ಮೈಕ್ರೋ ಟರ್ಮ್ ಅಶ್ಯೂರೆನ್ಸ್ ಪ್ಲಾನ್ | ಎಸ್‌ಬಿ‌ಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್ - ಎಸ್‌ಪಿ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿ‌ಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್ - ಎಸ್‌ಪಿ

UIN: 111N137V01

play icon play icon
Group Micro Shield - SP Plan Premium

ನಿಮ್ಮ ರಕ್ಷಣೆಯ
ಭರವಸೆ ಈಡೇರಿದೆ

ಗ್ರೂಪ್, ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಪ್ಯೂರ್ ರಿಸ್ಕ್ ಪ್ರೀಮಿಯಂ, ಮೈಕ್ರೊ ಲೈಫ್ ಇನ್‌ಶೂರೆನ್ಸ್ ಪ್ರಾಡಕ್ಟ್

ನಿಮ್ಮ ಗ್ರೂಪ್ ಸದಸ್ಯರಿಗೆ ಕೈಗೆಟುಕುವ ಪ್ರೀಮಿಯಂನಲ್ಲಿ ಜೀವ ವಿಮೆಯ ರಕ್ಷಣೆಯನ್ನು ಒದಗಿಸಲು ನೀವು ಉತ್ಸುಕರಾಗಿರುವಿರಾ?

ಹಾಗಿದ್ದಲ್ಲಿ, ಎಸ್‌ಬಿಐ ಲೈಫ್ – ಗ್ರೂಪ್ ಮೈಕ್ರೋ ಶೀಲ್ಡ್ - ಎಸ್‌ಪಿ ಎನ್ನುವುದು ವಿಶೇಷವಾಗಿ 'ಇನ್‌ಶೂರೆನ್ಸ್ ಕವರ್' ಅಗತ್ಯವಿರುವ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ವಿನ್ಯಾಸಗೊಳಿಸಲಾದ ಒಂದು ಯೋಜನೆಯಾಗಿದೆ. ಎಸ್‌ಬಿಐ ಲೈಫ್ – ಗ್ರೂಪ್ ಮೈಕ್ರೋ ಶೀಲ್ಡ್ - ಎಸ್‌ಪಿಯೊಂದಿಗೆ ನೀವು ನಿಮ್ಮ ಸದಸ್ಯರಿಗೆ ಯಾವುದೇ ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ಅವರ ಕುಟುಂಬಗಳು ಆರ್ಥಿಕ ಭದ್ರತೆಯನ್ನು ಹೊಂದಿರುತ್ತವೆ ಎನ್ನುವ ಮರುಭರವಸೆಯನ್ನು ನೀಡಬಹುದು.

ಪ್ರಾಡಕ್ಟ್‌ಪ್ರಮುಖ ವಿಶೇಷತೆಗಳು:
  • ಎಸ್‌ಬಿ‌ಐ ಲೈಫ್ – ಗ್ರೂಪ್ ಮೈಕ್ರೋ ಶೀಲ್ಡ್ - ಎಸ್‌ಪಿ ಎನ್ನುವುದು ನಿಮ್ಮ ಸದಸ್ಯರ ವಿಮಾ ಅಗತ್ಯಗಳಿಗೆ ಒಂದು ಪರಿಪೂರ್ಣ ಉತ್ತರವಾಗಿದೆ.
  • ದಾಖಲಿಸಲು ಮತ್ತು ನಿರ್ವಹಿಸಲು ಸುಲಭವಾಗಿದೆ.
  • ಜಾಯಿಂಟ್ ಲೈಫ್ ಕವರೇಜ್ ಎನ್ನುವುದು ಲೆವೆಲ್ ಕವರ್ ಮತ್ತು ರೆಡ್ಯೂಸಿಂಗ್ ಕವರ್ ಪ್ಲಾನ್ ಈ ಎರಡೂ ಆಯ್ಕೆಗಳ ಅಡಿಯಲ್ಲೂ ಲಭ್ಯವಿದೆ.
  • ಚಾಲ್ತಿಯಲ್ಲಿರುವ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಉದ್ಯೋಗದಾತ – ನೌಕರ ಗ್ರೂಪ್‌ಗಳು, ಮೈಕ್ರೋ ಫೈನಾನ್ಸ್ ಇನ್ಸ್‌ಟಿಟ್ಯೂಶನ್‌ಗಳ ಗ್ರೂಪ್ ಸದಸ್ಯರು, ಸ್ವಸಹಾಯ ಗ್ರೂಪ್‌ಗಳು, ಬ್ಯಾಂಕ್/ಹಣಕಾಸು ಸಂಸ್ಥೆಗಳು, ಎನ್‌ಜಿಒಗಳು, ಯಾವುದೇ ಅಫಿನಿಟಿ ಗ್ರೂಪ್‌ಗಳು (ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ) ಇವೇ ಮೊದಲಾದವುಗಳನ್ನು

ಮುಖ್ಯಾಂಶಗಳು

ಎಸ್ಬಿಐ ಲೈಫ್ – ಗ್ರೂಪ್ ಮೈಕ್ರೋ ಶೀಲ್ಡ್ - ಎಸ್ಪಿ

Group pure term micro insurance, non-linked, non-participating plan

 

ವಿಶೇಷತೆಗಳು:

  • ನಿಮ್ಮ ಗ್ರೂಪ್ ಸದಸ್ಯರಿಗೆ ಟರ್ಮ್ ಇನ್‌ಶೂರೆನ್ಸ್.
  • ಈ ಪ್ರಾಡಕ್ಟ್ 2 ಪ್ಲಾನ್ ಆಯ್ಕೆಗಳನ್ನು ನೀಡುತ್ತದೆ- ಲೆವೆಲ್ ಕವರ್ ರೆಡ್ಯೂಸಿಂಗ್ ಕವರ್ (ಸಾಲದಾತ - ಸಾಲಗಾರ ಸಂಬಂಧಕ್ಕೆ ಮಾತ್ರ ಆಯ್ಕೆ ಲಭ್ಯವಿದೆ ಮತ್ತು ಗ್ರೂಪ್ ಸದಸ್ಯರಿಂದ ತೆಗೆದುಕೊಳ್ಳಲ್ಪಟ್ಟ ಸಾಲದ ವಿರುದ್ಧ ತೆಗೆದುಕೊಳ್ಳಬಹುದು).
  • ಪ್ರಾಡಕ್ಟ್ 10 ವರ್ಷಗಳವರೆಗಿನ ಪಾಲಿಸಿ ಅವಧಿಯೊಂದಿಗೆ ಸಿಂಗಲ್ ಪ್ರೀಮಿಯಂ ಪಾವತಿ ಅವಧಿಯನ್ನು ನೀಡುತ್ತದೆ.
  • ಜಾಯಿಂಟ್ ಲೈಫ್ ಕವರೇಜ್ ಎನ್ನುವುದು ಲೆವೆಲ್ ಕವರ್ ಮತ್ತು ರೆಡ್ಯೂಸಿಂಗ್ ಕವರ್ ಪ್ಲಾನ್ ಈ ಎರಡೂ ಆಯ್ಕೆಗಳ ಅಡಿಯಲ್ಲೂ ಲಭ್ಯವಿದೆ.
  • ಜಾಯಿಂಟ್ ಲೈಫ್ ಕವರೇಜ್ ಅಡಿಯಲ್ಲಿ, ಇಬ್ಬರು ವ್ಯಕ್ತಿಗಳನ್ನು ಅಂದರೆ ಅವರ ಸಂಗಾತಿಗಳು, ಒಡಹುಟ್ಟಿದವರು ಅಥವಾ ಪೋಷಕರು, ಮಗು, ಮುಂತಾದ ಹತ್ತಿರದ ರಕ್ತ ಸಂಬಂಧಿಗಳಾಗಿದ್ದರೆ ಅಥವಾ ಉದ್ಯಮ ಪಾಲುದಾರರಾಗಿದ್ದರೆ ಅವರನ್ನು ಒಳಗೊಳ್ಳಬಹುದು. ವ್ಯಕ್ತಿಗಳ ಪರ್ಯಾಯವನ್ನು ಅನುಮತಿಸಲಾಗುವುದಿಲ್ಲ.

 

ಅನುಕೂಲಗಳು:

  • ಭದ್ರತೆ: ಘಟನೆಯ ಸಂಭಾವ್ಯತೆಯ ಸಂದರ್ಭದಲ್ಲಿ ನಿಮ್ಮ ಗ್ರೂಪ್ ಸದಸ್ಯರ ಕುಟುಂಬಗಳ ಹಣಕಾಸಿನ ಅಗತ್ಯಗಳನ್ನು ರಕ್ಷಿಸುತ್ತದೆ.
  • ಫ್ಲೆಕ್ಸಿಬಿಲಿಟಿ (ಹೊಂದಿಕೊಳ್ಳುವಿಕೆ):ನಿಮ್ಮ ಸದಸ್ಯರಿಗೆ ನೀವು ನೀಡಲು ಬಯಸುವ ವಿಮಾ ಮೊತ್ತವನ್ನು ನಿರ್ಣಯಿಸುವ ಆಯ್ಕೆ.
  • ಸುಲಭತೆ: ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ, ಸ್ವೀಕಾರವು ತೃಪ್ತಿದಾಯಕ ಆರೋಗ್ಯ ಘೋಷಣೆಯನ್ನು ಆಧರಿಸಿದೆ.
  • ಕೈಗೆಟುಕುವಿಕೆ:ನಾಮಿನಲ್ ಪ್ರೀಮಿಯಂನಲ್ಲಿ ಯೋಜನೆಯ ಲಾಭ.

ಡೆತ್ ಬೆನಿಫಿಟ್ (ಮರಣ ಲಾಭ):


ಜಾಯಿಂಟ್ ಲೈಫ್ ಪಾಲಿಸಿಯಲ್ಲಿ ಕವರ್ ಆಗಿರುವ ಸದಸ್ಯರ ದುರದೃಷ್ಟಕರ ಸಾವಿನ ಸಂದರ್ಭದಲ್ಲಿ ಅಥವಾ ಕವರ್ ಆಗಿರುವ ಸದಸ್ಯರ ಪೈಕಿ ಯಾರಾದರೂ ಒಬ್ಬರು ಮೊದಲು ಮೃತಪಟ್ಟಲ್ಲಿ, ಡೆತ್ ಬೆನಿಫಿಟ್ ಅನ್ನು ಕವರ್ ಅವಧಿಯ ಸಮಯದಲ್ಲಿ ಒಟ್ಟು ಮೊತ್ತದಲ್ಲಿ ಪಾವತಿಸಲಾಗುತ್ತದೆ. ಜಾಯಿಂಟ್ ಲೈಫ್ ಪಾಲಿಸಿಯಲ್ಲಿ ಇಬ್ಬರೂ ಸದಸ್ಯರು ಏಕಕಾಲದಲ್ಲಿ ಮರಣಹೊಂದಿದರೆ ಆಗ ಕೇವಲ ಒಂದು ವಿಮಾ ಮೊತ್ತವನ್ನು ಮಾತ್ರ ಪಾವತಿಸಲಾಗುತ್ತದೆ.
ಕ್ರೆಡಿಟ್ ಲಿಂಕ್ಡ್/ಸಾಲದಾತ-ಸಾಲಗಾರ ಸಂಬಂಧದಲ್ಲಿ ಮೂಲ ವಿಮಾ ಮೊತ್ತವು ಕನಿಷ್ಠ ಓರ್ವ ಗ್ರೂಪ್ ಸದಸ್ಯರಿಗೆ ಪಾಲಿಸಿಯ ಪ್ರಾರಂಭದಲ್ಲಿ ಬಾಕಿ ಇರುವ ಸಾಲದ ಮೊತ್ತಕ್ಕೆ ಸಮನಾಗಿರುತ್ತದೆ.
ಲೆವೆಲ್ ಕವರ್: ಸಾವಿನ ಮೇಲಿನ ಮೂಲ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ ಮತ್ತು ಕವರ್ ಅನ್ನು ನಿಲ್ಲಿಸಲಾಗುತ್ತದೆ.
ರೆಡ್ಯೂಸಿಂಗ್ ಕವರ್: ವಿಮಾ ಪ್ರಮಾಣಪತ್ರದಲ್ಲಿನ ಲೋನ್ ಕವರ್ ಶೆಡ್ಯೂಲ್ ಪ್ರಕಾರ ವಿಮಾ ಮೊತ್ತಕ್ಕೆ ಸಮನಾಗಿರುವ ಸಾವಿನ ಮೇಲಿನ ವಿಮಾ ಮೊತ್ತವನ್ನು ಕವರ್‌ನ ಪ್ರಾರಂಭದಲ್ಲಿ ಒದಗಿಸಲಾಗಿದೆ, ಕವರ್‌ಗೆ ಒಳಪಡುವ ಸದಸ್ಯರ ಸಾವಿನ ದಿನಾಂಕದಂದು, ಲೋನ್ ಕವರ್ ಶೆಡ್ಯೂಲ್ ಪ್ರಕಾರ ನಿಜವಾದ ಸಾಲದ ಬಾಕಿಯನ್ನು ಲೆಕ್ಕಿಸದೆ ಪಾವತಿಸಲಾಗುತ್ತದೆ ಮತ್ತು ಕವರ್ ಅನ್ನು ನಿಲ್ಲಿಸಲಾಗುತ್ತದೆ..
ಜಾಯಿಂಟ್ ಲೈಫ್‌ನ ಸಂದರ್ಭದಲ್ಲಿ, ಡೆತ್ ಬೆನಿಫಿಟ್‌ನ(ಮೊದಲ ಸಾವಿನ ಮೇಲಿನ) ಪಾವತಿಯ ನಂತರ ಬದುಕುಳಿದಿರುವ ಸದಸ್ಯರಿಗೆ ಕವರ್ ಕೊನೆಗೊಳ್ಳುತ್ತದೆ. ಸಾಲದಾತ - ಸಾಲಗಾರ ಯೋಜನೆಗಳ ಸಂದರ್ಭದಲ್ಲಿ, ಅರ್ಹ ಘಟಕಗಳ ಅಡಿಯಲ್ಲಿ ಸದಸ್ಯನ / ನೌಕರರ ಸಾವಿನ ಸಂದರ್ಭದಲ್ಲಿ*, ಬಾಕಿ ಉಳಿದಿರುವ ಸಾಲದ ಮೊತ್ತವನ್ನು ಮಾಸ್ಟರ್ ಪಾಲಿಸಿದಾರರಿಗೆ ಪ್ರಾರಂಭದಲ್ಲಿ ಗ್ರೂಪ್ ಸದಸ್ಯರ ಪೂರ್ವಾಧಿಕಾರಕ್ಕೆ ಒಳಪಟ್ಟು, ಒಟ್ಟು ಡೆತ್ ಬೆನಿಫಿಟ್ ಮತ್ತು
ಬ್ಯಾಲೆನ್ಸ್‌ನಲ್ಲಿ, ಯಾವುದಾದರೂ ಇದ್ದರೆ ಅದನ್ನು ನಾಮನಿರ್ದೇಶಿತರು / ಫಲಾನುಭವಿಗೆ ಪಾವತಿಸಬೇಕು. ಅಧಿಕೃತ ದೃಢೀಕರಣ ಇಲ್ಲದಿದ್ದಲ್ಲಿ, ಡೆತ್ ಬೆನಿಫಿಟ್ ಮೊತ್ತವನ್ನು ನಾಮನಿರ್ದೇಶಿತರು ಅಥವಾ ಫಲಾನುಭವಿಗೆ ಪಾವತಿಸಲಾಗುತ್ತದೆ. ಜೀವ ವಿಮೆದಾರರು ಅಪ್ರಾಪ್ತರಾಗಿದ್ದಲ್ಲಿ, ಆತ / ಆಕೆ ಪ್ರಾಪ್ತವಯಸ್ಕತೆಯನ್ನು ತಲುಪಿದ ಕೂಡಲೇ ಪಾಲಿಸಿಯು ಜೀವ ವಿಮೆದಾರರ ಲೈಫ್ ಅನ್ನು ಕವರ್ ಮಾಡುತ್ತದೆ.
ಅರ್ಹ ಸಂಸ್ಥೆಗಳು ಇವುಗಳನ್ನು ಒಳಗೊಂಡಿವೆ: (i) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಿತ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ (ಸಹಕಾರಿ ಬ್ಯಾಂಕ್‌ಗಳ ಸಹಿತ), (ii) ಬ್ಯಾಂಕಿಂಗ್ ರಹಿತ ಫೈನಾನ್ಸ್ ಕಂಪನಿಗಳು (NBFC) ಆರ್‌ಬಿಐನಿಂದ ನೋಂದಣಿ ಪ್ರಮಾಣಪತ್ರ ಹೊಂದಿರುವ, (iii) ನ್ಯಾಷನಲ್ ಹೌಸಿಂಗ್ ಬೋರ್ಡ್ (NHB) ನಿಯಮಿತ ಹೌಸಿಂಗ್ ಫೈನಾನ್ಸ್ ಕಂಪನಿಗಳು, (iv) ನ್ಯಾಷನಲ್ ಮೈನಾರಿಟಿ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಶನ್ (NMDFC) ಮತ್ತದರ ರಾಜ್ಯ ಕೇಂದ್ರಿತ ಏಜೆನ್ಸಿಗಳು, (V) ಆರ್‌ಬಿಐನಿಂದ ನಿಯಮಿತಗೊಳಿಸಲಾದ ಸಣ್ಣ ಬ್ಯಾಂಕುಗಳು, (vi) ಅನ್ವಯಿತ ರಾಜ್ಯ ಸೊಸೈಟಿಗಳ ಕಾಯ್ದೆಯಡಿ ರಚಿತವಾದ ಮತ್ತು ನೋಂದಾಯಿತ ಪರಸ್ಪರ ಅನುದಾನಿತ ಸಹಕಾರಿ ಸೊಸೈಟಿಗಳು, (vii) 2013ರ ಕಂಪನಿಗಳ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ನೋಂದಾಯಿತ ಮೈಕ್ರೋಫೈನಾನ್ಸ್ ಕಂಪನಿಗಳು ಇಲ್ಲವೇ ಸಮಯದಿಂದ ಸಮಯಕ್ಕೆ ಪ್ರಾಕಾರದ ಮೂಲಕ ಅಂಗೀಕೃತವಾದ ಯಾವುದೇ ಇತರ ವರ್ಗ.

ಫ್ರೀ-ಲುಕ್ ಅವಧಿ :


1) ಒಂದು ವೇಳೆ ಮಾಸ್ಟರ್ ಪಾಲಿಸಿದಾರರು ಪ್ರೀಮಿಯಂ ಪಾವತಿಸುತ್ತಿದ್ದರೆ:
ಇಲೆಕ್ಟ್ರಾನಿಕ್ ಪಾಲಿಸಿಗಳು ಅಥವಾ ಡಿಸ್ಟೆನ್ಸ್ ಮಾರ್ಕೆಂಟಿಂಗ್ ನಿಂದ ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಪ್ರಾಪ್ತಿಯಾದ ಪಾಲಿಸಿಗಳಲ್ಲಿದೆ ಬೇರೆ ಪಾಲಿಸಿಗಳಿಗೆ ಪಡೆದ ಬಳಿಕ 15 ದಿನಗಳ ಫ್ರೀ ಲುಕ್ ಅವಧಿಯನ್ನು ನೀಡಲಾಗುತ್ತದೆ, ಹಾಗೇ ಇಲೆಕ್ಟ್ರಾನಿಕ್ ಪಾಲಿಸಿ ಮತ್ತು ಡಿಸ್ಟೆನ್ಸ್ ಮೋಡ್ ನಿಂದ ಪ್ರಾಪ್ತಿಯಾದ ಪಾಲಿಸಿಗಳಿಗೆ, ಪಾಲಿಸಿ ಡಾಕ್ಯುಮೆಂಟ್ ಪಡೆದ ಬಳಿಕ 30 ದಿನಗಳ ಅವಧಿಯನ್ನು ಪಾಲಿಸಿಗಳ ನಿಯಮ ಹಾಗೂ ಷರತ್ತುಗಳನ್ನು ಸಮೀಕ್ಷೆ ಮಾಡಲು ನೀಡಲಾಗುವುದು. ಮಾಸ್ಟರ್ ಪಾಲಿಸಿದಾರನಿಗೆ ಯಾವುದಾದರೂ ನಿಯಮ ಹಾಗೂ ಷರತ್ತುಗಳು ಒಪ್ಪಿಗೆ ಇಲ್ಲದಿದ್ದರೆ, ಪಾಲಿಸಿಯನ್ನು ರದ್ದುಪಡಿಸಲು ಇನ್‌ಶೂರ್‌ಗೆ ಹಿಂತಿರುಗಿಸುವ ಆಯ್ಕೆ ಮಾಸ್ಟರ್ ಪಾಲಿಸಿದಾರರಿಗೆ ಇದೆ, ಹಿಂತಿರುಗಿಸುವ ಆಯ್ಕೆ ಮಾಸ್ಟರ್ ಪಾಲಿಸಿದಾರರಿಗೆ ಇದೆ, ಹಿಂತಿರುಗಿಸಲು ಇರುವ ಕಾರಣವನ್ನು ತಿಳಿಸಿ, ಅದೇ ರೀತಿ ಕಂಪೆನಿ ಕವರ್ ಅವಧಿ ಅನ್ವಯಿಸುವ ರಿಸ್ಕ್ ಪ್ರೀಮಿಯಂ ಮತ್ತು ಪ್ರೊಪೋಸನೆಟ್ ಮೆಡಿಕಲ್ ಪರೀಕ್ಷೆಯ ಖರ್ಚು ಹಾಗೂ ಸ್ಟ್ಯಾಂಪ್ ಡ್ಯೂಟಿಯ ಮೊತ್ತಗಳನ್ನು ಕಡಿತಗೊಳಿಸಿ ಪಾವತಿಸಿದ ಪ್ರೀಮಿಯಂ ಹಿಂತಿರುಗಿಸುತ್ತದೆ.
2) ವಿಮೆ ಮಾಡಿಸಿಕೊಂಡ ಸದಸ್ಯರು ಪ್ರೀಮಿಯಂ ಅನ್ನು ಪಾವತಿಸುತ್ತಿದ್ದರೆ:
ಇಲೆಕ್ಟ್ರಾನಿಕ್ ಪಾಲಿಸಿಗಳು ಅಥವಾ ಡಿಸ್ಟೆನ್ಸ್ ಮಾರ್ಕೆಂಟಿಂಗ್ ನಿಂದ ಪ್ರಾಪ್ತಿಯಾದ ಪಾಲಿಸಿಗಳಲ್ಲದೆ ಬೇರೆ ಪಾಲಿಸಿಗಳಿಗೆ ಆ ಪಾಲಿಸಿಗಳ ವಿಮೆಯ ಪ್ರಮಾಣಪತ್ರ ನೀಡಿದ ಬಳಿಕ 15 ದಿನಗಳ ಫ್ರೀ ಲುಕ್ ಅವಧಿಯನ್ನು ನೀಡಲಾಗುತ್ತದೆ, ಹಾಗೇ ಇಲೆಕ್ಟ್ರಾನಿಕ್ ಪಾಲಿಸಿ ಮತ್ತು ಡಿಸ್ಟೆನ್ಸ್ ಮೋಡ್ ನಿಂದ ವಿಮೆಯ ಪ್ರಮಾಣಪತ್ರ ಪ್ರಾಪ್ತಿಯಾದ ಪಾಲಿಸಿಗಳಿಗೆ 30 ದಿನಗಳ ಅವಧಿಯನ್ನು ಪಾಲಿಸಿಗಳ ನಿಯಮ ಹಾಗೂ ಷರತ್ತುಗಳನ್ನು ಸಮೀಕ್ಷೆ ಮಾಡಲು ನೀಡಲಾಗುವುದು. ವಿಮೆ ಮಾಡಿಸಿಕೊಂಡ ಸದಸ್ಯರು ಯಾವುದಾದರೂ ನಿಯಮ ಹಾಗೂ ಷರತ್ತುಗಳು ಒಪ್ಪಿಗೆ ಇಲ್ಲದಿದ್ದರೆ, ವಿಮೆ ಮಾಡಿಸಿಕೊಂಡ ಸದಸ್ಯರು ತನ್ನ ವಿಮೆಯ ಪ್ರಮಾಣಪತ್ರವನ್ನು ಹಿಂತಿರಿಗಿಸುವ ಆಯ್ಕೆಯಿದೆ, ಹಿಂತಿರುಗಿಸಲು ತನಗೆ ಇರುವ ಕಾರಣವನ್ನು ತಿಳಿಸಿ, ಅದೇ ರೀತಿ ಕಂಪೆನಿ ಕವರ್ ಪೀರಿಯಡ್ ಅವಧಿಗೆ ಅನ್ವಯಿಸುವ ರಿಸ್ಕ್ ಪ್ರೀಮಿಯಂ ಮತ್ತು ಇನ್ಶೂರ್ಡ್ನ ಮೆಡಿಕಲ್ ಪರೀಕ್ಷೆಯ ಖರ್ಚು ಹಾಗೂ ಸ್ಟ್ಯಾಂಪ್ ಡ್ಯುಟಿಯ ಮೊತ್ತಗಳನ್ನು ಕಡಿತಗೊಳಿಸಲು ಪಾವತಿಯಿಂದ ಪ್ರೀಮಿಯಂ ಅನ್ನು ಹಿಂತಿರುಗಿಸುತ್ತದೆ. ಒಂದೊಮ್ಮೆ ಜಾಯಿಂಟ್ ಲೈಫ್ ಕವರೇಜ್ ಆಗಿದ್ದರೆ, ಇಬ್ಬರೂ ಸದಸ್ಯರ ಲೈಫ್ ಕವರ್ ಸ್ಥಗಿತಗೊಳಿಸಲಾಗುತ್ತದೆ ಮತ್ತು ಫ್ರಿಲುಕ್ ರದ್ದನ್ನು ಅಂದಿನಿಂದಲೇ ಜಾರಿಗೊಳಿಸಲಾಗುತ್ತದೆ.

ಮೆಚ್ಯೂರಿಟಿ ಬೆನಿಫಿಟ್:


ಮೆಚ್ಯೂರಿಟಿಯ ಸಮಯದಲ್ಲಿ, ಈ ಪ್ಲಾನ್‌ನ ಅಡಿಯಲ್ಲಿ ಯಾವುದೇ ಬೆನಿಫಿಟ್ ಅನ್ನು ಪಾವತಿಸಲಾಗುವುದಿಲ್ಲ.

ಸರೆಂಡರ್ ಬೆನಿಫಿಟ್:


ಸದಸ್ಯರ ಪಾಲಿಸಿಯು ಸರೆಂಡರ್ ಮೌಲ್ಯವನ್ನು ಪಡೆದುಕೊಳ್ಳುತ್ತದೆ ಮತ್ತು ಪಾಲಿಸಿಯ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಸರೆಂಡರ್ ಮಾಡಬಹುದು. ಸರೆಂಡರ್ ಮೌಲ್ಯವು ಅನೆಕ್ಸ್‌ಪೈರ್ಡ್ ರಿಸ್ಕ್ (ಅವಧಿ ಮೀರಿಲ್ಲದ ಅಪಾಯದ) ಪ್ರೀಮಿಯಂಗೆ ಸಮನಾಗಿರುತ್ತದೆ ಮತ್ತು ಈ ಕೆಳಗಿನಂತಿರುತ್ತದೆ:
  • ಲೆವೆಲ್ ಕವರ್: (70% x ಪಾವತಿಸಲಾದ ಸಿಂಗಲ್ ಪ್ರೀಮಿಯಂ) x [ಅನೆಕ್ಸ್‌ಪೈರ್ಡ್ ಅವಧಿ (ತಿಂಗಳಲ್ಲಿ) / ಒಟ್ಟು ಅವಧಿ (ತಿಂಗಳಲ್ಲಿ)]
  • ರೆಡ್ಯೂಸಿಂಗ್ ಕವರ್: (70% x ಪಾವತಿಸಲಾದ ಸಿಂಗಲ್ ಪ್ರೀಮಿಯಂ) x [ಅನೆಕ್ಸ್‌ಪೈರ್ಡ್ ಅವಧಿ (ತಿಂಗಳಲ್ಲಿ) / ಒಟ್ಟು ಅವಧಿ (ತಿಂಗಳಲ್ಲಿ)] x [ಶೆಡ್ಯೂಲ್ ಪ್ರಕಾರ ವಿಮಾ ಮೊತ್ತ / ಆರಂಭಿಕ ವಿಮಾ ಮೊತ್ತ]
ಅನೆಕ್ಸ್‌ಪೈರ್ಡ್ (ಅವಧಿ ಮೀರದ) ಅವಧಿ = ಸರೆಂಡರ್‌ನ ದಿನಾಂಕದಂತೆ ಕಡಿಮೆ ಪಾಲಿಸಿ ತಿಂಗಳುಗಳಲ್ಲಿ ಒಟ್ಟು ಪಾಲಿಸಿ ಅವಧಿ.
ಸರೆಂಡರ್‌ನ ಮೇಲೆ, ಎಲ್ಲಾ ಬೆನಿಫಿಟ್‌ಗಳು ಮತ್ತು ಸದಸ್ಯ(ರ) ಕವರ್ ಅನ್ನು ಕೊನೆಗೊಳಿಸಲಾಗುತ್ತದೆ. ಸರೆಂಡರ್ ಮೌಲ್ಯವನ್ನು ಒಟ್ಟು ಮೊತ್ತದ ಬೆನಿಫಿಟ್ ಆಗಿ ಪಾವತಿಸಲಾಗುತ್ತದೆ.
ಒಂದು ವೇಳೆ ಮಾಸ್ಟರ್ ಪಾಲಿಸಿದಾರರು ಪಾಲಿಸಿಯನ್ನು ಸರೆಂಡರ್ ಮಾಡಿದರೆ, ಸದಸ್ಯರು ತಮ್ಮ ಸಂಬಂಧಿತ ಕವರ್ ಅವಧಿಯ ಅಂತ್ಯದವರೆಗೆ ತಮ್ಮ ಕವರ್ ಅನ್ನು ಮುಂದುವರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಯಾವ ಸದಸ್ಯರು ಕವರ್‌ನೊಂದಿಗೆ ಮುಂದುವರಿಯಲು ಬಯಸುವುದಿಲ್ಲವೋ, ಅಂತಹವರಿಗೆ ಸರೆಂಡರ್ ಮೌಲ್ಯವನ್ನು ಪಾವತಿಸಬೇಕಾಗುತ್ತದೆ ಮತ್ತು ಕವರ್ ಕೊನೆಗೊಳ್ಳುತ್ತದೆ.

ಜಾಯಿಂಟ್ ಲೈಫ್ ಕವರೇಜ್:

  • ಜಾಯಿಂಟ್ ಲೈಫ್ ಕವರ್ ಸಾಲದಾತ-ಸಾಲಗಾರ ಗ್ರೂಪ್‌ಗಳ ಅಡಿಯಲ್ಲಿ ಮಾತ್ರ ಲಭ್ಯವಿದೆ
  • ಇದು ಲೆವೆಲ್ ಕವರ್ ಮತ್ತು ರೆಡ್ಯೂಸಿಂಗ್ ಕವರ್ ಎರಡೂ ಆಯ್ಕೆಗಳಿಗೂ ಲಭ್ಯವಿದೆ
  • ಇಬ್ಬರು ವ್ಯಕ್ತಿಗಳನ್ನು ಅಂದರೆ ಅವರು ಸಂಗಾತಿಗಳು, ಒಡಹುಟ್ಟಿದವರು ಅಥವಾ ಪೋಷಕರು, ಮಗು, ಮುಂತಾದ ಹತ್ತಿರದ ರಕ್ತ ಸಂಬಂಧಿಗಳಾಗಿದ್ದರೆ ಅಥವಾ ಉದ್ಯಮ ಪಾಲುದಾರರಾಗಿದ್ದರೆ ಅವರನ್ನು ಒಳಗೊಳ್ಳಬಹುದು. ವ್ಯಕ್ತಿಗಳ ಪರ್ಯಾಯವನ್ನು ಅನುಮತಿಸಲಾಗುವುದಿಲ್ಲ
  • ಪ್ರತಿಯೊಬ್ಬ ಸಾಲಗಾರರಿಗೂ ಸಂಪೂರ್ಣ ಬಾಕಿ ಇರುವ ಸಾಲದ ಮೊತ್ತಕ್ಕೆ ವಿಮೆ ಮಾಡಲಾಗುವುದು – ಅದೇ ವಿಮಾ ಮೊತ್ತ ಮತ್ತು ಅದೇ ಪಾಲಿಸಿ ಅವಧಿಗೆ. ಸಾಲಗಾರರಲ್ಲಿ ಯಾರಾದರೂ ಮರಣ ಹೊಂದಿದಲ್ಲಿ, ಡೆತ್ ಬೆನಿಫಿಟ್ ಅನ್ನು ಪಾವತಿಸಲಾಗುತ್ತದೆ ಮತ್ತು ಬದುಕುಳಿದಿರುವ ಸಾಲಗಾರನಿಗೆ ಕವರ್ ಅನ್ನು ಕೊನೆಗೊಳಿಸಲಾಗುತ್ತದೆ.

ರಿಯಾಯಿತಿ ಅವಧಿ:


ಅನ್ವಯವಾಗುವುದಿಲ್ಲ
ವಿಮೆ ಮಾಡಿಸಿಕೊಂಡ ಸದಸ್ಯರು ಬಾಕಿಯಿರುವ ಪ್ರೀಮಿಯಂ ಅನ್ನು ಮಾಸ್ಟರ್ ಪಾಲಿಸಿದಾರರಿಗೆ ನೀಡಿದ ಹಾಗೂ ವಿಮೆ ಮಾಡಿಸಿಕೊಂಡ ಸದಸ್ಯರು ಪ್ರೀಮಿಯಂಗೆ ಸ್ವೀಕೃತಿಯನ್ನು ಪಡೆದ, ಆದರೆ ಮಾಸ್ಟರ್ ಪಾಲಿಸಿದಾರರು ರಿಯಾಯಿತಿ ಅವಧಿಯಲ್ಲಿ ವಿಮಾ ಸಂಸ್ಥೆಗೆ ಪ್ರೀಮಿಯಂ ಕಟ್ಟದೇ ಇರುವ ಸಂದರ್ಭದಲ್ಲಿ. ನಂತರ್ ಕ್ಲೇಮ್ ಮಾಡಲಾದಲ್ಲಿ, ಕ್ಲೇಮ್ ಇನ್ನುಳಿದಂತೆ ಸ್ವೀಕಾರಾರ್ಹವಾಗಿದೆ ಹಾಗೂ ಪಾವತಿಸಲು ಅರ್ಹವಾಗಿದೆಯೆಂದು ಕಂಡುಬಂದಲ್ಲಿ ಕ್ಲೇಮ್ ಅನ್ನು ಪುರಸ್ಕರಿಸಲಾಗುವುದು.
ಆದರೆ ಇದು ವಿಮೆ ಮಾಡಿಸಿಕೊಂಡವರು ಮಾಸ್ಟರ್ ಪಾಲಿಸಿದಾರರಿಗೆ ಬಾಕಿ ಇರುವ ಪ್ರೀಮಿಯಂ ಅನ್ನು ಪಾವತಿಸಿದ್ದ ಪಕ್ಷದಲ್ಲಿ ಮಾಸ್ಟರ್ ಪಾಲಿಸಿದಾರರು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವ ನಿಬಂಧನೆಗೆ ಒಳಪಟ್ಟಿರುತ್ತದೆ. ವಿಮಾ ಸಂಸ್ಥೆಗೆ ಬಾಕಿ ಇರುವ ಪ್ರೀಮಿಯಂ ಅನ್ನು ಪಾವತಿಸಿದ ನಂತರವೇ ಕ್ಲೇಮ್ ಮೊತ್ತವನ್ನು ನೀಡಲಾಗುತ್ತದೆ.

ಆತ್ಮಹತ್ಯೆ ಕ್ಲೇಮ್ ನಿಬಂಧನೆಗಳು :

ಆತ್ಮಹತ್ಯೆಯ ಕಾರಣದಿಂದ ವಿಮೆ ಮಾಡಿಸಿಕೊಂಡ ಸದಸ್ಯರನ ಮೃತ್ಯುವಾದರೆ, ಸದಸ್ಯರನ ರಿಸ್ಕ್ ಶುರುವಾದ ತಾರೀಕಿನಿಂದ 12 ತಿಂಗಳುಗಳ ಅವಧಿಯಲ್ಲಿ, ಆಗ ನಾಮಿನಿ ಅಥವಾ ಪಾಲಿಸಿದಾರರ ಫಲಾನುಭವಿಗೆ, ಮೃತ್ಯುವಿನ ತಾರೀಕಿನ ತನಕ ಪಾವತಿಸಲಾದ ಪ್ರೀಮಿಯಂನ ಮೊತ್ತದ ಒಟ್ಟು 80% ಮೊತ್ತವನ್ನು ಅಥವಾ ಸರೆಂಡರ್ ಮೊತ್ತ, ಯಾವುದು ಅಧಿಕವೋ ಅದನ್ನು ನೀಡಲಾಗುವುದು,, ಆದರೆ ಅದಕ್ಕಾಗಿ ಮೆಂಬರ್‌ನ ಪಾಲಿಸಿ, ಚಾಲ್ತಿಯಲ್ಲಿರಬೇಕು. ಅನ್ವಯಿಸುವ ಮೊತ್ತವನ್ನು ಪಾವತಿಸಿದ ಬಳಿಕ ಸದಸ್ಯರ ಪಾಲಿಸಿಯನ್ನು ಕೊನೆಗೊಳಿಸಲಾಗುತ್ತದೆ. ಪಾವತಿಸಿದ ಒಟ್ಟು ಪ್ರೀಮಿಯಂಗಳು , ಯಾವುದಾದರೂ ಅತಿರಿಕ್ತ ಪ್ರೀಮಿಯಂ ಮತ್ತು ತೆರಿಗೆಯನ್ನು ಹೊರತುಪಡಿಸಿ ಆ ಸದಸ್ಯರರಿಗೆ ಪಾವತಿಸಲಾದ ಎಲ್ಲಾ ಪ್ರೀಮಿಯಂನ ಒಟ್ಟು ಮೊತ್ತವಾಗಿರುತ್ತದೆ.

ನವೀಕರಣ ಸೌಲಭ್ಯ:

ಅನ್ವಯವಾಗುವುದಿಲ್ಲ

ಎಸ್‌ಬಿ‌ಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್ - ಎಸ್‌ಪಿ-ನ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.

SBI Life- Group Micro Shield - SP Plan Premium
*ಕಳೆದ ಜನ್ಮದಿನದಂತೆ ವಯಸ್ಸು
** ಎಲ್ಲಾ ಎಸ್‌ಬಿಐ ಲೈಫ್ ಗ್ರೂಪ್ ಮೈಕ್ರೋ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳಿಗೆ ಒಟ್ಟು ವಿಮಾ ಮೊತ್ತವು ಪ್ರತಿ ಗ್ರೂಪ್ ಸದಸ್ಯರಿಗೆ  ರೂ.2,00,000 ಕ್ಕೆ ಸೀಮಿತವಾಗಿರುತ್ತದೆ.
^ಅನ್ವಯವಾಗುವ ತೆರಿಗೆಗಳು ಮತ್ತು/ಅಥವಾ ಇತರ ಶಾಸನಬದ್ಧ ತೆರಿಗೆ/ಸುಂಕ/ ಪ್ರೀಮಿಯಂ ಮೇಲಿನ ಹೆಚ್ಚುವರಿ ತೆರಿಗೆಯನ್ನು (ಸರ್ಚಾರ್ಜ್), ಕಾಲಕಾಲಕ್ಕೆ ಭಾರತದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವು ಸೂಚಿಸುವ ದರದಲ್ಲಿ, ಅನ್ವಯವಾಗುವ ತೆರಿಗೆ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ.
$ನಮೂದಿಸಲಾದ ಪಾಲಿಸಿ ಅವಧಿಯು ಸದಸ್ಯ ಮಟ್ಟದಲ್ಲಿ ಅನ್ವಯವಾಗುತ್ತದೆ. ಸಿಂಗಲ್ ಪ್ರೀಮಿಯಂ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಪಾಲಿಸಿ ಅವಧಿಯು 1 ರಿಂದ 120 ತಿಂಗಳು (ಎರಡನ್ನೂ ಒಳಗೊಂಡಂತೆ) ಮತ್ತು ಗ್ರೂಪ್ ಸದಸ್ಯರ ಮಟ್ಟದಲ್ಲಿ 1 ತಿಂಗಳ ಗುಣಕದಲ್ಲಿ (ಅಂದರೆ 1 ತಿಂಗಳು, 2 ತಿಂಗಳು...119 ತಿಂಗಳು ಮತ್ತು 120 ತಿಂಗಳು) ಆಗಿದೆ. ಎಲ್ಲಾ ಸದಸ್ಯರ ಅವಧಿ ಮುಗಿಯುವವರೆಗೆ ಮಾಸ್ಟರ್ ಪಾಲಿಸಿ ಮುಂದುವರಿಯುತ್ತದೆ. ಕ್ರೆಡಿಟ್ ಲಿಂಕ್ಡ್/ಸಾಲದಾತ-ಸಾಲಗಾರ ಸಂಬಂಧದಲ್ಲಿ, ಪಾಲಿಸಿ ಅವಧಿಯು ಕನಿಷ್ಠ ಓರ್ವ ಗ್ರೂಪ್ ಸದಸ್ಯನಿಗೆ ಪಾಲಿಸಿಯ ಪ್ರಾರಂಭದಲ್ಲಿ ಬಾಕಿ ಇರುವ ಸಾಲದ ಅವಧಿಗೆ ಸಮನಾಗಿರಬೇಕು.

 

3A/ver1/02/23/WEB/KAN

*ತೆರಿಗೆ ಲಾಭಗಳು:
ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.