ಎಸ್ ಬಿಐ ಲೈಫ್ - ಸ್ಮಾರ್ಟ್ ಎಲೈಟ್ | ಅಧಿಕ ವರಮಾನ ವೈಯಕ್ತಿಕ ವಿಮೆ ಯೋಜನೆ
SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸ್ಮಾರ್ಟ್ ಎಲಿಟ್

UIN: 111L072V04

ಯೋಜನೆ ಕೋಡ್: 53

ಎಸ್‌ಬಿಐ ಲೈಫ್ - ಸ್ಮಾರ್ಟ್ ಎಲಿಟ್

ಆತ್ಮವಿಶ್ವಾಸದೊಂದಿಗೆ
ಹೊಸ ಎತ್ತರಕ್ಕೆ
ತಲುಪಿರಿ.

ಒಂದು ವ್ಯಕ್ತಿಗತ, ಯೂನಿಟ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್, ಲೈಫ್ ಇನ್ಶೂರೆನ್ಸ್ ಉತ್ಪನ್ನವಾಗಿದೆ

’’ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ರಾಡಕ್ಟ್‌ಗಳು ಕರಾರಿನ ಮೊದಲ ಐದು ವರ್ಷಗಳ ಕಾಲಾವಧಿಯಲ್ಲಿ ಸಾಲ ಸಂದಾಯದ ಕೊಡುಗೆ ನೀಡುವುದಿಲ್ಲ.  ಐದು ವರ್ಷಗಳು ಕೊನೆಗೊಳ್ಳುವವರೆಗೆ  ಪಾಲಿಸಿದಾರರು ಯೂನಿಟ್ ಲಿಂಕ್ಡ್  ಇನ್ಶೂರೆನ್ಸ್  
ಪ್ರಾಡಕ್ಟ್‌ಗಳು ವಿನಿಯೋಜಿಸಿದ ಹಣವನ್ನು ಪೂರ್ಣವಾಗಿ ಅಥವಾ ಭಾಗಶಃ ಸರೆಂಡರ್ ಅಥವಾ ವಿಥ್ಡ್ರಾ ಮಾಡಲು ಆಗುವುದಿಲ್ಲ.

ನಿಮ್ಮ ಮಹತ್ವಾಕಾಂಕ್ಷೆಯು ಜೀವನದಲ್ಲಿ ಅತ್ಯುತ್ತಮವಾದುದನ್ನು ಮತ್ತು ಹೆಚ್ಚಿನದ್ದನ್ನು ಸಾಧಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಎಸ್‌ಬಿಐ ಲೈಫ್ - ಸ್ಮಾರ್ಟ್ ಎಲಿಟ್ ಪ್ಲಾನ್ ನಿಮ್ಮ ಆರ್ಥಿಕ ಹೂಡಿಕೆಗಳಿಂದ ಹೆಚ್ಚಿನದ್ದನ್ನು ಪಡೆಯಲು ಸಹಾಯ ಮಾಡುತ್ತದೆ, ಇದರಿಂದಾಗಿ ಮಾರ್ಕೆಟ್ ಲಿಂಕ್ಡ್ ಪ್ರತಿಫಲಗಳ ಮೂಲಕ ನಿಮ್ಮ ಕನಸುಗಳನ್ನು ಸಾಕಾರಗೊಳಿಸುವ ಸ್ವಾತಂತ್ರ್ಯವನ್ನು ನೀವು ಆನಂದಿಸಬಹುದು ಮತ್ತು ಭವಿಷ್ಯದಲ್ಲಿ ನಿಮ್ಮ ಪ್ರಿಯ ಜನರನ್ನು ಸಂರಕ್ಷಿಸಬಹುದು.

ಮುಖ್ಯ ಪ್ರಯೋಜನಗಳು :
  • ಅಪಾಯವನ್ನು ಸಹಿಸುವ ನಿಮ್ಮ ಸಾಮರ್ಥ್ಯದಂತೆ 8 ವಿಭಿನ್ನ ಫಂಡ್‌ಗಳ ಮೂಲಕ ಮಾರ್ಕೆಟ್ ಲಿಂಕ್ಡ್ ಪ್ರತಿಫಲಗಳು.
  • ಫಂಡ್ ಮೌಲ್ಯವನ್ನು ಹೆಚ್ಚಿಸಲು 6ನೇ ಪಾಲಿಸಿ ವರ್ಷದಿಂದ ಪ್ರೀಮಿಯಮ್ ಅಲೊಕೇಶನ್ ಶುಲ್ಕವಿಲ್ಲದಿರುವುದು.
  • ಇನ್‌ಬಿಲ್ಟ್ ಅಪಘಾತ ಲಾಭದೊಂದಿಗೆ ಲೈಫ್ ಕವರ್


^ಅಪಘಾತ ಮೃತ್ಯು ಅಥವಾ ಅಪಘಾತದಿಂದ ಸಂಪೂರ್ಣ ಮತ್ತು ಖಾಯಂ ಅಶಕ್ತತೆ ( ಆ್ಯಕ್ಸಿಡೆಂಟಲ್ ಟಿಪಿಡಿ) ಯ ವಿರುದ್ಧ ಹೆಚ್ಚುವರಿ ಕವರೇಜ್.

ಈ ಕೆಳಗಿನ ಲಾಭದ ವಿವರಣೆಯಲ್ಲಿ ನಿಮ್ಮ ವಿವರಗಳನ್ನು ತುಂಬಿಸಿರಿ ಮತ್ತು ನೀವು ಈ ಪ್ಲಾನ್‌ನಿಂದ ಹೇಗೆ ಲಾಭ ಪಡೆಯಬಹುದೆಂದು ನೋಡಿರಿ.
ನಿಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಉತ್ಕೃಷ್ಟವಾದುದನ್ನೇ ಪಡೆಯಿರಿ!

ಮುಖ್ಯಾಂಶಗಳು

ಎಸ್‌ಬಿಐ ಲೈಫ್ - ಸ್ಮಾರ್ಟ್ ಎಲಿಟ್

ಒಂದು ವೈಯಕ್ತಿಕ, ಯೂನಿಟ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಲೈಫ್ ಇನ್ಶೂರೆನ್ಸ್ ಉತ್ಪನ್ನ ಆಗಿದೆ.

ಮ್ಯಾನ್‌ಪ್ರೀತ್‌ ವೃತ್ತಿಯಿಂದ ಮಹಿಳಾ ವ್ಯಾಪಾರಿ, ಭವಿಷ್ಯದಲ್ಲಿ ಅವರ ಕುಟುಂಬದ ಹಣಕಾಸನ್ನು ರಕ್ಷಿಸುವ ಸಲುವಾಗಿ ಅವರ ಆಯ್ಕೆಯ ಪರಿಕರಗಳಲ್ಲಿ ಹೂಡಿಕೆ ಮಾಡುವ ಮೂಲಕ ಅವರ ಸಂಪತ್ತನ್ನು ಗರಿಷ್ಠಗೊಳಿಸಬಹುದು.

ಕೆಳಗಿನ ಫಾರ್ಮ್‌ ಕ್ಷೇತ್ರಗಳನ್ನು ಭರ್ತಿಮಾಡಿ ಮತ್ತು ಎಸ್‍‌ಬಿಐ ಲೈಫ್ - ಎಸ್‍‌ಬಿಐ ಎಲೈಟ್ ಪ್ರಯೋಜನಗಳನ್ನು ಆನಂದಿಸಿ.

Name:

DOB:

Gender:

Male Female Third Gender

Staff:

Yes No

Let's finalize the policy duration you are comfortable with...

Policy Term

5 30

Plan Type

LPPT
SP

A little information about the premium options...

Premium Frequency Mode

Premium Amount

12,500 250000000

Premium Payment Term Option

Select Plan

Platinum
Gold

How would you like to split your investment?

Equity EliteFund II (%)

0 100

Balanced Fund (%)

0 100

Bond Fund (%)

0 100

Money Market Fund (%)

0 100

Bond Optimiser Fund (%)

0 100

Midcap Fund (%)

0 100

Pure Fund (%)

0 100

Corporate Bond Fund (%)

0 100

Reset

Sum Assured


Premium frequency

Premium amount


Premium Payment Term


Policy Term


Maturity Benefit

At assumed rate of returns** @ 4%


or
@ 8%

Give a Missed Call

ವೈಶಿಷ್ಟ್ಯಗಳು

  • ಎರಡು ಸಂರಕ್ಷಣಾ ಆಯ್ಕೆಗಳು ಉಪಲಬ್ಧ ಇವೆ- ಗೋಲ್ಡ್ ಆಪ್ಷನ್ ಮತ್ತು ಪ್ಲಾಟಿನಂ ಆಪ್ಷನ್
  • ಇನ್‌ಬಿಲ್ಟ್ ಅಪಘಾತ ಲಾಭದ ಕವರ್
  • ಸೀಮಿತ ಮತ್ತು ಏಕ ಪ್ರೀಮಿಯಮ್ ಪಾವತಿ ಆಯ್ಕೆಗಳು
  • ನಿಮ್ಮ ಹೂಡಿಕೆಗಳನ್ನು ವೃದ್ಧಿಸಲು ಸ್ವಿಚ್ ಮತ್ತು ರಿಡೈರೆಕ್ಷನ್ ಸೌಲಭ್ಯ
  • 6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂತೆಗೆತಗಳು

ಪ್ರಯೋಜನಗಳು


ಸುರಕ್ಷತೆ
  • ಯಾವುದೇ ದುರದೃಷ್ಟಕರ ಪ್ರಸಂಗದಲ್ಲಿ ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಸಂರಕ್ಷಿಸಿರಿ

ಪರಿವರ್ತನೀಯತೆ
  • ನಿಮ್ಮ ಅವಶ್ಯಕತೆಯಂತೆ ಪ್ರೀಮಿಯಮ್ ಪಾವತಿ ಅವಧಿಯನ್ನು ಆಯ್ಕೆ ಮಾಡಿರಿ
  • ಬದಲಾಗುತ್ತಿರುವ ಮಾರುಕಟ್ಟೆಯ ಪರಿಸ್ಥಿತಿಗಳಂತೆ ನಿಮ್ಮ ಫಂಡ್‌ ಅಲೊಕೇಶನ್ ಅನ್ನು ಪರಿವರ್ತಿಸಿರಿ

ನಗದೀಕರಣ
  • 6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂತೆಗೆದುಕೊಳ್ಳುವಿಕೆಯೊಂದಿಗೆ ಅನಿರೀಕ್ಷಿತ ವೆಚ್ಚಗಳಿಗಾಗಿ ವ್ಯವಸ್ಥೆ

ತೆರಿಗೆ ಲಾಭಗಳನ್ನು ಪಡೆಯಿರಿ&

ಪರಿಪಕ್ವತೆಯ ಲಾಭ:ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಸುತ್ತದೆ:

  • ಪಾಲಿಸಿ ಅವಧಿ ಪೂರ್ಣಗೊಂಡಾಗ, ಫಂಡ್ ಮೌಲ್ಯವನ್ನು ಪಾವತಿಸಲಾಗುತ್ತದೆ

ಮೃತ್ಯು ಲಾಭ:
ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಸುತ್ತದೆ


ಗೋಲ್ಡ್ ಆಪ್ಷನ್‌ಗಾಗಿ:

  • ಕ್ಲೈಮ್‌ನ  ಸೂಚನೆಯ ತಾರೀಖಿನಂದಿನಂತೆ ಫಂಡ್ ಮೌಲ್ಯ ಅಥವಾ ವಿಮಾ ಮೊತ್ತ, ವಜಾ ಭಾಗಶ ಹಿಂತೆಗೆತ* ಅಥವಾ ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ನ 105%, ವಜಾ ಅನ್ವಯವಾಗುವ ಭಾಗಶಃ ಹಿಂತೆಗೆತ* ಇವುಗಳ ಪೈಕಿ ಹೆಚ್ಚಿರುವಂಥಾದ್ದು.
  • *ಅನ್ವಯವಾಗುವ ಭಾಗಶಃ ಹಿಂತೆಗೆತಗಳು ವಿಮೆ ಮಾಡಿಸಿಕೊಂಡವರ ಮೃತ್ಯುವಿನ ಕೂಡಲೇ ಮೊದಲ 2 ವರ್ಷಗಳಲ್ಲಿನ ಭಾಗಶಃ ಹಿಂತೆಗೆತ, ಏನಾದರೂ ಇದ್ದರೆ, ಅದಕ್ಕೆ ಸಮನಾಗಿದೆ

ಪ್ಲಾಟಿನಮ್ ಆಪ್ಷನ್‌ಗಾಗಿ:

  • (ಕ್ಲೈಮ್‌ಸೂಚನೆಯ ತಾರೀಖಿನಂದಿನಂತೆ ಫಂಡ್ ಮೌಲ್ಯ ಕೂಡಿಸು ವಿಮಾ ಮೊತ್ತ) ಅಥವಾ ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ಗಳ 105% ಇವುಗಳ ಪೈಕಿ ಅಧಿಕ ಇರುವಂಥಾದ್ದನ್ನು ಪಾತಿಸಲಾಗುತ್ತದೆ.

ಇನ್-ಬಿಲ್ಟ್ ಲಾಭ :

  • ಅಪಘಾತ ಮೃತ್ಯು ಮತ್ತು ಅಪಘಾತದಿಂದ ಸಂಪೂರ್ಣ ಮತ್ತು ಖಾಯಂ ಅಶಕ್ತತೆ (ಅಪಘಾತ ಲಾಭ): ಅಪಘಾತ ಮೃತ್ಯು ಅಥವಾ ಅಪಘಾತದಿಂದ ಟಿಪಿಡಿಗಾಗಿ ಹೆಚ್ಚುವರಿ ಲಾಭವನ್ನು ಒದಗಿಸುತ್ತದೆ.

ಮೃತ್ಯು ಲಾಭವನ್ನು  ಏಕ ಗಂಟಿನಲ್ಲಿ ಅಥವಾ ಸೆಟ್ಲ್‌ಮೆಂಟ್ ಆಯ್ಕೆಯಂತೆ ಪಡೆದುಕೊಳ್ಳಬಹುದಾಗಿದೆ.


ಸೆಟ್ಲ್‌ಮೆಂಟ್ ಆಯ್ಕೆ :‘ಸೆಟ್ಲ್‌ಮೆಂಟ್' ಆಯ್ಕೆಯಡಿಯಲ್ಲಿ ನಾಮನಿರ್ದೇಶಿತರು ಅಥವಾ ಲಾಭಾರ್ಥಿ ಅಥವಾ ವಾರಸುದಾರರಿಗೆ ಮೃತ್ಯು ಲಾಭವನ್ನು  ಮೃತ್ಯುವಿನ ತಾರೀಖಿನಿಂದ ಅವಶ್ಯಕವಾದಂತೆ ವಾರ್ಷಿಕ, ಅರ್ಧ ವಾರ್ಷಿಕ ಅಥವಾ ಮಾಸಿಕ ಆಯ್ಕೆಯಾಗಿ 2 ರಿಂದ 5 ವರ್ಷಗಳಲ್ಲಿ ಕಂತುಗಳಲ್ಲಿ ಪಡೆಯುವ ಆಯ್ಕೆ ಇದೆ.


ಟಿಪ್ಪಣಿ: ಸೆಟ್ಲ್‌ಮೆಂಟ್‌ನ ಕಾಲಾವಧಿಯಲ್ಲಿ ಹೂಡಿಕೆಯ ಪೋರ್ಟ್‌ಫೋಲಿಯೊದಲ್ಲಿ ಹೂಡಿಕೆಯ ಅಪಾಯವನ್ನು ಫಲಾನುಭವಿಯೇ ಭರಿಸಿಕೊಳ್ಳುತ್ತಾರೆ


ತತೆರಿಗೆ ಲಾಭಗಳು&

ಎಸ್‌ಬಿಐ ಲೈಫ್ - ಸ್ಮಾರ್ಟ್ ಎಲಿಟ್ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ
null
1ವಯಸ್ಸಿನ ಎಲ್ಲಾ ವಿವರಗಳೂ ಹಿಂದಿನ ಜನ್ಮದಿನಾಂಕದಲ್ಲಿನ ವಯಸ್ಸಿನ ಪ್ರಕಾರ.
2ಇದರಲ್ಲಿ ವಾರ್ಷಿಕೀಕೃತ ಪ್ರೀಮಿಯಮ್ ಅನ್ವಯವಾಗುವ ಕರಗಳನ್ನು ಹೊರತುಪಡಿಸಿ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರಿಮಿಯಮ್ ಮೊತ್ತವಾಗಿದೆ.

NW/53/ver1/01/22/WEB/KAN

ವಿಭಿನ್ನ ಪ್ರಕಾರಗಳಲ್ಲಿ ಅಂದರೆ ‘ಪ್ರೀಮಿಯಮ್ ಹಂಚುವಿಕೆಯ ಶುಲ್ಕಗಳು’, ‘ಪಾಲಿಸಿ ಆಡಳಿತ ಶುಲ್ಕಗಳು’, ‘ಫಂಡ್ ನಿರ್ವಹಣಾ ಶುಲ್ಕಗಳು’, ಇತ್ಯಾದಿಗಳನ್ನು ಕಡಿದುಕೊಳ್ಳಲಾಗುವುದು. ಶುಲ್ಕಗಳ ಸಂಪೂರ್ಣ ಯಾದಿ ಮತ್ತು ಅದರ ರೀತಿಯನ್ನು, ದಯವಿಟ್ಟು  ಸೇಲ್ಸ್ ಬ್ರೋಶರ್‌ನಲ್ಲಿ ಓದಿಕೊಳ್ಳಿರಿ. ಪ್ರೀಮಿಯಮ್ ಅಲೊಕೇಶನ್ ಶುಲ್ಕಗಳು ಮತ್ತು ಮೊರ್ಟಾಲಿಟಿ ಶುಲ್ಕಗಳನ್ನು ಹೊರತುಪಡಿಸಿ ಎಲ್ಲಾ ಶುಲ್ಕಗಳು ಐಆರ್‌ಡಿಎಐಯ ಪೂರ್ವ ಅನುಮತಿಯೊಂದಿಗೆ ಪರಿಷ್ಕರಣೆಗೆ  ಒಳಪಟ್ಟಿವೆ.

**@4% ಮತ್ತು  @8%ರ  ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಎಲ್ಲಾ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ  ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಯೂನಿಟ್ ಲಿಂಕ್ಡ್  ಜೀವ ವಿಮಾ ಉತ್ಪನ್ನಗಳು ಮಾರುಕಟ್ಟೆಯ ಅಪಾಯಗಳಿಗೆ ಈಡಾಗಬಲ್ಲವು. ಈ ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅವುಗಳ  ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

ಯೂನಿಟ್ ಲಿಂಕ್ಡ್  ಲೈಫ್‌ ಇನ್ಶೂರೆನ್ಸ್ ಉತ್ಪನ್ನಗಳು ಸಾಂಪ್ರದಾಯಿಕ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳಿಂದ ವ್ಯತಿರಿಕ್ತವಾಗಿವೆ ಹಾಗೂ ಇವುಗಳಲ್ಲಿ ಅಪಾಯ ಸಾಧ್ಯತೆಗಳಿವೆ. ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಸಂದಾಯ ಮಾಡಲಾದ ಪ್ರೀಮಿಯವ್ ಇಕ್ವಿಟಿ ಮಾರುಕಟ್ಟೆಯಲ್ಲಿನ ವಿನಿಯೋಜನೆಗಳಿಗೆ ಸಂಬಂಧಪಟ್ಟ ಅಪಾಯಗಳಿಗೆ ಬದ್ಧವಾಗಿವೆ ಮತ್ತು ಫಂಡ್‌ನ ಕಾರ್ಯದಕ್ಷತೆ ಹಾಗೂ ಮೂಲಧನ ಮಾರುಕಟ್ಟೆಯ ಮೇಲೆ ಪ್ರಭಾವ ಬಿರಬಲ್ಲ ಕಾರಣಗಳನ್ನು ಆಧರಿಸಿ ಯೂನಿಟ್‌ಗಳ ಎನ್ಎವಿಯಲ್ಲಿ ಏರಿಳಿತವಾಗಬಹುದು ಮತ್ತು ವಿಮೆ ಇಳಿಸಿದವರು ಆತನ/ಆಕೆಯ ನಿರ್ಧಾರಕ್ಕೆ ತಾವೇ ಜವಾಬ್ದಾರರಾಗುತ್ತಾರೆ.

ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ., ಇದು ಕೇವಲ ಇನ್ಶೂರೆನ್ಸ್ ಕಂಪೆನಿಯೊಂದರ ಹೆಸರಾಗಿದೆ ಮತ್ತು  ಎಸ್‌ಬಿಐ ಲೈಫ್ -  ಸ್ಮಾರ್ಟ್ ಎಲಿಟ್  ಕೇವಲ ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಕಾಂಟ್ರಾಕ್ಟ್‌ಗಳ ಹೆಸರಾಗಿದೆ ಮತ್ತು ಯಾವುದೇ ರೀತಿಯಲ್ಲಿ ಕಾಂಟ್ರಾಕ್ಟ್‌ಗಳ ಗುಣಮಟ್ಟ, ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಸಂಬಂಧಪಟ್ಟ ಅಪಾಯ ಸಾಧ್ಯತೆಗಳು ಮತ್ತು ಅನ್ವಯಿಸುವ ಚಾರ್ಜ್‌ಗಳ ಬಗ್ಗೆ ದಯವಿಟ್ಟು ನಿಮ್ಮ ಇನ್ಶೂರೆನ್ಸ್ ಸಲಹೆಗಾರರ ಅಥವಾ ಮಧ್ಯಸ್ಥರಿಂದ ಅಥವಾ ವಿಮೆ ನೀಡುವವರ ಪಾಲಿಸಿಯ ದಾಖಲೆಯಿಂದ ತಿಳಿದುಕೊಳ್ಳಿರಿ.

ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

ಫಂಡ್ ಆಯ್ಕೆಗಳ ಹಿಂದಿನ ಕಾರ್ಯಾಚರಣೆಯು ಭವಿಷ್ಯದ ಕಾರ್ಯಚರಣೆಯ ಸೂಚಕವಲ್ಲ. ಪಾಲಿಸಿಯಡಿಯಲ್ಲಿ  ಪಾವತಿಸಲಾಗುವ ಎಲ್ಲಾ ಲಾಭಗಳು ಸಮಯ ಸಮಯಕ್ಕೆ ತೆರಿಗೆ ಕಾನೂನುಗಳು ಮತ್ತು ಇತರ ಆರ್ಥಿಕ ಶಾಸನಗಳ ಪರಿಣಾಮಗಳಿಗೆ ಒಳಪಟ್ಟಿದೆ. ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

*ತೆರಿಗೆ ಲಾಭಗಳು: ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ.
ನೀವು ಭಾರತದಲ್ಲಿನ ಅನ್ವಯವಾಗುವ ಆದಾಯತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ  ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.