ಉದ್ಯೋಗಿಯ ನಿವೃತ್ತಿ ಪ್ರಯೋಜನಗ ವಿಮೆ | ಕ್ಯಾಪ್ಅಸ್ಯೂರ್ ಗೋಲ್ಡ್
SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಕ್ಯಾಪ್‌ಅಶ್ಯೂರ್ ಗೋಲ್ಡ್

UIN: 111N091V03

ಪ್ರಾಡಕ್ಟ್ ಕೋಡ್ : 73

ಎಸ್‌ಬಿಐ ಲೈಫ್ -ಕ್ಯಾಪ್‌ಅಶ್ಯೂರ್ ಗೋಲ್ಡ್

ನಿಮ್ಮ ಸಿಬ್ಬಂದಿಗಳ ಯೋಗಕ್ಷೇಮವನ್ನು ಸುನಿಶ್ಚಿತಗೊಳಿಸಿರಿ
ನಮ್ಮ ಸಮರ್ಪಿತ ಫಂಡ್ ತಜ್ಞರೊಂದಿಗೆ.

  • ಉದ್ಯೋಗಿ ಲಾಭದ ಸಮಾಧಾನಗಳು
  • ಅವಶ್ಯಕತೆಯಂತೆ ಸೇವೆಗಳು
  • ಸಮರ್ಪಿತ ಸೇವಾ ತಂಡ

ಒಂದು ನಾನ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್, ಗ್ರೂಪ್ ಫಂಡ್ ಬೇಸ್ಡ್, ಲೈಫ್ ಇನ್‌ಶೂರೆನ್ಸ್ ಉತ್ಪನ್ನವಾಗಿದೆ.

 

ಫಂಡ್ ನಿರ್ವಹಣೆಯ ತೊಡಕಿಲ್ಲದೆ ನೀವು ನಿಮ್ಮ ಉದ್ಯೋಗಿಗಳಿಗೆ ನಿರಂತರ ಪ್ರತಿಫಲಗಳೊಂದಿಗೆ ಗ್ರೂಪ್ ಕವರೇಜ್ ಒದಗಿಸಲು ಇಚ್ಛಿಸುವಿರಾ?

 

ಎಸ್‌ಬಿಐ ಲೈಫ್ -ಕ್ಯಾಪ್‌ಅಶ್ಯೂರ್ ಗೋಲ್ಡ್ ಪ್ಲಾನ್, ತಮ್ಮ ಉದ್ಯೋಗಿಗಳ ಗ್ರ್ಯಾಚುಯಿಟಿ, ರಜೆಯ ನಗದೀಕರಣ, ವಯೋನಿವೃತ್ತಿ, ನಿವೃತ್ತಿನಂತರದ ವೈದ್ಯಕೀಯ ಲಾಭದ ಸ್ಕೀಮ್ (ಪಿಆರ್‌ಎಮ್‌ಬಿಎಸ್) ಮತ್ತು ಇತರ ಉಳಿತಾಯ ಸ್ಕೀಮ್‌ನಂತಹ ರಿಟೈರ್‌ಮೆಂಟ್ ಲಾಭದ ಸ್ಕೀಮ್‌ಗಳಿಗೆ ನಿಧಿ ಒದಗಿಸಲು ಇಚ್ಛಿಸುವ ಉದ್ಯೋಗದಾತರು/ಟ್ರಸ್ಟೀಗಳು/ರಾಜ್ಯ ಸರಕಾರಗಳು/ಕೇಂದ್ರ ಸರಕಾರ/ಪಿಎಸ್‌ಯುಗಳು-ಇವರ ಅವಶ್ಯಕತೆಗಳನ್ನು ಪೂರೈಸುತ್ತದೆ.

 

ಈ ಪ್ಲಾನ್ ಈ ಕೆಳಗಿನವುಗಳನ್ನು ನೀಡುತ್ತದೆ-

  • ಸುರಕ್ಷತೆ - ವೃತ್ತಿಪರ ಹಾಗೂ ಪೂಲ್ಡ್‌ ಫಂಡ್ ನಿರ್ವಹಣೆಯ ಮೂಲಕ ನಿರಂತರ ಪ್ರತಿಫಲಗಳು
  • ಭರವಸೆಯುಕ್ತ - ಸಮರ್ಪಿತ ಸೇವಾ ತಂಡ
  • ಪರಿವರ್ತನೀಯತೆ - ಸ್ಕೀಮ್‌ನ ನಿಯಮಗಳ ವಿಶಾಲ ಶ್ರೇಣಿಯನ್ನು ನಿರ್ವಹಿಸುವುದು
 

ನಿಮ್ಮ ಉದ್ಯೋಗಿಗಳ ಕಲ್ಯಾಣವನ್ನು ಮತ್ತು ಆರ್ಥಿಕ ಭವಿಷ್ಯವನ್ನು ಸುನಿಶ್ಚಿತಗೊಳಿಸಿರಿ

ಮುಖ್ಯಾಂಶಗಳು

ಎಸ್‌ಬಿಐ ಲೈಫ್ -ಕ್ಯಾಪ್‌ಅಶ್ಯೂರ್ ಗೋಲ್ಡ್

ಒಂದು ನಾನ್-ಲಿಂಕ್ಡ್ , ನಾನ್ ಪಾರ್ಟಿಸಿಪೇಟಿಂಗ್, ಗ್ರೂಪ್ ಸೇವಿಂಗ್ಸ್ ಇನ್ಶೂರೆನ್ಸ್ ಉತ್ಪನ್ನವಾಗಿದೆ

ವೈಶಿಷ್ಟ್ಯಗಳು

  • ಉದ್ಯೋಗಿ ಲಾಭದ ಸ್ಕೀಮ್‌ಗಳಿಗಾಗಿ ಅನುಭವಿ ಹಾಗೂ ವೃತ್ತಿಪರ ಫಂಡ್ ನಿರ್ವಾಹಕರು
  • ಸಂಪರ್ಕದ ಏಕ ಪಾಯಿಂಟ್ ಆಗಿ ಸಮರ್ಪಿತ ಸೇವಾ ತಂಡ
  • ವಿಶಾಲ ಶ್ರೇಣಿಯ ಸ್ಕೀಮ್ ನಿಯಮಗಳು; ನಿರ್ಧಾರಿತ ಲಾಭಗಳು; ನಿರ್ಧಾರಿತ ವಂತಿಗೆಗಳು ಅಥವಾ ಹೈಬ್ರಿಡ್ ಎರಡರ ಸಂಯೋಜನೆ
  • ಅನೇಕ ಪ್ರೀಮಿಯಮ್ ಪಾವತಿಯ ಆವರ್ತನ

ಪ್ರಯೋಜನಗಳು

ಸುರಕ್ಷತೆ
  • ನಿಮ್ಮ  ವಂತಿಗೆಗಳ ಮೇಲೆ ನಿರಂತರ ಪ್ರತಿಫಲಗಳು
ಭರವಸೆಯುಕ್ತ
  • ನಿಮ್ಮ ಆಪರೇಶನಲ್ ಅವಶ್ಯಕತೆಗಾಗಿ ಸಮರ್ಪಿತ ಸೇವೆಗಳು
ಪರಿವರ್ತನೀಯತೆ
  • ನಿಮ್ಮ ಅನುಕೂಲತೆಯಂತೆ ಪ್ರೀಮಿಯಮ್ ಪಾವತಿ ಆವರ್ತನಗಳು
ತೆರಿಗೆ ಲಾಭಗಳನ್ನು ಪಡೆಯಿರಿ*

ಸ್ಕೀಮ್‌ನ ಪ್ರಯೋಜನ:

ಸ್ಕೀಮ್‌ನ ನಿಯಮಗಳನ್ನು ಅವಲಂಬಿಸಿ ಮೃತ್ಯು, ನಿವೃತ್ತಿ, ರಾಜೀನಾಮೆ , ಹಿಂತೆಗೆಯುವಿಕೆ ಅಥವಾ ಸದಸ್ಯರ ಇತರ ಯಾವುದೇ ರೀತಿಯ ಹೊರ ಹೋಗುವಿಕೆಯ ಪ್ರಸಂಗದಲ್ಲಿ ಲಾಭಗಳು ಪಾವತಿಸಲ್ಪಡುತ್ತವೆ. ನಿವೃತ್ತಿ ನಂತರದ ವೈದ್ಯಕೀಯ ಲಾಭ ಸ್ಕೀಮ್‌ಗಳ ಸಂದರ್ಭದಲ್ಲಿ , ಸ್ಕೀಮ್‌ನ ನಿಯಮಗಳಂತೆ, ವ್ಯಾಖ್ಯಾನಿತ ಪ್ರಕರಣವು ಉಂಟಾದಾಗ, ನಿವೃತ್ತರಿಗೆ ವೈದ್ಯಕೀಯ ಲಾಭಗಳು ಪಾವತಿಸಲ್ಪಡುತ್ತವೆ. ಪಾಲಿಸಿ ಖಾತೆಯಲ್ಲಿ ಫಂಡ್‌ಗಳ ಉಪಲಬ್ಧತೆಗೆ ಒಳಪಟ್ಟು ಇಂತಹ ಲಾಭಗಳನ್ನು ಅನ್ವಯವಾಗುವಂತೆ ಮಾಸ್ಟರ್ ಪಾಲಿಸಿದಾರರ ಅಥವಾ ಸದಸ್ಯರ ಪಾಲಿಸಿ ಖಾತೆಯಿಂದ ಪಾವತಿಸಲಾಗುತ್ತದೆ.

ಇನ್‌ಶೂರೆನ್ಸ್  ಲಾಭ :

ಸದಸ್ಯರ ಮೃತ್ಯು ಸಂಭವಿಸಿದ ಪ್ರಸಂಗದಲ್ಲಿ ಮಾಸ್ಟರ್ ಪಾಲಿಸಿದಾರರ ಸಲಹೆಯಂತೆ ವಿಮಾ ಮೊತ್ತಕ್ಕಾಗಿ ನಾಮನಿರ್ದೇಶಿತರಿಗೆ ಪಾವತಿಸಲಾಗುತ್ತದೆ. ಗ್ರ್ಯಾಚುಯಿಟಿ, ಲೀವ್ ಎನ್‌ಕ್ಯಾಶ್‌ಮೆಂಟ್, ಸೂಪರ್ ಆ್ಯನುಯೇಶನ್, ನಿವೃತ್ತಿ ನಂತರದ ವೈದ್ಯಕೀಯ ಲಾಭ ಸ್ಕೀಮ್‌ (ಪಿಆರ್‌ಎಮ್‌ಬಿಎಸ್) ಮತ್ತು ಇತರ ಉಳಿತಾಯ ಸ್ಕೀಮ್‌ಗಳಿಗೆ ವಿಮಾ ಸುರಕ್ಷೆಯು ಕಡ್ಡಾಯವಾಗಿದೆ. ಇಂತಹ ಲಾಭಗಳು ಎಸ್‌ಬಿಐ ಲೈಫ್‌ ನಿಂದ ಪಾವತಿಸಲ್ಪಡುತ್ತದೆ.

ಎಸ್‌ಬಿಐ ಲೈಫ್ – ಕ್ಯಾಪ್‌ಅಶ್ಯೂರ್ ಗೋಲ್ಡ್ನ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.

null

73/ver1/08/24/WEB/KAN

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

*ತೆರಿಗೆ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ಕರ ಕಾನೂನುಗಳ ಪ್ರಕಾರ ಆದಾಯ ಕರ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ,ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.