ಲಿಂಕ್ಡ್ ಗುಂಪು ವಿಮಾ ಯೋಜನೆ | ಕಲ್ಯಾಣ್ ಯುಲಿಪ್ ಪ್ಲಸ್ - ಎಸ್ಬಿಐ ಲೈಫ್
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಕಲ್ಯಾಣ್ ಯುಲಿಪ್ ಪ್ಲಸ್

UIN: 111L079V02

null

ಆರೈಕೆ, ಪಾರದರ್ಶಕತೆ ಮತ್ತು ಅನುಕೂಲತೆ!

  • ಮಾರ್ಕೆಟ್-ಸಂಯೋಜಿತವಾದ
  • ಲಾಯಲ್ಟಿ ಸೇರ್ಪಡೆಗಳು
  • ಕ್ರಮಬದ್ಧ ವರ್ಗಾವಣೆ ಆಯ್ಕೆ
  • ಕಸ್ಟಮೈಸ್ ಮಾಡಲಾದ ಸೇವೆಗಳು ಮತ್ತು ಸಮರ್ಪಿತ ರಿಲೇಶನ್‌ಶಿಪ್ ಮ್ಯಾನೇಜರ್
‘ಗುಂಪು ವಿಮಾ ಯೋಜನೆ ಆಧಾರಿತ ನಾನ್-ಪಾರ್ಟಿಸಿಪೇಟಿಂಗ್, ಯುನಿಟ್ ಲಿಂಕ್ಡ್ ಫಂಡ್’.

ಹಣವನ್ನು ನೀವು ನಿಭಾಯಿಸುವ ಹೊಣೆಗಾರಿಕೆ ಇಲ್ಲದೆಯೇ ನಿಮ್ಮ ಉದ್ಯೋಗಿಗಳಿಗೆ ಅವರು ಹೊಂದಿರಲೇ ಬೇಕಾದ ರಕ್ಷಣೆ ಮತ್ತು ಉಳಿತಾಯ ಯೋಜನೆಗಳ ಶ್ರೇಣಿಯನ್ನು ನೀಡಲು ಬಯಸುವಿರಾ?

ಎಸ್‌ಬಿಐ ಲೈಫ್ –ಕಲ್ಯಾಣ್ ಯುಲಿಪ್ ಪ್ಲಸ್ ಎನ್ನುವುದು ಉದ್ಯೋಗದಾತ-ಉದ್ಯೋಗಿ ಗುಂಪುಗಳಿಗೆ ಫಂಡ್-ಆಧಾರಿತ ಯೋಜನೆಯಾಗಿದೆ. ಒಂದೇ ಕಡೆ ಸಿಗುವ ಪರಿಹಾರವಾಗಿದ ಇದು ನಿಮ್ಮ ಉದ್ಯೋಗಿಗಳಿಗೆ ಗ್ರಾಚ್ಯುಯಿಟಿ, ಸೂಪರ್‌ಆನ್ಯುಯೇಶನ್ ಮತ್ತು ರಜೆಯ ನಗದೀಕರಣದ ಯೋಜನೆಗಳನ್ನು ಒಂದುಗೂಡಿಸುತ್ತದೆ ಮತ್ತು ನಿಮಗೆ ಪರಿಣಾಮಕಾರಿ ಹಣ ನಿರ್ವಹಣೆಯ ಪ್ರಯೋಜನ ನೀಡುತ್ತದೆ.

ಈ ಯೋಜನೆ ಇವುಗಳನ್ನು ನೀಡುತ್ತದೆ –
  • ಭದ್ರತೆ – ನಿಮ್ಮ ಉದ್ಯೋಗಿಗಳ ರಕ್ಷಣೆ ಮತ್ತು ನಿವೃತ್ತಿಯ ಅಗತ್ಯತೆಗಳ ಕಾಳಜಿ ವಹಿಸುತ್ತದೆ
  • ವಿಶ್ವಾಸಾರ್ಹತೆ – ಸಮರ್ಪಿತ ಸೇವಾ ತಂಡ
  • ಅನುಕೂಲತೆ – ನಿಮ್ಮ ಅಗತ್ಯತೆಗಳ ಪ್ರಕಾರವಾಗಿ ನಿಮ್ಮ ಉದ್ಯೋಗಿಗಳಿಗೆ ಯೋಜನೆಯನ್ನು ವಿನ್ಯಾಸಗೊಳಿಸಿ

ನಿಮ್ಮ ಉದ್ಯೋಗಿಗಳ ಹಣಕಾಸು ಭವಿಷ್ಯವನ್ನು ಸುಭದ್ರಗೊಳಿಸುವ ಮೂಲಕ ಅವರ ಬದುಕಿನಿಂದ ಅವರು ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುವ ಸಾಮರ್ಥ್ಯ ನೀಡಿ.

ಮುಖ್ಯಾಂಶಗಳು

null

‘ಗುಂಪು ವಿಮಾ ಯೋಜನೆ ಆಧಾರಿತ ನಾನ್-ಪಾರ್ಟಿಸಿಪೇಟಿಂಗ್, ಯುನಿಟ್ ಲಿಂಕ್ಡ್ ಫಂಡ್’.

ವೈಶಿಷ್ಟ್ಯಗಳು

  • ಉದ್ಯೋಗಿ ಪ್ರಯೋಜನ ಯೋಜನೆಗಳಿಗೆ ಅನುಭವಿ ಮತ್ತು ವೃತ್ತಿಪರ ಫಂಡ್ ಮ್ಯಾನೇಜ್‌ಮೆಂಟ್
  • ಅಧಿಕ ಲಾಯಲ್ಟಿ ಹೆಚ್ಚುವರಿ ದರವನ್ನು ಒದಗಿಸಲು ಫ್ಯೂಶನ್ ಪ್ರಯೋಜನ
  • ಕ್ರಮಬದ್ಧ ವರ್ಗಾವಣೆ ಆಯ್ಕೆಯನ್ನು ಒಳಗೊಂಡಂತೆ ಆರು ಫಂಡ್ ಆಯ್ಕೆಗಳು
  • ಡಿಫೈನ್ಸ್ ಬೆನಿಫಿಟ್ (DB) ಅಥವಾ ಡಿಫೈನ್ಡ್ ಕಂಟ್ರಿಬ್ಯೂಶನ್ಸ್ (DC) ಯೋಜನೆಗಳು ಅಥವಾ ಸಂಯೋಜನೆಯನ್ನು ನಿರ್ವಹಿಸಬಹುದು
  • ರಜೆಯ ನಗದೀಕರಣ ಮತ್ತು ಗ್ರಾಚ್ಯುಯಿಟಿ ಯೋಜನೆಗಳ ಅಡಿಯಲ್ಲಿ ಉಚಿತ ಅನಿಯಮಿತ ಆನ್‌ಲೈನ್, ಫಂಡ್ ಬದಲಾವಣೆಗಳು ಮತ್ತು ಕೊಡುಗೆಗಳ ಮರುನಿರ್ದೇಶನಗಳು

ಪ್ರಯೋಜನಗಳು

ಸುರಕ್ಷತೆ
  • ಉದ್ಯೋಗಿಗಳು ತಮ್ಮ ಉದ್ಯೋಗದ ಅವಧಿಗಳಲ್ಲಿ ಸಂಗ್ರಹಿತವಾದ ಒಟ್ಟು ಮೊತ್ತವನ್ನು ಪಡೆಯುತ್ತಾರೆ
  • ಯಾವುದೇ ದುರದೃಷ್ಟಕರ ಸನ್ನಿವೇಶದಲ್ಲಿ ಅವರ ಫಲಾನುಭವಿಗಳಿಗೆ ಹಣಕಾಸು ಭದ್ರತೆ
  • ಒಂದೇ ಮಾಸ್ಟರ್ ಪಾಲಿಸಿದಾರರ ಒಂದೇ ಅಥವಾ ಗುಂಪು ಕಂಪನಿಗಳು ಹೊಂದಿರುವ ಅನೇಕ ಪಾಲಿಸಿಗಳನ್ನು ಒಂದುಗೂಡಿಸುವುದರ ಮೂಲಕ ಅಧಿಕ ಲಾಯಲ್ಟಿ ಸೇರ್ಪಡಣೆಗಳು
ವಿಶ್ವಾಸಾರ್ಹತೆ
  • ನಿಮ್ಮ ಕಾರ್ಯನಿರ್ವಹಣೆಯ ಅಗತ್ಯತೆಗಳನ್ನು ಪೂರೈಸುವ ಸಮರ್ಪಿತ ಸೇವೆಗಳು
ಹೊಂದಿಕೊಳ್ಳುವಿಕೆ
  • ಕ್ರಮಬದ್ಧ ವರ್ಗಾವಣೆ ಆಯ್ಕೆಯು ಮೂಲಕ ಹೂಡಿಕೆಯ ಅಪಾಯವನ್ನು ತಗ್ಗಿಸುತ್ತದೆ ಯೋಜನೆಯ ಪ್ರಕಾರವನ್ನು ಆಧರಿಸಿ ಮಾಸ್ಟರ್ ಪಾಲಿಸಿ ಅಥವಾ ಮೆಂಬರ್ ಲೆವೆಲ್‌ಗೆ ಫಂಡ್ ನಿರ್ವಹಣೆ
ತೆರಿಗೆ ಪ್ರಯೋಜನಗಳನ್ನು ಪಡೆಯಿರಿ*
ಯೋಜನೆಯ ಪ್ರಯೋಜನ
ಯೋಜನೆಯ ನಿಯಮಗಳನ್ನು ಆಧರಿಸಿ, ಪ್ರಯೋಜನಗಳನ್ನು ಮರಣ, ನಿವೃತ್ತಿ, ರಾಜೀನಾಮೆ, ಇತರ ಕಾರಣಗಳಿಂದ ಹಿಂದೆಸರಿಯುವಿಕೆ ಅಥವಾ ನಿರ್ಗಮಿಸಿದಾಗ ಪ್ರಯೋಜನಗಳನ್ನು ಪಾವತಿಸಲಾಗುತ್ತದೆ. ಈ ಪ್ರಯೋಜನಗಳನ್ನು ಮಾಸ್ಟರ್ ಪಾಲಿಸಿದಾರರು ಅಥವಾ ಸದಸ್ಯರ ಖಾತೆಯಿಂದ ಅನ್ವಯಿಸಿದ ಪ್ರಕಾರ ಪಾವತಿಸಲಾಗುತ್ತದೆ
ವಿಮಾ ಪ್ರಯೋಜನ
ಸದಸ್ಯರ ಮರಣದ ಸಮಯದಲ್ಲಿ,₹1,000 ವಿಮಾ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುತ್ತದೆ.
ಈ ಪ್ರಯೋಜನವು ರಜೆಯ ನಗದೀಕರಣ ಮತ್ತು ಗ್ರಾಚ್ಯುಯಿಟಿ ಯೋಜನೆಗಳ ಅಡಿಯಲ್ಲಿ ಲಭ್ಯವಿದ ಮತ್ತು ಯೋಜನೆಯ ಪ್ರಯೋಜನದ ಜೊತೆಗೆ ಹೆಚ್ಚುವರಿ ಪಾವತಿಸಲಾಗುತ್ತದೆ.

ಈ ಪಾಲಿಸಿಯ ಅಡಿಯಲ್ಲಿ ಹೂಡಿಕೆಯ ಅಪಾಯದ ಕುರಿತಾಗಿ ಟಿಪ್ಪಣಿ
  • ಯುನಿಟ್ ಲಿಂಕ್ಡ್ ಜೀವ ವಿಮಾ ಯೋಜನೆಗಳು ಸಾಂಪ್ರದಾಯಿಕ ವಿಮಾ ಯೋಜನೆಗಳಿಗಿಂತ ವಿಭಿನ್ನವಾಗಿದೆ ಮತ್ತು ಇದು ಅಪಾಯದ ಅಂಶಗಳಿಗೆ ಒಳಪಟ್ಟಿದೆ.
  • ಯುನಿಟ್ ಲಿಂಕ್ಡ್ ಜೀವ ವಿಮಾ ಪಾಲಿಸಿಗಳಲ್ಲಿ ಪಾವತಿಸಿದ ಪ್ರೀಮಿಯಂ, ಹಣ ಹೂಡಿಕೆಯ ಮಾರುಕಟ್ಟೆಗಳ ಜೊತೆಗೆ ಸಂಬಂಧಿಸಿದ ಹೂಡಿಕೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ ಮತ್ತು ಯುನಿಟ್‌ಗಳ ಎನ್ಎವಿಗಳು ಫಂಡ್‌ನ ಕಾರ್ಯನಿರ್ವಹಣೆ ಮತ್ತು ಹಣ ಹೂಡಿಕೆಯ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಅಂಶಗಳ ಆಧಾರದಲ್ಲಿ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು ಮತ್ತು ವಿಮಾದಾರರು ತಮ್ಮ ನಿರ್ಧಾರಗಳಿಗೆ ಜವಾಬ್ದಾರರಾಗಿರುತ್ತಾರೆ.
  • ಈ ಒಪ್ಪಂದದ ಅಡಿಯಲ್ಲಿ ನೀಡಲಾಗುವ ವಿವಿಧ ಫಂಡ್‌ಗಳು, ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಯೋಜನೆಗಳ ಗುಣಮಟ್ಟವನ್ನಾಗಲೀ ಅಥವಾ ಅವುಗಳ ಭವಿಷ್ಯದ ನಿರೀಕ್ಷೆಗಳನ್ನಾಗಲೀ ಮತ್ತು ಲಾಭಗಳನ್ನಾಗಲೀ ಸೂಚಿಸುವುದಿಲ್ಲ.
  • ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿಮಿಟೆಡ್ ಎನ್ನುವುದು ಕೇವಲ ವಿಮಾ ಕಂಪನಿಯ ಹೆಸರಾಗಿದೆ ಮತ್ತು ಎಸ್‌ಬಿಐ ಲೈಫ್ – ಕಲ್ಯಾಣ್ ULIP ಪ್ಲಸ್ ಕೇವಲ ಯುನಿಟ್ ಲಿಂಕ್ಡ್ ವಿಮಾ ಒಪ್ಪಂದದ ಹೆಸರಾಗಿದೆ ಮತ್ತು ಯಾವುದೇ ರೀತಿಯಲ್ಲಿ ಒಪ್ಪಂದದ ಗುಣಮಟ್ಟವನ್ನಾಗಲೀ ಅಥವಾ ಅವುಗಳ ಭವಿಷ್ಯದ ನಿರೀಕ್ಷೆಗಳನ್ನಾಗಲೀ ಮತ್ತು ಲಾಭಗಳನ್ನಾಗಲೀ ಸೂಚಿಸುವುದಿಲ್ಲ.
  • ಸಂಬಂಧಿತ ಅಪಾಯಗಳು ಮತ್ತು ಅನ್ವಯಿಸುವ ಶುಲ್ಕಗಳ ಕುರಿತಾಗಿ ನಿಮ್ಮ ವಿಮಾ ಏಜೆಂಟರಿಂದ ಅಥವಾ ಮಧ್ಯವರ್ತಿಗಳಿಂದ ಅಥವಾ ವಿಮಾ ನೀಡುಗರ ಪಾಲಿಸಿ ಡಾಕ್ಯುಮೆಂಟ್‌ನಿಂದ ತಿಳಿದುಕೊಳ್ಳಿ.
ಮೇಲಿನ ಮಾಹಿತಿಯು ಎಸ್‌ಬಿಐ ಲೈಫ್ – ಕಲ್ಯಾಣ್ ULIP ಪ್ಲಸ್‌ನ ಸಾರಾಂಶವಾಗಿದೆ. ಇವುಗಳು ಯೋಜನೆಯ ಕೇವಲ ಸಂಕ್ಷಿಪ್ತ ವೈಶಿಷ್ಟ್ಯಗಳಾಗಿವೆ. ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಮಾರಾಟವನ್ನು ಪೂರ್ಣಗೊಳಿಸುವ ಮೊದಲು ದಯವಿಟ್ಟು ಮಾರಾಟ ಕೈಪಿಡಿಯನ್ನು ಗಮನವಿಟ್ಟು ಓದಿರಿ.

ತೆರಿಗೆ ಪ್ರಯೋಜನಗಳು
ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳು ಭಾರತದ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆಗಿರುತ್ತದೆ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿರುತ್ತದೆ. ವಿವರಗಳಿಗೆ ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.

ಎಸ್‌ಬಿಐ ಲೈಫ್- ಕಲ್ಯಾಣ್ ULIP ನ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತಾಗಿ ಹೆಚ್ಚಿನ ವಿವರಗಳಿಗೆ, ಮುಂದಿನ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.

*The Premium shall be paid by the Master Policyholder as per the funding valuation report in accordance with AS15 (Revised) guidelines or as per scheme rules.

64.ver.03-06/17 WEB KAN

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್‌ಸೈಟ್‌ಗೆ ನೀವು ಭೇಟಿನೀಡಬಹುದು ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

ಟೋಲ್‌‌ ಫ್ರೀ ಸಂಖ್ಯೆಗೆ ಕರೆ ಮಾಡಿ

1800 267 9090(ಪ್ರತಿದಿನ ಬೆಳಿಗ್ಗೆ 9.00 ರಿಂದ ರಾತ್ರಿ 9.00 ವರೆಗೆ ಲಭ್ಯ)

ನಮಗೆ ಇಮೇಲ್ ಮಾಡಿ

info@sbilife.co.in