ಆರ್ಥಿಕ ಸುರಕ್ಷತೆಯನ್ನು ನೀಡುವುದು ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತಗೊಳಿಸಲಾಗುತ್ತದೆ ಎಂದು ಖಾತ್ರಿ ಮಾಡಿಕೊಳ್ಳುವುದು
ಇನ್‌ಬಿಲ್ಟ್ ಎಕ್ಸಿಲರೇಟೆಡ್ ಟರ್ಮಿನಲ್ ಇಲ್‌ನೆಸ್ ಲಾಭ$ ಮತ್ತು ಸಮಗ್ರ ಕವರೇಜ್‌ಗಾಗಿ ಎರಡು ರೈಡರ್ ಆಯ್ಕೆಗಳೊಂದಿಗೆ ಎರಡು ಲಾಭದ ರಚನೆಗಳು
ಸರಳವಾದ ಆನ್‌ಲೈನ್ ಅರ್ಜಿ ಪ್ರಕ್ರಿಯೆ
ಧೂಮಪಾನ ಮಾಡದೆ ಇರುವವರಿಗಾಗಿ ಪ್ರೀಮಿಯಮ್‌ಗಳಲ್ಲಿ ಡಿಸ್ಕೌಂಟ್
ವೈದ್ಯಕೀಯ ಎರಡನೇ ಅಭಿಪ್ರಾಯ
ಪ್ರಯೋಜನಗಳು
ಸುರಕ್ಷತೆ
ನಿಮ್ಮ ಆಯ್ಕೆ ಮಾಡಲಾದ ಲಾಭದ ರಚನೆಗಳೊಂದಿಗೆ ನಿಮ್ಮ ಕುಟುಂಬದ ಆರ್ಥಿಕ ಸುರಕ್ಷತೆಯನ್ನು ಪಡೆಯಿರಿ
ಪರಿವರ್ತನೀಯತೆ
ನಿಮ್ಮ ಸಂರಕ್ಷಣೆಯ ಅವಶ್ಯಕತೆಗಳಂತೆ ಎರಡು ಲಾಭದ ರಚನೆಗಳ ನಡುವೆ ಆಯ್ಕೆ ಮಾಡಿರಿ
ಸಮಗ್ರ ಕವರೇಜ್ ಒದಗಿಸಲು ಎರಡು ರೈಡರ್‌ಗಳ ಆಯ್ಕೆಗಳು
ಸರಳತೆ
ಸರಳ ಆನ್‌ಲೈನ್ಅರ್ಜಿ
ಕೈಗೆಟಕುವಂತಹದ್ದು
ಕೈಗೆಟಕುವ ಪ್ರೀಮಿಯಮ್‌ನಲ್ಲಿ ಅನೇಕ ಲಾಭಗಳನ್ನು ಆನಂದಿಸಿರಿ
ಧೂಮಪಾನ ಮಾಡದವರಿಗಾಗಿ ಪ್ರೀಮಿಯಮ್‌ನಲ್ಲಿ ಡಿಸ್ಕೌಂಟ್
ವಿಶ್ವಾಸಾರ್ಹತೆ
ವೈದ್ಯಕೀಯ ತಜ್ಞರ ಪ್ಯಾನಲ್‌ನಿಂದ ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಪಡೆದುಕೊಳ್ಳಿರಿ
ತೆರಿಗೆ ಲಾಭಗಳನ್ನು ಪಡೆಯಿರಿ*
ಲಾಭದರಚನೆಗಳು :
ಪ್ಲಾನ್ ಎರಡು ಲಾಭದ ರಚನೆಗಳನ್ನು ನೀಡುತ್ತದೆ - ಲೆವೆಲ್ ಕವರ್ ಲಾಭ ಮತ್ತು ಹೆಚ್ಚುತ್ತಿರುವ ಕವರ್ ಲಾಭ. ಎರಡೂ ರಚನೆಗಳಿಗೆ ಒಂದು ಇನ್‌ಬಿಲ್ಟ್ ಲಾಭವಾಗಿ ಎಕ್ಸಿಲರೇಟೆಡ್ ಟರ್ಮಿನಲ್ ಇಲ್‌ನೆಸ್ ಲಾಭ$ ಉಪಲಬ್ಧವಿದೆ.
ಲೆವೆಲ್ ಕವರ್ ಲಾಭ:
ಈ ರಚನೆಯಡಿಯಲ್ಲಿ, ಪಾಲಿಸಿ ಅವಧಿಯಾದ್ಯಂತ ಆಶ್ವಾಸಿತ ಮೊತ್ತವು ಒಂದೇ ಆಗಿರುತ್ತದೆ
ನೀವು ಟರ್ಮಿನಲ್ ಇಲ್‌ನೆಸ್‌ನ (ಗಂಭೀರ ಕಾಯಿಲೆ) ವಿರುದ್ಧ ಸಂರಕ್ಷಣೆ ಪಡೆಯುವಿರಿ#
ಪಾಲಿಸಿಯ ಕಾಲಾವಧಿಯಲ್ಲಿ, ದುರಾದೃಷ್ಟಕರ ಮೃತ್ಯು ಸಂಭವಿಸಿದಲ್ಲಿ ಅಥವಾ ಟರ್ಮಿನಲ್ ಇಲ್‌ನೆಸ್‌ನ # ರೋಗ ನಿರ್ಣಯ ಮಾಡಲ್ಪಟ್ಟಲ್ಲಿ, ಇವುಗಳಲ್ಲಿ ಯಾವುದು ಮೊದಲೋ ಆಗ, ಒದಗಿಸಲಾಗಿದ್ದ ಪಾಲಿಸಿಯು ಜಾರಿಯಲ್ಲಿದ್ದರೆ ''ಮೃತ್ಯುವಿನ ಮೇಲೆ ವಿಮೆಮಾಡಿದ ಮೊತ್ತ"ವನ್ನು ಪಾವತಿಸಲಾಗುತ್ತದೆ ಮತ್ತು ಪಾಲಿಸಿ ಕೊನೆಗೊಳ್ಳುತ್ತದೆ
ಇಲ್ಲಿ ‘‘ಮೃತ್ಯುವಿನ ಸಂದರ್ಭದಲ್ಲಿ ಆಶ್ವಾಸಿತ ಮೊತ್ತ’’ವು ಈ ಕೆಳಗಿನವುಗಳ ಪೈಕಿ ಹೆಚ್ಚಿನದ್ದಾಗಿದೆ :
ವಾರ್ಷಿಕೀಕೃತ ಪ್ರೀಮಿಯಮ್**ನ 10 ಪಟ್ಟು, ಅಥವಾ
ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್‌ಗಳ^ 105%, ಅಥವಾ
ಮೃತ್ಯುವಿನ ಸಂದರ್ಭದಲ್ಲಿ ಪಾವತಿಸಲು ಆಶ್ವಾಸಿಸಲಾದ ಸಂಪೂರ್ಣ ಮೊತ್ತ, ಇದು ಮೃತ್ಯುವಿನ ದಿನಾಂಕದಂತೆ ಪರಿಣಾಮಕಾರಿ ಆಶ್ವಾಸಿತ ಮೊತ್ತ##ಕ್ಕೆ ಸಮನಾಗಿದೆ
##ಮೃತ್ಯುವಿನ ದಿನಾಂಕದಂತೆ ಲೆವೆಲ್ ಕವರ್ ಲಾಭಕ್ಕಾಗಿ ಪರಿಣಾಮಕಾರಿ ಆಶ್ವಾಸಿತ ಮೊತ್ತವು ಆಯ್ಕೆ ಮಾಡಲಾದ ಆರಂಭಿಕ ಆಶ್ವಾಸಿತ ಮೊತ್ತವಾಗಿದೆ.
ಹೆಚ್ಚುತ್ತಿರುವ ಕವರ್ ಲಾಭ :
ಈ ರಚನೆಯಡಿಯಲ್ಲಿ, ಪ್ರತಿ 5ನೇ ಪಾಲಿಸಿ ವರ್ಷದ ಅಂತ್ಯದಲ್ಲಿ ಆಶ್ವಾಸಿತ ಮೊತ್ತವು ಸ್ವಯಂಚಾಲಿತವಾಗಿ 10%ರ ಸರಳ ದರದಲ್ಲಿ ಹೆಚ್ಚುತ್ತದೆ.
ನೀವು ಟರ್ಮಿನಲ್ ಇಲ್‌ನೆಸ್‌ನ ವಿರುದ್ಧ ಸಂರಕ್ಷಣೆ ಪಡೆಯುವಿರಿ#
ಪಾಲಿಸಿಯ ಕಾಲಾವಧಿಯಲ್ಲಿ ದುರಾದೃಷ್ಟಕರ ಮೃತ್ಯು ಸಂಭವಿಸಿದಲ್ಲಿ ಅಥವಾ ಟರ್ಮಿನಲ್ ಇಲ್‌ನೆಸ್‌ನ # ರೋಗ ನಿರ್ಣಯ ಮಾಡಲ್ಪಟ್ಟಲ್ಲಿ, ಇವುಗಳಲ್ಲಿ ಯಾವುದು ಮೊದಲೋ ಆಗ, ಪಾಲಿಸಿಯು ಜಾರಿಯಲ್ಲಿದ್ದರೆ, ಆ ಪಾಲಿಸಿ ವರ್ಷಕ್ಕಾಗಿ "ಮೃತ್ಯುವಿನ ಮೇಲೆ ವಿಮೆಮಾಡಿದ ಮೊತ್ತ"ವನ್ನು ಪಾವತಿಸಲಾಗುತ್ತದೆ ಮತ್ತು ಪಾಲಿಸಿಯು ಕೊನೆಗೊಳ್ಳುತ್ತದೆ.
ಇಲ್ಲಿ ‘‘ಮೃತ್ಯುವಿನ ಸಂದರ್ಭದಲ್ಲಿ ಆಶ್ವಾಸಿತ ಮೊತ್ತ’’ವು ಈ ಕೆಳಗಿನವುಗಳ ಪೈಕಿ ಹೆಚ್ಚಿನದ್ದಾಗಿದೆ :
ವಾರ್ಷಿಕೀಕೃತ ಪ್ರೀಮಿಯಮ್**ನ 10 ಪಟ್ಟು, ಅಥವಾ
ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್‌ಗಳ^ 105%, ಅಥವಾ
ಮೃತ್ಯುವಿನ ಸಂದರ್ಭದಲ್ಲಿ ಪಾವತಿಸಲು ಆಶ್ವಾಸಿಸಲಾದ ಸಂಪೂರ್ಣ ಮೊತ್ತ, ಇದು ಮೃತ್ಯುವಿನ ದಿನಾಂಕದಂತೆ ಪರಿಣಾಮಕಾರಿ ಆಶ್ವಾಸಿತ ಮೊತ್ತ~~ಕ್ಕೆ ಸಮನಾಗಿದೆ
~~ಮೃತ್ಯುವಿನ ದಿನಾಂಕದಂತೆ ಹೆಚ್ಚುತ್ತಿರುವ ಕವರ್ ಲಾಭಕ್ಕಾಗಿ ಪರಿಣಾಮಕಾರಿ ಆಶ್ವಾಸಿತ ಮೊತ್ತವು ಮೃತ್ಯುವಿನ ತಾರೀಖಿನ ಮೊದಲು ಪ್ರತೀ 5ನೇ ಪಾಲಿಸಿ ವರ್ಷದ ಕೊನೆಯಲ್ಲಿ 10%ರ ಸರಳ ದರದಲ್ಲಿ ಆಯ್ದು ಕೊಂಡ ಆರಂಭಿಕ ಆಶ್ವಾಸಿತ ಮೊತ್ತದ ಹೆಚ್ಚಳವಾಗಿರುತ್ತದೆ.
#ಟರ್ಮಿನಲ್ ಇಲ್‌ನೆಸ್‌ನ್ನು 180 ದಿನಗಳೊಳಗೆ ವಿಮೆ ಮಾಡಿಸಿಕೊಂಡವರ ಮೃತ್ಯುವಿಗೆ ಕಾರಣವಾಗುವುದೆಂದು ನಿರೀಕ್ಷಿಸಲಾಗುವ ಒಂದು ಅಸೌಖ್ಯತೆಯ ನಿರ್ಣಾಯಕ ರೋಗ ನಿದಾನವೆಂದು ವ್ಯಾಖ್ಯಾನಿಸಲಾಗಿದೆ.
**ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ, ಕರಗಳು, ರೈಡರ್ ಪ್ರೀಮಿಯಮ್‌ಗಳು, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಂಗಳು ಮತ್ತು ಮಾಡೆಲ್ ಪ್ರೀಮಿಯಮ್‌ಗಳಿಗಾಗಿ ಲೋಡಿಂಗ್ಸ್ ಏನಾದರೂ ಇದ್ದರೆ, ಇವನ್ನು ಹೊರತುಪಡಿಸಿ ಪಾಲಿಸಿದಾರರಿಂದ ಆಯ್ಕೆ ಮಾಡಲಾದಂತೆ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರೀಮಿಯಮ್ ಆಗಿದೆ.
^ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ಗಳು ಎಂದರೆ, ಯಾವುದೇ ಹೆಚ್ಚುವರಿ ಪ್ರೀಮಿಯಮ್, ಯಾವುದೇ ರೈಡರ್ ಪ್ರೀಮಿಯಮ್ ಮತ್ತು ಕರಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತವಾಗಿದೆ.
ಮೃತ್ಯು ಲಾಭ:
ಆಯ್ಕೆ ಮಾಡಲಾದ ಲಾಭದ ರಚನೆಯನ್ನು ಅವಲಂಭಿಸಿ, ನಾಮ ನಿರ್ದೇಶಿತರು ‘‘ಮೃತ್ಯುವಿನ ಸಂದರ್ಭದಲ್ಲಿನ ಅಶ್ವಾಸಿತ ಮೊತ್ತ’’ವನ್ನು ಪಡೆಯುತ್ತಾರೆ
ಪಾಲಿಸಿದಾರರು ಆ ತಾರೀಖಿನ ತನಕ ಎಲ್ಲಾ ನಿಯಮಿತ ಪ್ರೀಮಿಯಮ್‌ಗಳನ್ನು ಸಂದಾಯ ಮಾಡಿದ್ದರೆ ಮತ್ತು ವಿಮೆ ಮಾಡಿಸಿಕೊಂಡವರ ಮೃತ್ಯುವಿನ ತಾರೀಖಿನಂದು ಪಾಲಿಸಿಯು ಊರ್ಜಿತ ವಿದ್ದರೆ ಮೃತ್ಯು ಲಾಭವನ್ನು ಪಾವತಿಸಲಾಗುತ್ತದೆ.
$ಎಕ್ಸಿಲರೇಟೆಡ್ ಟರ್ಮಿನಲ್ ಇಲ್‌ನೆಲ್ ಲಾಭ :
ಎರಡೂ ಲಾಭದ ರಚನೆಗಳೊಂದಿಗೆ ಈ ಅಂತರ್ಗತ ಲಾಭ ಲಭ್ಯವಿದೆ.
ವಿಮಾದಾರರಲ್ಲಿ ಟರ್ಮಿನಲ್ ಇಲ್‌ನೆಸ್ ಇದೆ ಎಂಬುದಾಗಿ ರೋಗ ನಿದಾನ ಮಾಡಲ್ಪಟ್ಟಾಗ, ಮೃತ್ಯುವಿನ ಸಂದರ್ಭದಲ್ಲಿನ ಲಾಭಕ್ಕೆ ಸಮನಾದ ಲಾಭವನ್ನು ಪಾವತಿಸಲಾಗುತ್ತಿದೆ ಮತ್ತು ಪಾಲಿಸಿ ಕೊನೆಗೊಳ್ಳುತ್ತದೆ
ನೀವು ಆ ತಾರೀಖಿನ ತನಕ ನಿಮ್ಮ ನಿಯಮಿತ ಪ್ರೀಮಿಯಮ್‌ಗಳನ್ನು ಸಂದಾಯ ಮಾಡಿದ್ದರೆ ಮತ್ತು ರೋಗ ನಿದಾನದ ತಾರೀಖಿನಂದಿನಂತೆ ನಿಮ್ಮ ಪಾಲಿಸಿಯು ಊರ್ಜಿತವಿದ್ದರೆ ಎಕ್ಸಿಲರೇಟೆಡ್ ಟರ್ಮಿನಲ್ ಲಾಭವನ್ನು ಪಾವತಿಸಲಾಗುತ್ತದೆ. ಟರ್ಮಿನಲ್ ಇಲ್‌ನೆಸ್ ಕ್ಲೈಮ್‌ನ ಪರಿಣಾಮಗಾಗಿ ಪಾಲಿಸಿ ಕೊನೆಗೊಳ್ಳುತ್ತದೆ.
180 ದಿನಗಳೊಳಗೆ ವಿಮೆ ಮಾಡಿಸಿಕೊಂಡವರ ಮೃತ್ಯುವಿಗೆ ಕಾರಣವಾಗುವುದೆಂದು ನಿರೀಕ್ಷಿಸಲಾಗುವ ಒಂದು ಅಸೌಖ್ಯತೆಯ ನಿರ್ಣಾಯಕ ರೋಗ ನಿದಾನವನ್ನು ಟರ್ಮಿನಲ್ ಇಲ್‌ನೆಸ್ ಎಂದು ವ್ಯಾಖ್ಯಾನಿಸಲಾಗಿದೆ.
ವೈದ್ಯಕೀಯ ಎರಡನೇ ಅಭಿಪ್ರಾಯ:
ವೈದ್ಯಕೀಯ ಎರಡನೇ ಅಭಿಪ್ರಾಯವು ಒಂದು ಸೇವೆಯಾಗಿದ್ದು, ಇದು ವಿಮೆ ಮಾಡಿಸಿಕೊಂಡವರಿಗೆ ತಮ್ಮ ರೋಗ ನಿರ್ಣಯ ಮತ್ತು ಚಿಕತ್ಸಾ ಯೋಜನೆಗಳ ಬಗ್ಗೆ ಇನ್ನೋರ್ವ ವೈದ್ಯರಿಂದ ಎರಡನೇ ಅಭಿಪ್ರಾಯ ಪಡೆಯುವುದಕ್ಕೆ ಸಾಧ್ಯವಾಗಿಸುತ್ತದೆ.
ಒದಗಿಸಲಾದ ಪಾಲಿಸಿಯು ಜಾರಿಯಲ್ಲಿದ್ದರೆ, ಎರಡೂ ಲಾಭಗಳ ರಚನೆಗಳಡಿಯಲ್ಲಿ ಲಭ್ಯವಿದೆ, ಅಂದರೆ ಲೆವೆಲ್ ಕವರ್ ಲಾಭ ಮತ್ತು ಹೆಚ್ಚುತ್ತಿರುವ ಕವರ್ ಲಾಭ.
ಪರಿಪಕ್ವತೆಯ ಲಾಭ:
ಈ ಪ್ಲಾನ್ ಪರಿಪಕ್ವತೆಯ ಲಾಭವನ್ನು ಒದಗಿಸುವುದಿಲ್ಲ.
ರೈಡರ್ ಲಾಭ:
ಎಸ್‌ಬಿಐ ಲೈಫ್ - ಆ್ಯಕ್ಸಿಡೆಂಟಲ್ ಡೆತ್ ಬೆನಿಫಿಟ್ ರೈಡರ್ (UIN: 111B015V03)
ಪಾಲಿಸಿಯು ಊರ್ಜಿತದಲ್ಲಿದ್ದು, ರೈಡರ್‌ರ ಕಾಲಾವಧಿಯಲ್ಲಿ ಒಂದು ಅಪಘಾತದ ಕಾರಣದಿಂದ 120 ದಿನಗಳೊಳಗೆ ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದಲ್ಲಿ ರೈಡರ್ ಆಶ್ವಾಸಿತ ಮೊತ್ತವನ್ನು ಪಾವತಿಸಲಾಗುತ್ತದೆ.
ಎಸ್‌ಬಿಐ ಲೈಫ್ – ಆ್ಯಕ್ಸಿಡೆಂಟಲ್ ಟೋಟಲ್ ಆಂಡ್ ಪರ್ಮನೆಂಟ್ ಡಿಸೆಬಿಲಿಟಿ ಬೆನಿಫಿಟ್ ರೈಡರ್ (UIN: 111B016V03)
ಪಾಲಿಸಿಯು ಊರ್ಜಿತದಲ್ಲಿದ್ದು, ರೈಡರ್‌ನ ಕಾಲಾವಧಿಯಲ್ಲಿ ವಿಮೆ ಮಾಡಿಸಿಕೊಂಡವರು ಅಪಘಾತದಿಂದ ಸಂಪೂರ್ಣ ಮತ್ತು ಖಾಯಂ ಅಶಕ್ತತೆಗೆ ಒಳಗಾದದಲ್ಲಿ ರೈಡರ್ ಆಶ್ವಾಸಿತ ಮೊತ್ತವನ್ನು ಪಾವತಿಸಲಾಗುತ್ತದೆ.
ಎಸ್‌ಬಿಐ ಲೈಫ್ – ಇಶೀಲ್ಡ್ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳಿಗೆ, ಮುಂದಿನ ದಾಖಲೆಗಳನ್ನು ಗಮನವಿಟ್ಟು ಓದಿ.
^ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ. $$ಈ ಮೇಲೆ ತೋರಿಸಲಾದ ಪ್ರೀಮಿಯಂ ಅನ್ವಯವಾಗುವ ತೆರಿಗೆಗೆಳು ಮತ್ತು ಅಂಡರ್‌ರೈಟಿಂಗ್ ಹೆಚ್ಚುವರಿಯ ಹೊರತಾಗಿದೆ. ಪ್ರಸಕ್ತ ತೆರಿಗೆ ಕಾನೂನುಗಳಂತೆ ತೆರಿಗೆಗಳು ಅನ್ವಯವಾಗುತ್ತವೆ.
1G.ver.02-04-21 WEB KAN
ಅಪಾಯದ ಅಂಶಗಳು, ಷರತ್ತುಗಳು ಹಾಗೂ ನಿಬಂಧನೆಗಳ ಬಗೆಗಿನ ವಿವರಗಳಿಗೆ, ಯೋಜನೆಯನ್ನು ಖರೀದಿಸುವ ಮೊದಲು ದಯವಿಟ್ಟು ಮಾರಾಟ ಕೈಪಿಡಿಯನ್ನು ಗಮನದಿಂದ ಓದಿರಿ.
ಅಪಾಯದ ಅಂಶಗಳು, ಷರತ್ತುಗಳು ಹಾಗೂ ನಿಬಂಧನೆಗಳ ರೈಡರ್ಸ್ ಬಗೆಗಿನ ವಿವರಗಳಿಗೆ, ಯೋಜನೆಯನ್ನು ಖರೀದಿಸುವ ಮೊದಲು ದಯವಿಟ್ಟು ರೈಡರ್ ಕೈಪಿಡಿಯನ್ನು ಗಮನದಿಂದ ಓದಿರಿ.ವಿರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮೂಲೋಚಿಸಿರಿ
*ತೆರಿಗೆ ಪ್ರಯೋಜನಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.