ಮೈಕ್ರೋ ಟರ್ಮ್ ಅಶ್ಯೂರೆನ್ಸ್ ಪ್ಲಾನ್ | ಎಸ್‌ಬಿ‌ಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿ‌ಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್

UIN: 111N138V01

play icon play icon
ಎಸ್ಬಿಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್

ರಕ್ಷಣೆಯನ್ನು ಎಲ್ಲರಿಗೂ
ಸುಲಭಗೊಳಿಸಲಾಗಿದೆ

ಗ್ರೂಪ್, ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಪ್ಯೂರ್ ರಿಸ್ಕ್ ಪ್ರೀಮಿಯಂ, ಒಂದು ವರ್ಷದ ನವೀಕರಿಸಬಹುದಾದ ಮೈಕ್ರೋ ಲೈಫ್ ಇನ್‌ಶೂರೆನ್ಸ್ ಪ್ರಾಡಕ್ಟ್.

ನಿಮ್ಮ ಗ್ರೂಪ್ ಸದಸ್ಯರಿಗೆ ಕೈಗೆಟುಕುವ ಪ್ರೀಮಿಯಂನಲ್ಲಿ ಜೀವ ವಿಮೆಯ ರಕ್ಷಣೆಯನ್ನು ಒದಗಿಸಲು ನೀವು ಉತ್ಸುಕರಾಗಿರುವಿರಾ? 

ಹಾಗಿದ್ದಲ್ಲಿ, ಎಸ್‌ಬಿ‌ಐ ಲೈಫ್ – ಗ್ರೂಪ್ ಮೈಕ್ರೋ ಶೀಲ್ಡ್ ಎನ್ನುವುದು ವಿಶೇಷವಾಗಿ 'ಇನ್‌ಶೂರೆನ್ಸ್ ಕವರ್' ಅಗತ್ಯವಿರುವ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ವಿನ್ಯಾಸಗೊಳಿಸಲಾದ ಒಂದು ಯೋಜನೆಯಾಗಿದೆ. ಎಸ್‌ಬಿ‌ಐ ಲೈಫ್ – ಗ್ರೂಪ್ ಮೈಕ್ರೋ ಶೀಲ್ಡ್ ಜೊತೆಗೆ ನೀವು ನಿಮ್ಮ ಸದಸ್ಯರಿಗೆ ಯಾವುದೇ ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ಅವರ ಕುಟುಂಬಗಳು ಆರ್ಥಿಕ ಭದ್ರತೆಯನ್ನು ಹೊಂದಿರುತ್ತವೆ ಎನ್ನುವ ಭರವಸೆಯನ್ನು ನೀಡಬಹುದು.

ಪ್ರಾಡಕ್ಟ್‌ನ ಪ್ರಮುಖ ವಿಶೇಷತೆಗಳು:
  • ಎಸ್‌ಬಿ‌ಐ ಲೈಫ್ – ಗ್ರೂಪ್ ಮೈಕ್ರೋ ಶೀಲ್ಡ್ ಎನ್ನುವುದು ನಿಮ್ಮ ಸದಸ್ಯರ ವಿಮಾ ಅಗತ್ಯಗಳಿಗೆ ಒಂದು ಪರಿಪೂರ್ಣ ಪರಿಹಾರವಾಗಿದೆ.
  • ಚಾಲ್ತಿಯಲ್ಲಿರುವ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಉದ್ಯೋಗದಾತ – ನೌಕರ ಗ್ರೂಪ್‌ಗಳು, ಮೈಕ್ರೋ ಫೈನಾನ್ಸ್ ಇನ್ಸ್‌ಟಿಟ್ಯೂಶನ್‌ಗಳ ಗ್ರೂಪ್ ಸದಸ್ಯರು, ಸ್ವಸಹಾಯ ಗ್ರೂಪ್‌ಗಳು, ಬ್ಯಾಂಕ್/ಹಣಕಾಸು ಸಂಸ್ಥೆಗಳು, ಎನ್‌ಜಿಒಗಳು, ಯಾವುದೇ ಅಫಿನಿಟಿ ಗ್ರೂಪ್‌ಗಳು (ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ) ಇವೇ ಮೊದಲಾದವುಗಳನ್ನು ಕವರ್ ಮಾಡಲು ಪ್ಲಾನ್ ವಿಶಾಲವಾಗಿ ಅವಕಾಶವನ್ನು ನೀಡುತ್ತದೆ.
  • ದಾಖಲುಗೊಳ್ಳಲು ಮತ್ತು ನಿರ್ವಹಿಸಲು ಸುಲಭವಾಗಿದೆ.
  • ಹೊಂದಿಕೊಳ್ಳುವ ಪ್ರೀಮಿಯಂ ಪಾವತಿ ಆವರ್ತನ

ಮುಖ್ಯಾಂಶಗಳು

ಎಸ್ಬಿಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್

Group pure term micro insurance, non-linked, non-participating plan

 

ವಿಶೇಷತೆಗಳು:

  • ನಿಮ್ಮ ಗ್ರೂಪ್ ಸದಸ್ಯರಿಗೆ ಟರ್ಮ್ ಇನ್‌ಶೂರೆನ್ಸ್.
  • ಈ ಪ್ರಾಡಕ್ಟ್ OYRGTA (ಒನ್ ಇಯರ್ ರಿನೀವಬಲ್ ಗ್ರೂಪ್ ಟರ್ಮ್ ಅಶ್ಯೂರೆನ್ಸ್) ಅನ್ನು ನೀಡುತ್ತದೆ.
  • ಪ್ರೀಮಿಯಂ ಪಾವತಿಸುವ ಆವರ್ತನವು ವಾರ್ಷಿಕ, ಅರ್ಧ-ವಾರ್ಷಿಕ, ತ್ರೈಮಾಸಿಕ, ಮಾಸಿಕ ಆಗಿದೆ.
  • ಈ ಪ್ರಾಡಕ್ಟ್ ಸ್ಪೌಸ್ (ಸಂಗಾತಿ) ಕವರ್ ಬೆನಿಫಿಟ್ ಅನ್ನು ನೀಡುತ್ತದೆ (ಐಚ್ಛಿಕ) ಇದು ಕಡ್ಡಾಯ ಅಥವಾ ಸ್ವಯಂಪ್ರೇರಿತವಾಗಿರಬಹುದು, ಇದು ಗ್ರೂಪ್ ಪಾಲಿಸಿದಾರರು ಸದಸ್ಯರ ಸಂಗಾತಿಗೆ ಡೆತ್ ಬೆನಿಫಿಟ್ (ಮರಣ ಲಾಭ) ಕವರ್ ಒದಗಿಸಲು ಅನುವು ಮಾಡಿಕೊಡುತ್ತದೆ.

 

ಅನುಕೂಲಗಳು:

  • ಭದ್ರತೆ: ಘಟನೆಯ ಸಂಭಾವ್ಯತೆಯ ಸಂದರ್ಭದಲ್ಲಿ ನಿಮ್ಮ ಗ್ರೂಪ್ ಸದಸ್ಯರ ಕುಟುಂಬಗಳ ಹಣಕಾಸಿನ ಅಗತ್ಯಗಳನ್ನು ರಕ್ಷಿಸುತ್ತದೆ.
  • ಫ್ಲೆಕ್ಸಿಬಿಲಿಟಿ (ಹೊಂದಿಕೊಳ್ಳುವಿಕೆ): ನಿಮ್ಮ ಸದಸ್ಯರಿಗೆ ನೀವು ನೀಡಲು ಬಯಸುವ ವಿಮಾ ಮೊತ್ತವನ್ನು ನಿರ್ಣಯಿಸುವ ಆಯ್ಕೆ.
  • ಸುಲಭತೆ: ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ, ಸ್ವೀಕಾರವು ತೃಪ್ತಿದಾಯಕ ಆರೋಗ್ಯ ಘೋಷಣೆಯನ್ನು ಆಧರಿಸಿದೆ.
  • ಕೈಗೆಟುಕುವಿಕೆ: ನಾಮಿನಲ್ ಪ್ರೀಮಿಯಂನಲ್ಲಿ ಯೋಜನೆಯ ಲಾಭ.

ಡೆತ್ ಬೆನಿಫಿಟ್ಸ್ (ಮರಣ ಲಾಭಗಳು):


ಕವರ್‌ನ ಅವಧಿಯ ಸಮಯದಲ್ಲಿ ಕವರ್‌ಗೆ ಒಳಪಡುವ ಸದಸ್ಯರ ದುರದೃಷ್ಟಕರ ಸಾವಿನ ಸಂದರ್ಭದಲ್ಲಿ ಮೂಲ ವಿಮಾ ಮೊತ್ತವಾಗಿರುವ ಡೆತ್ ಬೆನಿಫಿಟ್ ಅನ್ನು ಎಲ್ಲಾ ಬಾಕಿಯಿರುವ ಪ್ರೀಮಿಯಂಗಳನ್ನು ಪಾವತಿಸಲಾಗಿದ್ದರೆ ಒಂದೇ ಮೊತ್ತದಲ್ಲಿ ಪಾವತಿಸಲಾಗುತ್ತದೆ. ಸಾಲದಾತ - ಸಾಲಗಾರ ಯೋಜನೆಗಳ ಸಂದರ್ಭದಲ್ಲಿ, ಅರ್ಹ ಘಟಕಗಳ ಅಡಿಯಲ್ಲಿ ಸದಸ್ಯನ ಸಾವಿನ ಸಂದರ್ಭದಲ್ಲಿ*, ಬಾಕಿ ಉಳಿದಿರುವ ಸಾಲದ ಮೊತ್ತವನ್ನು ಮಾಸ್ಟರ್ ಪಾಲಿಸಿದಾರರಿಗೆ ಪ್ರಾರಂಭದಲ್ಲಿ ಗ್ರೂಪ್ ಸದಸ್ಯರ ಪೂರ್ವಾಧಿಕಾರಕ್ಕೆ ಒಳಪಟ್ಟು, ಒಟ್ಟು ಡೆತ್ ಬೆನಿಫಿಟ್ ಮತ್ತು ಬ್ಯಾಲೆನ್ಸ್‌ನಲ್ಲಿ, ಯಾವುದಾದರೂ ಇದ್ದರೆ ಅದನ್ನು ನಾಮನಿರ್ದೇಶಿತರು / ಫಲಾನುಭವಿಗೆ ಪಾವತಿಸಬೇಕು. ಅಧಿಕೃತ ದೃಢೀಕರಣ ಇಲ್ಲದಿದ್ದಲ್ಲಿ, ಡೆತ್ ಬೆನಿಫಿಟ್ ಮೊತ್ತವನ್ನು ನಾಮನಿರ್ದೇಶಿತರು ಅಥವಾ ಫಲಾನುಭವಿಗೆ ಪಾವತಿಸಬೇಕು.
ಕ್ರೆಡಿಟ್ ಲಿಂಕ್ಡ್/ಸಾಲದಾತ-ಸಾಲಗಾರ ಸಂಬಂಧದಲ್ಲಿ ಮೂಲ ವಿಮಾ ಮೊತ್ತವು ಕನಿಷ್ಠ ಓರ್ವ ಗ್ರೂಪ್ ಸದಸ್ಯರಿಗೆ ಪಾಲಿಸಿಯ ಪ್ರಾರಂಭದಲ್ಲಿ ಬಾಕಿ ಇರುವ ಸಾಲದ ಮೊತ್ತಕ್ಕೆ ಸಮನಾಗಿರುತ್ತದೆ ಮತ್ತು ಪಾಲಿಸಿಯ ಅವಧಿಯುದ್ದಕ್ಕೂ ಒಂದೇ ಆಗಿರುತ್ತದೆ. ಅರ್ಹ ಸಂಸ್ಥೆಗಳು ಇವುಗಳನ್ನು ಒಳಗೊಂಡಿವೆ: (i) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಿತ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ (ಸಹಕಾರಿ ಬ್ಯಾಂಕ್‌ಗಳ ಸಹಿತ), (ii) ಬ್ಯಾಂಕಿಂಗ್ ರಹಿತ ಫೈನಾನ್ಸ್ ಕಂಪನಿಗಳು (NBFC) ಆರ್‌ಬಿಐನಿಂದ ನೋಂದಣಿ ಪ್ರಮಾಣಪತ್ರ ಹೊಂದಿರುವ, (iii) ನ್ಯಾಷನಲ್ ಹೌಸಿಂಗ್ ಬೋರ್ಡ್ (NHB) ನಿಯಮಿತ ಹೌಸಿಂಗ್ ಫೈನಾನ್ಸ್ ಕಂಪನಿಗಳು, (iv) ನ್ಯಾಷನಲ್ ಮೈನಾರಿಟಿ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಶನ್ (NMDFC) ಮತ್ತದರ ರಾಜ್ಯ ಕೇಂದ್ರಿತ ಏಜೆನ್ಸಿಗಳು, (V) ಆರ್‌ಬಿಐನಿಂದ ನಿಯಮಿತಗೊಳಿಸಲಾದ ಸಣ್ಣ ಫೈನಾನ್ಸ್ ಬ್ಯಾಂಕುಗಳು, (vi) ಅನ್ವಯಿತ ರಾಜ್ಯ ಸೊಸೈಟಿಗಳ ಕಾಯ್ದೆಯಡಿ ರಚಿತವಾದ ಮತ್ತು ನೋಂದಾಯಿತ ಪರಸ್ಪರ ಅನುದಾನಿತ ಸಹಕಾರಿ ಸೊಸೈಟಿಗಳು, (vii) 2013ರ ಕಂಪನಿಗಳ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ನೋಂದಾಯಿತ ಮೈಕ್ರೋಫೈನಾನ್ಸ್ ಕಂಪನಿಗಳು ಇಲ್ಲವೇ ಸಮಯದಿಂದ ಸಮಯಕ್ಕೆ ಪ್ರಾಕಾರದ ಮೂಲಕ ಅಂಗೀಕೃತವಾದ ಯಾವುದೇ ಇತರ ವರ್ಗ.

ಮೆಚ್ಯೂರಿಟಿ ಬೆನಿಫಿಟ್:

ಮೆಚ್ಯೂರಿಟಿಯ ಸಮಯದಲ್ಲಿ, ಈ ಪ್ಲಾನ್‌ನ ಅಡಿಯಲ್ಲಿ ಯಾವುದೇ ಬೆನಿಫಿಟ್ ಅನ್ನು ಪಾವತಿಸಲಾಗುವುದಿಲ್ಲ.

ಸರೆಂಡರ್ ಬೆನಿಫಿಟ್:

ಅನ್ವಯವಾಗುವುದಿಲ್ಲ

ಆಪ್ಶನಲ್ ಕವರ್ - ಸ್ಪೌಸ್ (ಸಂಗಾತಿ) ಕವರ್ ಬೆನಿಫಿಟ್

  • ಕನಿಷ್ಠ 50 ಸದಸ್ಯರ ಗ್ರೂಪ್ ಪ್ರಮಾಣವನ್ನು ಹೊಂದಿರುವ ಯೋಜನೆಗಳನ್ನು ಹಾಕಿಕೊಂಡಿರುವವರು ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು.
  • ಈ ಆಯ್ಕೆಯು ಗ್ರೂಪ್ ಪಾಲಿಸಿದಾರು ಸದಸ್ಯರ ಸಂಗಾತಿಗೆ ಡೆತ್ ಬೆನಿಫಿಟ್ ಕವರ್ ಅನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಈ ಕವರ್ ಕಡ್ಡಾಯವಾಗಿರಬಹುದು ಅಥವಾ ಸ್ವಯಂಪ್ರೇರಿತವಾಗಿರಬಹುದು. ಪಾಲಿಸಿಯ ಪ್ರಾರಂಭದ ಸಮಯದಲ್ಲಿ ಅಗತ್ಯವಿರುವ ಕನಿಷ್ಠ ಭಾಗವಹಿಸುವಿಕೆಯ ಮಟ್ಟವು ಗ್ರೂಪ್ನ 10% ಆಗಿದೆ.
  • ಈ ಆಯ್ಕೆಯು ಮಾಸ್ಟರ್ ಪಾಲಿಸಿದಾರರ ಮಟ್ಟದಲ್ಲಿ ಲಭ್ಯವಿರುತ್ತದೆ.
  • ಕವರೇಜ್ ಪ್ರಾಥಮಿಕ ಸದಸ್ಯರ ವಿಮಾ ಮೊತ್ತಕ್ಕಿಂತ ಕಡಿಮೆ ಇರುತ್ತದೆ ಅಥವಾ ಅದಕ್ಕೆ ಸಮಾನವಾಗಿರುತ್ತದೆ.
  • ಪ್ರಾಥಮಿಕ ಸದಸ್ಯರ ಮರಣದ ನಂತರ ಸಂಗಾತಿಗಾಗಿ ಇರುವ ಕವರ್ ಪ್ರೀಮಿಯಂ ಸಂಗ್ರಹಿಸಲಾಗಿರುವ ಪಾಲಿಸಿ ಅವಧಿಯ ಅಂತ್ಯದವರೆಗೆ ಮುಂದುವರಿಯುತ್ತದೆ.

ನವೀಕರಣ (ರಿವೈವಲ್) ಸೌಲಭ್ಯ:

  • ವಾರ್ಷಿಕ ಪ್ರೀಮಿಯಂ ಪಾವತಿ ಆವರ್ತನಕ್ಕೆ ಅನ್ವಯಿಸುವುದಿಲ್ಲ.
  • ವಾರ್ಷಿಕ ಪ್ರೀಮಿಯಂ ಆವರ್ತನವನ್ನು ಹೊರತುಪಡಿಸಿ:
    ಪಾವತಿಸದೇ ಇರುವ ಮೊದಲನೇ ಪ್ರೀಮಿಯಂನ 3 ತಿಂಗಳ ಅವಧಿಯೊಳಗೆ ಪಾಲಿಸಿಯನ್ನು ರಿವೈವಲ್ ಮಾಡಬಹುದು, ಹಾಗೆ ಪಾಲಿಸಿ ಅವಧಿ ಮುಗಿಯುವ ಮೊದಲು. ವಿಮೆ ಮಾಡಿಸಿಕೊಂಡ ಸದಸ್ಯರಿಂದ ಲಿಖಿತ ಅರ್ಜಿ ಮತ್ತು ಜೀವ ವಿಮೆ ಮಾಡಿಸಿಕೊಂಡವರ ವಿಮೆಯನ್ನು ಮುಂದುವರಿಸುವ ಅರ್ಹತೆಯ ಬಗ್ಗೆ ರುಜುವಾತುಗಳನ್ನು ಪಡೆದ ನಂತರ ಹಾಗೇ ಬಡ್ದಿಯೊಂದಿಗೆ ಬಾಕಿ ಉಳಿದಿರುವ ಎಲ್ಲಾ ಪ್ರೀಮಿಯಮ್‌ಗಳನ್ನು ಪಾವತಿಸಿದ ಬಳಿಕ ರಿವೈವಲ್ ಅನ್ನು ಪರಿಗಣಿಸಲಾಗುವುದು. ಕಂಪೆನಿಯ ಮಂಡಳಿಯು ಅನುಮೋದಿಸಿದ ಅಂಡರ್ರೈಟಿಂಗ್ ನೀತಿಗೆ ಒಳಪಟ್ಟು ರಿವೈವಲ್ನ ಅನ್ನು ಜಾರಿಗೊಳಿಸಲಾಗುತ್ತದೆ. ವಿಮೆ ಮಾಡಿಸಿಕೊಂಡ ಸದಸ್ಯರರಿಗೆ ಕಂಪೆನಿ ಸಂವಹನ ಮಾಡಿದ ನಂತರವೇ ರಿವೈವಲ್ ಪ್ರಕ್ರಿಯೆ ಮುಂದುವರಿಸಲಾಗುತ್ತದೆ.
    ರಿಯಾಯಿತಿ (ಗ್ರೇಸ್) ಅವಧಿ ಕೊನೆಗೊಂಡ ನಂತರ (ಮತ್ತು ನವೀಕರಣದ ಅವಧಿಯಲ್ಲಿ) ಸದಸ್ಯರ ಲೈಫ್ ಕವರ್ ರದ್ದಾಗುತ್ತದೆ ಮತ್ತು ಸದಸ್ಯರ ಮರಣದ ಮೇಲೆ ಯಾವುದೇ ಡೆತ್ ಬೆನಿಫಿಟ್ ಅನ್ನು ಪಾವತಿಸಲಾಗುವುದಿಲ್ಲ.
    ಕಾಲಕಾಲಕ್ಕೆ ಕಂಪೆನಿ ನಿರ್ಧರಿಸಿದ ಬಡ್ಡಿದರವನ್ನು ವಿಧಿಸಲಾಗುವುದು. ಕಂಪೆನಿಯ ಪ್ರಸ್ತುತ ನೀತಿಯಿ ಸಾಮಾನ್ಯ ವಾರ್ಷಿಕ ಬಡ್ಡಿದರವನ್ನು ಆಧರಿಸಿದೆ ಮತ್ತು ಪ್ರತಿ ಹಣಕಾಸು ವರ್ಷದ ಏಪ್ರಿಲ್ 1 ರಂದು ಆರ್‌ಬಿಐ ರೆಪೋ ದರದ ಬೆಂಚ್‌ಮಾರ್ಕ್ ಯೀಲ್ಡ್ ಗಿಂತ 250 ಬೇಸಿಸ್ ಪಾಯಿಂಟ್‌ಗಳು ಹೆಚ್ಚಾಗಿರುತ್ತದೆ ಹಾಗೇ ಅದನ್ನು ಅರ್ಧ-ವಾರ್ಷಿಕ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. 1ನೇ ಏಪ್ರಿಲ್ 2022 ರಂತೆ ರೆಪೊ ದರವು 4.00% ಆಗಿದೆ. ಬಡ್ಡಿದರವನ್ನು ನಿರ್ಧರಿಸುವುದಕ್ಕಾಗಿ ಯಾವುದೇ ಬದಲಾವಣೆಯು ಲೈಫ್ ಇನ್‌ಶೂರೆನ್ಸ್ ಪ್ರಾಡಕ್ಟ್‌ ಮತ್ತು ರೈಡರ್, ದಿನಾಂಕ ಅಕ್ಟೋಬರ್ 14ರ ಸಿಐಆರ್ ನಂ. IRDAI/ACTL/ CIR/PRO/207/10/2022 ಇಲ್ಲವೇ IRDAIಗೆ ಸಂಬಂಧಿಸಿದ ಇತರೆ ಯಾವುದೇ ಬಳಕೆ ಮತ್ತು ಸಲ್ಲಿಕೆಯನ್ನು ಅನುಸರಿಸುತ್ತದೆ.
ಎಸ್‌ಬಿ‌ಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್-ನ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.
ಎಸ್ಬಿಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್
*ಕಳೆದ ಜನ್ಮದಿನದಂತೆ ವಯಸ್ಸು
** ಎಲ್ಲಾ ಎಸ್‌ಬಿ‌ಐ ಲೈಫ್ ಗ್ರೂಪ್ ಮೈಕ್ರೋ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳಿಗೆ ಒಟ್ಟು ವಿಮಾ ಮೊತ್ತವು ಪ್ರತಿ ಗ್ರೂಪ್ ಸದಸ್ಯರಿಗೆ ರೂ.2,00,000 ಕ್ಕೆ ಸೀಮಿತವಾಗಿರುತ್ತದೆ.
^ಅನ್ವಯವಾಗುವ ತೆರಿಗೆಗಳು ಮತ್ತು/ಅಥವಾ ಇತರ ಶಾಸನಬದ್ಧ ತೆರಿಗೆ/ಸುಂಕ/ ಪ್ರೀಮಿಯಂ ಮೇಲಿನ ಹೆಚ್ಚುವರಿ ತೆರಿಗೆಯನ್ನು (ಸರ್ಚಾರ್ಜ್), ಕಾಲಕಾಲಕ್ಕೆ ಭಾರತದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವು ಸೂಚಿಸುವ ದರದಲ್ಲಿ, ಅನ್ವಯವಾಗುವ ತೆರಿಗೆ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ.
$ಪಾಲಿಸಿ ಅವಧಿಯು ಮಾಸ್ಟರ್ ಪಾಲಿಸಿ ಮಟ್ಟದಲ್ಲಿದೆ.

3B/ver1/02/23/WEB/KAN

*ತೆರಿಗೆ ಲಾಭಗಳು:
ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.
ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.