Give Life Cover to Child with SBI Life - Smart Future Star.
SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಯೂಚರ್ ಸ್ಟಾರ್

UIN: 111N172V01

Product Code: 3X

play icon play icon
SBI Life – Smart Future Star Plan

ನಾಳಿನ ಆತ್ಮನಿರ್ಭರ ಭವಿಷ್ಯಕ್ಕಾಗಿ
ಇಂದು ನಿಮ್ಮ ಮಗುವಿನ ಕನಸುಗಳಿಗೆ
ಪೋಷಣೆ ನೀಡಿರಿ.

ಒಂದು ವೈಯಕ್ತಿಕ, ನಾನ್-ಲಿಂಕ್ಡ್‌, ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್ ಸೇವಿಂಗ್ಸ್ ಉತ್ಪನ್ನವಾಗಿದೆ.

ಒಬ್ಬ ತಾಯಿ/ತಂದೆಯಾಗಿ ನಿಮ್ಮ ಬದುಕು ನಿಮ್ಮ ಮಗು ಮತ್ತು ಆತನ/ಆಕೆಯ ವಿದ್ಯಾಭ್ಯಾಸ, ಪ್ರೊಫೆಶನಲ್ ಡಿಗ್ರಿಗಳು, ಮದುವ, ಉದ್ಯಮಿಯಾಗುವ ಕನಸುಗಳು ಇತ್ಯಾದಿಯಂತಹ ಆತನ/ಆಕೆಯ ಭವಿಷ್ಯದ ಜೀವನದ ಮಹತ್ವದ ಘಟನೆಗಳ ಸುತ್ತ ಸುಳಿಯುತ್ತಿರುತ್ತದೆ. ನಿಮ್ಮ ಮಗುವಿನ ಕನಸುಗಳು ಹಾಗೂ ಮಹತ್ವಾಕಾಂಕ್ಷೆಗಳ ಪೂರೈಕೆಗಳನ್ನು ನಿಮ್ಮ ಆದ್ಯ ಕರ್ತವ್ಯವಾಗಿಸಿಕೊಳ್ಳಲು, ನೀವು ಸರಿಯಾದ ಸಮಯದಲ್ಲಿ ವಿವೇಕಯುತವಾಗಿ ಪ್ಲಾನ್ ಮಾಡಲು ಶುರು ಮಾಡಬೇಕಾಗುತ್ತದೆ; ಅದರಿಂದ ನಿಮ್ಮ ಮಗುವಿಗೆ ಅತ್ಯಂತ ಅಗತ್ಯವಾದಾಗ ಒಂದು ದೊಡ್ಡ ಮೊತ್ತದ ಮೂಲಕ ಆತನನ್ನು/ಆಕೆಯನ್ನು ಸಶಕ್ತಗೊಳಿಸಲು ಸಾಧ್ಯವಾಗುತ್ತದೆ.

ಎಸ್‌ಬಿಐ ಲೈಫ್‌ನ ನಮಗೆ ಇದು ಅರ್ಥವಾಗುತ್ತದೆ, ಆದ್ದರಿಂದ ನಾವು ಪ್ರಸ್ತುಪಡಿಸುತ್ತಿದ್ದೇವೆ ಎಸ್‌ಬಿಐ ಲೈಫ್ - ಸ್ಮಾರ್ಟ್‌ ಪ್ಯೂಚರ್ ಸ್ಟಾರ್; ಇದು ಒಂದು ವ್ಯೆಯಕ್ತಿಕ, ನಾನ್-ಲಿಂಕ್ಡ್, ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್ ಸೇವಿಂಗ್ಸ್‌ ಉತ್ಪನ್ನವಾಗಿದೆ. ಇದು ನಿಮ್ಮ ಮಗುವಿನ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸುವುದಕ್ಕಾಗಿ ನಿಮ್ಮ ಸೇವಿಂಗ್ಸ್ ಅನ್ನು ಹೆಚ್ಚಿಸಿ ಮೆಚೂರಿಟಿಯ ಒಟ್ಟು ಮೊತ್ತವನ್ನು ಕಚ್ಚಿಸುವ ಸಲುವಾಗಿ ಈ ಪ್ರಾಡಕ್ಟ್ ಬೋನಸ್‌ಗಳನ್ನು ಕೊಡುತ್ತದೆ. ಇದರ ಅಂತರ್ನಿಹಿತ ಪ್ರೀಮಿಯಮ್ ಮನ್ನಾ ನಿಮಗೆ ಮನಃಶಾಂತಿಯನ್ನು ನೀಡುತ್ತದೆ; ಅಷ್ಟೇ ಅಲ್ಲದೆ, ನಿಮ್ಮ ಮಗುವಿನ ಅಗತ್ಯಗಳು ಮತ್ತು ಮಹತ್ವಾಕಾಂಕ್ಷೆಗಳಿಗೆ ತಕ್ಕಂತ ಪ್ಲಾನ್ ಅನ್ನು ವೈಯಕ್ತಿಕಗೊಳಿಸುವ ಸ್ವಾತಂತ್ರ್ಯವನ್ನೂ ನೀಡುತ್ತದೆ; ಆ ಮೂಲಕ ನಿಮ್ಮ ಮಗುವು ನಿಜವಾಗಿಯೂ ಭವಿಷ್ಯದ ಸ್ಟಾರ್ ಆಗಲು ನೆರವಾಗುತ್ತದೆ.

ಮುಖ್ಯಾಂಶಗಳು

ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಯೂಚರ್ ಸ್ಟಾರ್

A non-participating Unit Linked Insurance Plan

plan profile

Akshay, has ensured his 4-year old daughter, Myra, will never have to compromise on her dreams for want of funds, through this child plan.

Change the form fields below to see how you can secure your child's future with SBI Life – Smart Future Star

Name:

DOB:

Gender:

Male Female Third Gender

Staff:

Yes No

Proposer Name:

Proposer DOB:

Proposer Gender:

Male Female Third Gender

Choose your policy term...

Channel Type

Policy Term

15 25

A little information about the premium options...

Premium Frequency

Sum Assured

4 Lakh No limit

Premium Paying Term


Reset
sum assured

Sum Assured


premium frequency

Premium frequency

Premium amount
(excluding taxes)


premium paying

Premium Payment Term


policy term

Policy Term


maturity benefits

Maturity Benefit

At assumed rate of returns** @ 4%


or
@ 8%

Give a Missed Call

ವೈಶಿಷ್ಟ್ಯಗಳು:

ಸೇವಿಂಗ್ಸ್: ಮೆಚೂರಿಟಿಯಲ್ಲಿನ ಆಶ್ವಾತ ಮೊತ್ತ ಮತ್ತು ಒಂದು ವೇಳೆ ಘೋಷಿಸಿದ್ದಲ್ಲಿ ಜಮಾವಣೆಯಾದ ಬೋನನ್‌ಗಳು, ಇವನ್ನು ಒಟ್ಟುಮೊತ್ತವಾಗಿ ಕೊಡಲಾಗುತ್ತದೆ.

ಪರಿಪಕ್ವತೆಯ ಪಾವತಿಯನ್ನು ಏಕಗಂಟಿನಲ್ಲಿ ಡೆಫರ್ ಮಾಡಿರಿ ಅಥವಾ ಅದನ್ನು ಕಂತುಗಳಲ್ಲಿ ಪಡೆಯುವ ಆಯ್ಕೆ

ತೆರಿಗೆ ಲಾಭಗಳು^ ಪ್ರಸಕ್ತ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ನಿಯಮಗಳ ಪ್ರಕಾರ
 

^ನೀವು ಭಾರತದಲ್ಲಿ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳಂತೆ ಆದಾಯ ತರಿಗೆ ಲಾಭಗಳಿಗೆ ಅರ್ಹರಿರಬಹುದಾಗಿದ್ದು, ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ. ಈ ಪ್ಲಾನಿನ ಅಡಿಯಲ್ಲಿ ಅಪ್ರಾಪ್ತ ವಯಸ್ಸಿನ ಮಗು ವಿಮಾ ವ್ಯಕ್ತಿಯಾಗಿರುತ್ತದೆ ಮತ್ತು ತಾಯಿ/ತಂದೆ ಅಥವಾ ಅಜ್ಜಿ/ಅಜ್ಜ ಅಥವಾ ಕಾಯಿದೆಬದ್ಧ ಪೋಷಕರು ಪಾಲಿಸಿದಾರ/ಪ್ರಪೋಸರ್ ಆಗಿರುತ್ತಾರೆ. ಇದು ನಮ್ಮ ಬೋರ್ಡ್ ಒಪ್ಪಿಗೆ ಕೊಟ್ಟಿರುವ ಹೊಣೆಗಾರಿಕೆಯ ಪಾಲಿಸಿಯ ಅನುಸಾರವಾಗಿರುತ್ತದೆ. ಪ್ರೀಮಿಯಮ್ ಕವರ್‌ನ ಮನ್ನಾ ಪ್ರಪೋಸ‌ರ್‌ರ ಜೀವವನ್ನು ಅವಲಂಬಿಸಿರುತ್ತದೆ. ವಿಮಾ ವ್ಯಕ್ತಿಗೆ 18 ವರ್ಷ ವಯಸ್ಸು ತುಂಬಿದಾಗ ಅಥವಾ ಅದರ ನಂತರ ಪಾಲಿಯ ವಾರ್ಷಿಕ ದಿನ ಸಂಭವಿಸಿದಾಗ ಸ್ವಯಂಚಾಲಿತವಾಗಿ ಪಾಲಿಸಿಯ ಹಕ್ಕು ವಿಮಾ ವ್ಯಕ್ತಿಗೆ ಸೇರುತ್ತದೆ, ನಂತರದಲ್ಲಿ ಅದು ಕಂಪನಿ ಮತ್ತು ವಿಮಾ ವ್ಯಕ್ತಿಯ ನಡುವಿನ ಕಾಂಟ್ರ್ಯಾಕ್ಟ್ ಆಗಿ ಪರಿಗಣಿಸಲ್ಪಡುತ್ತದೆ.

ಪ್ರಯೋಜನಗಳು

ಸುರಕ್ಷತೆ

  • ಮಗುವಿಗೆ ಜೀವ ವಿಮಾ ರಕ್ಷಣೆ ಮತ್ತು ಪ್ರಪೋಪರ್‌ರ ಮೃತ್ಯು ಅಥವಾ ಅಪಘಾತದ ಕಾರಣ ಶಾಶ್ವತವಾದ ಸಂಪೂರ್ಣ ಅಂಗವಿಕಲತೆ ಉಂಟಾದಾಗ ಅಂತರ್ನಿಹಿತ "ಪ್ರೀಮಿಯಮ್ ಮನ್ನಾ’’ ಪ್ರಯೋಜನ

ಪರಿವರ್ತನೀಯತೆ

  • 7, 10 ಮತ್ತು 12 ವರ್ಷಗಳ ಸೀಮಿತ ಪ್ರೀಮಿಯಮ್ ಪಾವತಿ ಅವಧಿ ಮತ್ತು 15 ರಿಂದ 25 ವರ್ಷಗಳ ಪಾಲಿಸಿ ಅವಧಿ.

ಸರಳತೆ:

  • ಒಂದು ಸರಳ ಅರ್ಜಿ ಪ್ರಕ್ರಿಯೆ ಮತ್ತು ತೊಂದರೆ ರಹಿತ ನೀಡಿಕೆಯೊಂದಿಗೆ ಸುಲಭವಾಗಿ ಖರೀದಿಸಿರಿ

ಭರವಸೆ:

  • ಪರಿಪಕ್ವತೆಯಲ್ಲಿ ‘ಆಶ್ವಾತ ಮೊತ್ತ’ ಕ್ಕೆ ಸಮನಾದ ಏಕಗಂಟಿನ ಪರಿಪಕ್ವತೆಯ ಲಾಭ + ವೆಸ್ಟೆಡ್ ರಿವರ್ಷನರಿ ಬೋನಸ್‌ಗಳು + ಒಂದು ವೇಳೆ ಘೋಷಿಸಲಾದರೆ ಟರ್ಮಿನಲ್ ಬೋನಸ್ ಪಡೆಯಿರಿ.

ಪ್ರಪೋಸರ್‌ರಿಗೆ ಮೃತ್ಯು ಅಥವಾ ಅಪಘಾತದ ಕಾರಣ ಶಾಶ್ವತವಾದ ಸಂಪೂರ್ಣ ಅಂಗವಿಕಲತೆ (ಏಟಿಪಿಡಿ) ಸಂಭವಿಸಿದರೆ:

ಪ್ರೀಮಿಯಮ್ ಕಟ್ಟುವ ಅವಧಿಯಲ್ಲಿ ಪ್ರಪೋಸರ್‌ರಿಗೆ ಮೃತ್ಯು ಅಥವಾ ಅಪಘಾತದ ಕಾರಣ ಶಾಶ್ವತವಾದ ಸಂಪೂರ್ಣ ಅಂಗವಿಕಲತೆ (ಏಟಿಪಿಡಿ) ಸಂಭವಿಸಿದ್ದು ಪಾಲಿಸಿಯು ಚಾಲ್ತಿಯಲ್ಲಿದ್ದರೆ, ಸಾವಿನ ಅಥವಾ ಏಟಿಪಿಡಿ-ಯ ದಿನಾಂಕದಂದು ಮತ್ತು ನಂತರ ಕಟ್ಟಬೇಕಾದ ಭವಿಷ್ಯದ ಪ್ರೀಮಿಯಮ್‌ಗಳನ್ನು (ಏನಾದರೂ ಇದ್ದರೆ) ಮನ್ನಾ ಮಾಡಲಾಗುತ್ತದೆ ಮತ್ತು ಪಾಲಿಸಿಯು ಚಾಲ್ತಿಯಲ್ಲಿರುವ ಪಾಲಿಸಿಯಾಗಿಯೇ ಮುಂದುವರಿಯುತ್ತದೆ.
 

ಅಪಘಾತ ಎಂದರೆ ಹೊರಗಿನ, ಕಣ್ಣಿಗೆ ಕಾಣುವ ಮತ್ತು ಹಿಂಸಾತ್ಮಕ ರೀತಿಯಲ್ಲಿ ಇದ್ದಕ್ಕಿದ್ದಂತೆ, ಅನಿರೀಕ್ಷಿತವಾಗಿ ಮತ್ತು ತಾನೇತಾನಾಗಿ ಸಂಭವಿಸುವ ಘಟನೆಯಾಗಿದ್ದು ಅದು ಶಾರೀರಿಕ ಹಾನಿಯನ್ನು ಉಂಟು ಮಾಡುತ್ತದೆ, ಆದರೆ ಅದರಲ್ಲಿ ಯಾವುದೇ ಅಸ್ವಸ್ಥತೆ ಮತ್ತು ಕಾಯಿಲೆಗಳು ಸೇರಿರುವುದಿಲ್ಲ ಎಂದರ್ಥ.

ಶಾಶ್ವತವಾದ ಸಂಪೂರ್ಣ ಅಂಗವಿಕಲತೆ ಎಂದರೆ ಅಪಘಾತದ ಕಾರಣವಾಗಿ ವಿಮಾ ವ್ಯಕ್ತಿಗೆ ಈ ಕೆಳಗಿನ ಒಂದು (ಅಥವಾ ಹೆಚ್ಚು) ಹಾನಿ ಉಂಟಾಗಿದೆ ಎಂದರ್ಥ:

  1. ಎ. ಎರಡು ಕಣ್ಣುಗಳಲ್ಲೂ ಸಂಪೂರ್ಣ ಹಾಗೂ ಶಾಶ್ವತವಾಗಿ ದೃಷ್ಟಿ ಹೋಗಿರುವುದು, ಅಥವಾ
  2. ಬಿ. ಎರಡು ಕೈಗಳು ಅಥವಾ ಎರಡು ಕಾಲುಗಳು ಕೈ ಮಣ್ಣಿಕಟ್ಟಿನಲ್ಲಿ ಅಥವಾ ಮೇಲುಗಡೆ ಅಥವಾ ಕಾಲುಗಂಟಿನಲ್ಲಿ (ಹದಡು) ಅಥವಾ ಮೇಲುಗಡೆ ದೇಹದಿಂದ ಬೇರ್ಪಟ್ಟಿರುವುದು (ಅಥವಾ ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಬಳಸಲು ಬಾರದಿರುವುದು), ಅಥವಾ
  3. ಸಿ. ಒಂದು ಕಣ್ಣಿನಲ್ಲಿ ಸಂಪೂರ್ಣ ಹಾಗೂ ಶಾಶ್ವತವಾಗಿ ದೃಷ್ಟಿ ಹೋಗಿರುವುದು ಮತ್ತು ಒಂದು ಕೈ ಅಥವಾ ಒಂದು ಕಾಲು ಕೈ ಮಣ್ಣಿಕಟ್ಟಿನಲ್ಲಿ ಅಥವಾ ಮೇಲುಗಡೆ ಅಥವಾ ಕಾಲುಗಂಟಿನಲ್ಲಿ (ಹದಡು) ಅಥವಾ ಮೇಲುಗಡೆ ದೇಹದಿಂದ ಬೇರ್ಪಟ್ಟಿರುವುದು (ಅಥವಾ ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಬಳಸಲು ಬಾರದಿರುವುದು)
 
 

ಅಪಘಾತದ ಕಾರಣ ಶಾಶ್ವತವಾದ ಸಂಪೂರ್ಣ ಅಂಗವಿಕಲತೆ ಅಂದರೆ ಶಾಶ್ವತವಾದ ಸಂಪೂರ್ಣ ಅಂಗವಿಕಲತೆ:

  1. ಎ. ಅದು ಅಪಘಾತದ ಪರಿಣಾಮವಾಗಿ ಸಂಭವಿಸಿದ ಶಾರೀರಿಕ ಹಾನಿಯಿಂದ ಉಂಟಾಗಿದೆ, ಮತ್ತು
  2. ಬಿ. ಅದು ಏಕೈಕವಾಗಿ, ನೇರವಾಗಿ ಮತ್ತು ಬೇರೆ ಯಾವ ಕಾರಣಗಳಿಂದಲೂ ಆಗಿರದೆ ಕೇವಲ ಸದರಿ ಶಾರೀರಿಕ ಹಾನಿಯಿಂದಾಗಿಯೇ ಉಂಟಾಗಿದೆ, ಮತ್ತು
  3. ಸಿ. ಅದು ಆ ಅಪಘಾತದ 180 ದಿನಗಳೊಳಗೆ ಉಂಟಾಗಿದೆ, ಮತ್ತು
  4. ಡಿ. ಪಾಲಿಸಿ ಅವಧಿಯು ಮುಗಿದ ನಂತರ ಆ ಅಂಗವಿಕಲತೆ ಉಂಟಾದರೂ ಸಹ ಕೆಳಗಿನ ಶರತ್ತುಗಳಿಗೆ ಒಳಪಟ್ಟು ಪ್ರಯೋಜನವನ್ನು ನೀಡಲಾಗುತ್ತದೆ:
    1. ಪಾಲಿಸಿಯು ಚಾಲ್ತಿಯಲ್ಲಿದ್ದಾಗ ಅಪಘಾತ ಸಂಭವಿಸಿರಬೇಕು ಮತ್ತು
    2. ಅಪಘಾತದ ಕಾರಣದ ಅಂಗವಿಕಲತೆಯು ಆ ಅಪಘಾತದ 180 ದಿನಗಳೊಳಗೆ ಉಂಟಾಗಿರಬೇಕು
 

ಅಪಘಾತದ ಕಾರಣ ಶಾಶ್ವತವಾದ ಸಂಪೂರ್ಣ ಅಂಗವಿಕಲತೆಯ ಕ್ಲೈಮ್‌ಗೆ ಹಣ ಪಡೆಯಲು ದಯವಿಟ್ಟು ಇದನ್ನು ಗಮನದಲ್ಲಿಟ್ಟುಕೊಳ್ಳಿ. ಇಂತಹ ಅಶಕ್ತತೆಯು ಕನಿಷ್ಠ 180 ದಿನಗಳವರೆಗೆ ನಿರಂತರವಾಗಿರಬೇಕು ಮತ್ತು ಕಂಪೆನಿಯಿಂದ ನಿಯುಕ್ತಿಗೊಳಿಸಲಾದ ಸೂಕ್ತ ವೈದ್ಯಕೀಯ ಪ್ರಾಕ್ಟೀಷನರ್ ಅವರ ಅಭಿಪ್ರಾಯದಂತೆ, ಖಾಯಂ ಎಂದು ಪರಿಗಣಿಸಲ್ಪಡಬೇಕು. ಅಶಕ್ತತೆಯ ಶಾಶ್ವತತೆಯನ್ನು ದೃಢೀಕರಿಸಲು 180 ದಿನಗಳ ಕಾಯುವ ಅವಧಿಯು ದೈಹಿಕ ಬೇರ್ಪಡಿಸುವಿಕೆಯ ನಷ್ಟದ ಪ್ರಸಂಗದಲ್ಲಿ ಅನ್ವಯಿಸುವುದಿಲ್ಲ.

ಮೆಚೂರಿಟಿಯ ಪ್ರಯೋಜನ:

ಪಾಲಿಸಿಯ ಅಂತ್ಯದವರೆಗೆ ಮಗುವು (ವಿಮಾ ವ್ಯಕ್ತಿ) ಬದುಕಿ ಉಳಿದಿದ್ದು ಪಾಲಿಸಿಯು ಚಾಲ್ತಿಯಲ್ಲಿದ್ದ ಪಕ್ಷದಲ್ಲಿ, ಈ ಕೆಳಗಿನಂತೆ ಒಟ್ಟು ಮೊತ್ತವನ್ನು ಕೊಡಲಾಗುತ್ತದೆ:
  1. ಮೆಚೂರಿಟಿಯಲ್ಲಿ ಆಶ್ವಾಸಿತ ಮೊತ್ತ ಜೊತೆಗೆ ವೆಸ್ಟೆಡ್ ರಿವರ್ಷನರಿ ಬೋನಸ್‌ಗಳು, ಒಂದು ವೇಳೆ ಘೋಷಿಸಲಾದರೆ, ಜೊತೆಗೆ ಟರ್ಮಿನಲ್‌ ಬೋನಸ್, ಏನಾದರೂ ಇದ್ದರೆ,
  2. ಪಾಲಿಸಿಯು ಮೆಚೂರಿಟಿಯನ್ನು ತಲುಪಿದಾಗ, ಪಾಲಿಸಿಯು ಅಂತ್ಯಗೊಳ್ಳುತ್ತದೆ ಮತ್ತು ಆ ಮುಂದೆ ಯಾವ ಪ್ರಯೋಜನಗಳನ್ನೂ ನೀಡಲಾಗುವುದಿಲ್ಲ.

ಇಲ್ಲಿ ಪರಿಪಕ್ವತೆಯಲ್ಲಿ ಆಶ್ವಾಸಿತ ಮೊತ್ತವು ಆಶ್ವಾಸಿತ ಮೊತ್ತಕ್ಕೆ ಸಮನಾಗಿರುತ್ತದೆ'
^ಆಶ್ವಾಸಿತ ಮೊತ್ತವು ಪಾಲಿಸಿಯ ಆರಂಭದಲ್ಲಿ ಪಾಲಿಸಿದಾರರಿಂದ ಆಯ್ಕೆ ಮಾಡಲಾದ ಲಾಭದ ಸಂಪೂರ್ಣ ಮೊತ್ತವಾಗಿದೆ.

ವಿಮಾ ವ್ಯಕ್ತಿಗೆ ಮೃತ್ಯುವಿನ ಪ್ರಯೋಜನ:

ಪಾಲಿಸಿಯ ಅವಧಿಯಲ್ಲಿ ಮಗುವು (ವಿಮಾ ವ್ಯಕ್ತಿ ಮೃತರಾಗಿ ಪಾಲಿಸಿಯು ಚಾಲ್ತಿಯಲ್ಲಿದ್ದ ಪಕ್ಷದಲ್ಲಿ, ಆತನ/ಆಕೆಯ ನಾಮಿನಿ ಅಥವಾ ಕಾಯಿದೆಬದ್ಧ ವಾರಸುದಾರರಿಗೆ ಈ ಕೆಳಗಿನವುಗಳಲ್ಲಿ ಯಾವುದು ಹೆಚ್ಚೋ ಅದನ್ನು ಒಟ್ಟು ಮೊತ್ತವಾಗಿ ಕೊಡಲಾಗುತ್ತದೆ:
 
  1. ಮೃತ್ಯುನಲ್ಲಿ ಆಶ್ವಾಸಿತ ಮೊತ್ತ ಜೊತೆಗೆ ವೆಸ್ಟೆಡ್ ರಿವರ್ಷನರಿ ಬೋನಸ್‌ಗಳು, ಒಂದು ವೇಳೆ ಘೋಷಿಸಲಾದರೆ, ಜೊತೆಗೆ ಟರ್ಮಿನಲ್ ಬೋನಸ್, ಏನಾದರೂ ಇದ್ದರೆ,
  2. ಅಥವಾ
  3. ಮೃತ್ಯುವಿನ ದಿನಾ0ಕದವರೆಗೆ ಪಾವತಿಸಿದ ಒಟ್ಟು ಪ್ರೀಮಿಯಮ್ 105%
 

ಇಲ್ಲಿ; ಮೃತ್ಯುವಿನ ಸಂದರ್ಭದಲ್ಲಿ ಕೊಡಲಾಗುವ ವಿಮಾ ಮೊತ್ತ: ಇದು ವಿಮಾ ಮೊತ್ತ^ ಅಥವಾ ವಾರ್ಷಿಕಗೊಳಿಸಲಾದ ಪ್ರೀಮಿಯಮ್‌ನ 11 ಪಟ್ಟು, ಇವುಗಳಲ್ಲಿ ಯಾವುದು ಹೆಚ್ಚೋ ಅದಾಗಿರುತ್ತದೆ.
*ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ ತೆರಿಗೆಗಳು, ರೈಡರ್‌ ಪ್ರೀಮಿಯಮ್‌ಗಳು, ಅಂಡರ್‌ರೈಟಿಂಗ್‌ ಹೆಚ್ಚುವರಿ ಪ್ರೀಮಿಯಮ್ ಮತ್ತು ಮೊಡಲ್ ಪ್ರೀಮಿಯಮ್‌ಗಳಿಗಾಗಿ ಲೋಡಿಂಗ್‌ಗಳು, ಇವುಗಳ ಹೊರತಾಗಿ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರೀಮಿಯಮ್ ಆಗಿದೆ. ^ಆಶ್ವಾತ ಮೊತ್ತವು ಪಾಲಿಸಿಯ ಆರಂಭದಲ್ಲಿ ಪಾಲಿಸಿದಾರರಿಂದ ಆಯ್ಕೆ ಮಾಡಲಾದ ಲಾಭದ ಸಂಪೂರ್ಣ ಮೊತ್ತವಾಗಿದೆ.
#ಪಾವತಿಸಲಾದ ಒಟ್ಟು ಪ್ರೀಮಿಯಮ್ ಎಂದರೆ ಯಾವುದೇ ಹೆಚ್ಚುವರಿ ಪ್ರೀಮಿಯಮ್ ಮತ್ತು ತೆರಿಗೆಗಳು, ಸ್ಪಷ್ಟವಾಗಿ ಸಂಗ್ರಹಿಸಲಾಗಿದ್ದರೆ ಇವನ್ನು ಹೊರತುಪಡಿಸಿ ಮೂಲ ಉತ್ಪನ್ನದಡಿಯಲ್ಲಿ ಪಾವತಿಸಲಾದ ಪ್ರೀಮಿಯಮ್‌ಗಳ ಒಟ್ಟು ಮೊತ್ತವಾಗಿದೆ.
ಪ್ರತಿ ಆರ್ಥಿಕ ವರ್ಷದ ಅಂತ್ಯದಲ್ಲಿ ನಡೆಸಲಾಗುವ ಶಾಸನಬದ್ಧ ಮೌಲ್ಯಮಾಪನದ ಆಧಾರದ ಮೇಲೆ ಸರ್‌ಪ್ಲಸ್ (ಹೆಚ್ಚುವರಿ) ಉತ್ಪತ್ತಿ ಕಂಡುಬಂದ ಪಕ್ಷದಲ್ಲಿ ರಿವರ್ಶನರಿ ಬೋನಸ್, ಏನಾದರೂ ಇದ್ದರೆ, ಘೋಷಿಸಲಾಗುತ್ತದೆ.
ಚಾಲ್ತಿಯಲ್ಲಿರುವ ಪಾಲಿಸಿಗೆ ಮಾತ್ರ ರಿವರ್ಶನರಿ ಬೋನಸ್ ಅನ್ವಯಿಸುತ್ತದೆ ಮತ್ತು ಘೋಷಿಸಿದ ನಂತರ ಅದನ್ನು ಪಾಲಿಸಿಗೆ ಸೇರಿಸಲಾಗುತ್ತದೆ.
ರಿವರ್ಶನರಿ ಬೋನಸ್‌ ರೇಟ್ ಅನ್ನು ಆಶ್ವಾಸಿತ ಮೊತ್ತದ ಒಂದು ಶೇಕಡಾವಾರಾಗಿ ಸೂಚಿಸಲಾಗುತ್ತದೆ.
ಮೃತ್ಯು, ಸರೆಂಡರ್ ಅಥವಾ ಮೆಚೂರಿಟಿಯ ಕಾರಣ ಪಾಲಿಸಿಯು ಕ್ರೈಮ್ ಆಗಿ ಪರಿವರ್ತಿತವಾದಾಗ, ಆ ಪಾಲಿಸಿ ವರ್ಷದಲ್ಲಿ ಟರ್ಮಿನಲ್ ಬೋನಸ್ ಅನ್ನು, ಒಂದು ವೇಳೆ ಘೋಷಿಸಿದಲ್ಲಿ, ಕೊಡಲಾಗುತ್ತದೆ.
ಟರ್ಮಿನಲ್ ಬೋನಸ್ ಅನ್ನು ಜಮಾವಣೆಗೊಂಡ ರಿವರ್ಶನರಿ ಬೋನಸ್‌ಗಳ ಒಂದು ಶೇಕಡಾವಾರಾಗಿ ಸೂಚಿಸಲಾಗುತ್ತದೆ.

ಎಸ್‌ಬಿಐ ಲೈಫ್ – ಸ್ಮಾರ್ಟ್ ಪ್ಯೂಚರ್ ಸ್ಟಾರ್‌ದ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳಿಗೆ, ಮುಂದಿನ ದಾಖಲೆಗಳನ್ನು ಗಮನವಿಟ್ಟು ಓದಿ..

SBI Life – Smart Future Star Plan
**ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ.

3X/ver1/03/25/WEB/KAN

*ತೆರಿಗೆ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.
ನೀವು ಭಾರತದಲ್ಲಿನ ಅನ್ವಯವಾಗುವ ಆದಾಯತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.