಂಬದವರ ಸುರಕ್ಷತೆಯ ರಕ್ಷಣೆಯನ್ನು ಪಡೆಯಿರಿ
 • ವಿಶ್ವಾಸಾರ್ಹತೆ - ಪರಿಪಕ್ವತೆಯಲ್ಲಿ, ಪಾವತಿಸಿದ ಪ್ರೀಮಿಯಮ್‌ನ 50%ನ್ನು ಮರಳಿಸುವ ಮೂಲಕ
 • ಪರಿವರ್ತನೀಯತೆ - ನಿಮ್ಮ ಸದಸ್ಯರ ಅವಶ್ಯಕತೆಗಳಂತೆ ಆಶ್ವಾಸಿತ ಮೊತ್ತವನ್ನು ಆಯ್ಕೆ ಮಾಡಿರಿ.
 • ಕೈಗೆಟುಕುವ ಬೆಲೆ – ಸಮಂಜಸವಾದ ಪ್ರೀಮಿಯಂಗಳು

ನಿಮ್ಮ ಸದಸ್ಯರಿಗೆ ಆರ್ಥಿಕ ಸ್ವಾತಂತ್ರ್ಯದ ಅವರ ಪಯಣದಲ್ಲಿ ಬೆಂಬಲ ನೀಡಿರಿ.

ಮುಖ್ಯಾಂಶಗಳು

null

ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಗುಂಪು ಮೈಕ್ರೋ ವಿಮೆ ಯೋಜನೆ

ವೈಶಿಷ್ಟ್ಯಗಳು

 • ಗ್ರೂಪ್‌ಗೆ ಜೀವನ ಸುರಕ್ಷೆಯನ್ನು ನೀಡಲಾಗುತ್ತದೆ
 • ಪರಿಪಕ್ವತೆಯಲ್ಲಿ, ಪಾವತಿಸಲಾದ 50% ಪ್ರೀಮಿಯಮ್‌ನ ವಾಪಾಸಾತಿ
 • ಸದಸ್ಯರ ಅವಶ್ಯಕತೆಯಂತೆ ಆಶ್ವಾಸಿತ ಮೊತ್ತದ ಆಯ್ಕೆಯನ್ನು ನೀಡುತ್ತಿದೆ, ರೂ.2,00,000ದ ತನಕದ ಮಿತಿಯೊಂದಿಗೆ.
 • ಕೈಗೆಟಕುವ ಪ್ರೀಮಿಯಮ್‌ ಮೊತ್ತಗಳ ಶ್ರೇಣಿ

ಪ್ರಯೋಜನಗಳು

ಸುರಕ್ಷತೆ
 • ಗ್ರೂಪ್‌ನ ಸದಸ್ಯರಿಗೆ ಅಪಾಯದ ಸುರಕ್ಷೆಯನ್ನು ನೀಡುತ್ತದೆ ಮತ್ತು ದುರಾದೃಷ್ಟಕರ ಸನ್ನಿವೇಶದಲ್ಲಿ ಅವರ ಕುಟುಂಬದ ಸುರಕ್ಷೆಯನ್ನು ಸುನಿಶ್ಚಿತಗೊಳಿಸುತ್ತದೆ.
ವಿಶ್ವಾಸಾರ್ಹತೆ
 • ಪರಿಪಕ್ವತೆಯಲ್ಲಿ, ಪ್ರೀಮಿಯಮ್‌ನ 50%ನ್ನು ಮರಳಿಸುವ ಮೂಲಕ ನಿಮ್ಮ ಸದಸ್ಯರಿಗೆ ಖಾತ್ರಿಯಾದ ಪ್ರಯೋಜನಗಳು
ಪರಿವರ್ತನೀಯತೆ
 • ನಿಮ್ಮ ಗ್ರೂಪ್‌ನ ಸದಸ್ಯರಿಗೆ ಅವರ ಆರ್ಥಿಕ ಅವಶ್ಯಕತೆಯಂತೆ ಕವರ್
ಕೈಗೆಟಕುವಂಥಾದ್ದು
 • ಸಕಾರಣವಾದ ವೆಚ್ಚದಲ್ಲಿ ನಿಮ್ಮ ಗ್ರೂಪ್ ಸದಸ್ಯರಿಗೆ ವಿಮಾ ಲಾಭಗಳನ್ನು ನೀಡುತ್ತದೆ.
ಮರಣ ಸಮಯದ ಪ್ರಯೋಜನ:
ಪಾಲಿಸಿಯ ಅವಧಿಯಲ್ಲಿ ಜೀವನ ಆಶ್ವಾಸಿತ ಮಾಡಿಸಿಕೊಂಡವರ ಮರಣ ಉಂಟಾದ ಸಂದರ್ಭದಲ್ಲಿ, ಆಯ್ದುಕೊಂಡಿರುವ ಆಶ್ವಾಸಿತ ಮೊತ್ತ ಪಾವತಿಸಲಾಗುವುದು.
ಪರಿಪಕ್ವತೆಯ ಲಾಭ
ವಿಮೆ ಮಾಡಿಸಿಕೊಂಡವರು ಪಾಲಿಸಿ ಅವಧಿಯ ತನಕ ಬದುಕಿದ್ದಲ್ಲಿ ಪಾವತಿಸಲಾದ ಒಟ್ಟು ಪ್ರೀಮಿಯಮ್‌ನ 50%ನ್ನು (ಅನ್ವಯವಾಗುವ ಕರಗಳ ಹೊರತಾಗಿ) ಮರಳಿಸಲಾಗುತ್ತದೆ.
ಇತರ ಮಾಹಿತಿ
 • ಸರಂಡರ್
  2 ವರ್ಷಗಳ ಸಂಪೂರ್ಣ ಪ್ರೀಮಿಯಮ್ ಪಾವತಿಸಲಾಗಿದ್ದರೆ, ಸರಂಡರ್ ಮೌಲ್ಯಕ್ಕಾಗಿ ಪಾಲಿಸಿಯನ್ನು ಸರಂಡರ್ ಮಾಡುವ ಮೂಲಕ ಸದಸ್ಯರು ಊರ್ಜಿತದಲ್ಲಿರುವ ಅಥವಾ ಪೈಯ್ಡ್-ಅಪ್ ಪಾಲಿಸಿಯನ್ನು ಮೊದಲನೆ ಪಾಲಿಸಿ ವರ್ಷದ ನಂತರ ಮತ್ತು ಪರಿಪಕ್ವತೆಯ ಮೊದಲು ಯಾವುದೇ ಸಮಯದಲ್ಲಿ ಕೊನೆಗೊಳಿಸಬಹುದು.
 • ರಿಯಾಯತಿ ಅವಧಿ
  ಪ್ರೀಮಿಯಮ್ ನಿಶ್ಚಿತ ದಿನಾಂಕದಿಂದ 30 ದಿನಗಳು ರಿಯಾಯತಿ ಅವಧಿಗೆ ಅನುಮತಿಯಿದೆ.
 • ಪೈಡ್ ಅಪ್ ಮೌಲ್ಯ
  ಒಂದು ವೇಳೆ ಇನ್ಶೂರ್ಡ್‌ ಮೆಂಬರ್‌ಗೆ ರಿಯಾಯತಿ ಅವಧಿಯೊಳಗೆ ಪ್ರೀಮಿಯಮ್ ಪಾವತಿಸಲು ಆಗದಿದ್ದರೆ, ಅವನ/ಅವಳ ವಿಮೆಯ ಕವರ್ ಹಾಗೇ ಉಳಿದಿರುತ್ತದೆ, ಆದರೆ ಮರಣ/ಪಕ್ವತೆಯ ಲಾಭ ಕಡಿಮೆಯಾಗುತ್ತದೆ. ಮೊದಲ ಎರಡು ವರ್ಷಗಳ ಪ್ರೀಮಿಯಮ್ ಪಾವತಿಸಿದ್ದರೆ ಇನ್ಶೂರೆನ್ಸ್ ಕವರ್‌ನಲ್ಲಿ ಕೇವಲ ಒಟ್ಟಾದ ಪೈಡ್-ಅಪ್ ಮೌಲ್ಯ ಪಾವತಿಸಲಾಗುವುದು.
 • ನವೀಕರಣ
  ಮೊದಲ ಪಾವತಿಸಿರದ ನಿಶ್ಚಿತ ದಿನಾಕದಿಂದ 2 ವರ್ಷಗಳ ಅವಧಿಯೊಳಗೆ ಮೆಂಬರರ ಲೈಫ್ ಕವರ್‌ನ ನವೀಕರಣದ ಆಯ್ಕೆ ಮೆಂಬರ್ ಅಥವಾ ಮಾಸ್ಟರ್ ಪಾಲಿಸೀಧಾರಕರಿಗೆ ಇದೆ.
 • ಫ್ರೀ ಲುಕ್ ಅವಧಿ
  ಒಂದು ವೇಳೆ ಇದು ಕಡ್ಡಾಯ ಯೋಜನೆ ಆಗಿದ್ದರೆ (ಭಾಗವಹಿಸುವಿಕೆಯ ನಿರ್ಧಾರ ಸದಸ್ಯರಲ್ಲಿರದೆ ಮತ್ತು ಸದಸ್ಯರು ಯೋಜನೆಗೆ ಸೇರ್ಪಡೆಯಾಗುವುದು ಕಡ್ಡಾಯವಾಗಿದ್ದರೆ) ಫ್ರೀ-ಲುಕ್ ಅವಧಿಯಲ್ಲಿ ರದ್ದುಪಡಿಸುವಿಕೆಯ ಆಯ್ಕೆಯು ವಿಮೆ ಮಾಡಿಸಿಕೊಂಡ ಸದಸ್ಯರಿಗೆ ಉಪಲಬ್ದವಿರುವುದಿಲ್ಲ ಮತ್ತು ಮಾಸ್ಟರ್ ಪಾಲಿಸಿ ದಾರರಿಗೆ ಮಾತ್ರ ಉಪಲಬ್ಧವಿರುತ್ತದೆ.
  • ಒಂದುವೇಳೆ ಇದು ಸ್ವ ಇಚ್ಚಾ ಯೋಜನೆ ಆಗಿದ್ದರೆ (ಇದರಲ್ಲಿ ಭಾಗವಹಿಸುವ ನಿರ್ಧಾರವು ಸದಸ್ಯರದ್ದಾಗಿದ್ದು ನಿಮ್ಮದಾಗಿದ್ದು ಮತ್ತು ಯೋಜನೆಯಲ್ಲಿ ಸೇರಲು ನಿರ್ಧರಿಸಿದ್ದರೆ)ಪಾಲಿಸಿಗಳನ್ನು ನೇರ ಮಾರಾಟದ ಹೊರತಾಗಿ ಇತರ ಯಾವುದೇ ಚಾನೆಲ್‌ನಿಂದ ಪಡೆದಿದ್ದರೆ ಇನ್‌ಶೂರೆನ್ಸ್ ಸಿರ್ಟಿಫಿಕೇಟ್‌ನ್ನು ಪಡೆದ ತಾರೀಖಿನಿಂದ 15 ದಿವಸಗಳೊಳಗೆ ಮತ್ತು ಪಾಲಿಸಿಯನ್ನು ನೇರ ಮಾರಾಟದ ಮೂಲಕ ಪಡೆದಿದ್ದರೆ ಇನ್‌ಶೂರೆನ್ಸ್ ಸರ್ಟಿಫಿಕೇಟ್‌ನ್ನು ಪಡೆದ ತಾರೀಖಿನಿಂದ 30 ದಿವಸಗಳೊಳಗೆ ಮಾಸ್ಟರ್ ಪಾಲಿಸಿದಾರರೊಂದಿಗೆ, ವಿಮೆ ಮಾಡಿಸಿಕೊಂಡ ಸದಸ್ಯರು ಪಾಲಿಸಿಯ ಷರತ್ತು ಮತ್ತು ನಿಯಮಗಳನ್ನು ಪುನರಾವಲೋಕನೆ ಮಾಡಬಹುದು ಮತ್ತು ಯಾವುದೇ ಶರ್ತ ಮತ್ತು ನಿಯಮಗಳ ಬಗ್ಗೆ ವಿಮೆ ಮಾಡಿಸಿಕೊಂಡ ಸದಸ್ಯರು ಸಂತುಷ್ಟರಾಗಿರದಿದ್ದರೆ ಅಥವಾ ಅದು ನಿಮಗೆ ಒಪ್ಪಿಗೆಯಾಗದಿದ್ದರೆ ಅವನು/ಅವಳು ಅಸಮ್ಮತಿಯ ಕಾರಣ ನೀಡಿ ವಿಮಾ ಪ್ರಮಾಣಪತ್ರಗಳನ್ನು ಹಿಂತಿರುಗಿಸಬಹುದು. ಇಂತಹ ಯಾವುದೇ ವಿನಂತಿಯು ಮಾಸ್ಟರ್ ಪಾಲಿಸಿಧಾರಕರ ಮೂಲಕ ಬರಬೇಕು. ಪಾವತಿಸಲಾದ ಪ್ರೀಮಿಯಮ್‌ಗಳನ್ನು ಸ್ಟ್ಯಾಂಪ್‌ಡ್ಯೂಟಿ ಮತ್ತು ಮಾಡಲಾದ ವೆಚ್ಚಗಳನ್ನು ಕಡಿತ ಮಾಡಿ ಮಾಸ್ಟರ್ ಪಾಲಿಸಿದಾರರ ಮೂಲಕ ಮರುಪಾವತಿಸಲಾಗುತ್ತದೆ.
 • ಸಾಲ ಸೌಲಭ್ಯ
  ಈ ಯೋಜನೆಯ ಅಡಿಯಲ್ಲಿ ಯಾವುದೇ ಸಾಲ ಸೌಲಭ್ಯ ಲಭ್ಯವಿರುವುದಿಲ್ಲ.
 • ಹೊರತುಪಡಿಸುವಿಕೆಗಳು
  • ಆತ್ಮಹತ್ಯೆ
   ಒಂದುವೇಳೆ ಇನ್ಶೂರ್ಡ್‌ ಗ್ರೂಪ್ ಮೆಂಬರ್ ಆತ್ಮಹತ್ಯೆ ಮಾಡಿಕೊಂಡರೆ, ಅದು ತಿಳಿದೋ -ತಿಳಿಯದೆಯೋ ಆಗಿದ್ದರೂ, ಅದು ಅಪಾಯ ಕವರ್ ದಿನಾಂಕದಿಂದ ಒಂದು ವರ್ಷದೊಳಗೆ ಆಗಿದ್ದರೆ, ಗ್ರೂಪ್ ಮೆಂಬರ್‌ಗೆ ಇನ್ಶೂರೆನ್ಸ್ ಲಾಭ ಪಾವತಿಸಲಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮೆಂಬರರ ಪಾವತಿಸಿದ ಪಾಲಿಸಿಯ ಅನ್ವಯ 80%ನ ಅಧಿಕವನ್ನು ಮರಣದ ದಿನಾಂಕದ ವರೆಗೆ ಅಥವಾ ಸ್ವಾಧೀನತಾ ಮೌಲ್ಯವನ್ನು ಮರುಪಾವತಿ ಮಾಡಲಾಗುವುದು.

ಎಸ್‌ಬಿಐ ಲೈಫ್ – ಶಕ್ತಿ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.

$ ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ
**ಅನ್ವಯವಾಗುವಂತೆ ಕರಗಳನ್ನು ಮತ್ತು ಲೆವಿಗಳನ್ನು ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ.
^ಎಲ್ಲಾ ಎಸ್‌ಬಿಐ ಲೈಫ್ ಗ್ರೂಪ್ ಮೈಕ್ರೋ ಇನ್ಶೂರೆನ್ಸ್ ಯೋಜನೆಗಳಿಗಾಗಿ ಆಶ್ವಾಸಿತ ಮೊತ್ತವು ಪ್ರತಿ ಲೈಫ್‌ಗೆ ರೂ.2,00,000

95.ver.01-03/18 WEB KAN

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.

ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್‌ಸೈಟ್‌ಗೆ ನೀವು ಭೇಟಿನೀಡಬಹುದು ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

ಟೋಲ್‌‌ ಫ್ರೀ ಸಂಖ್ಯೆಗೆ ಕರೆ ಮಾಡಿ

1800 267 9090(ಪ್ರತಿದಿನ ಬೆಳಿಗ್ಗೆ 9.00 ರಿಂದ ರಾತ್ರಿ 9.00 ವರೆಗೆ ಲಭ್ಯ)

ನಮಗೆ ಇಮೇಲ್ ಮಾಡಿ

info@sbilife.co.in