 |
| ಜೆನೆರಿಕ್ ಬೆನಿಫಿಟ್ ಇಲ್‌ಸ್ಟ್ರೇಶನ್ | ಇಮೇಲ್ |
| |
ಪೀಠಿಕೆ
ಪ್ರಮುಖ ವೈಶಿಷ್ಟ್ಯಗಳು
ಪ್ರಯೋಜನಗಳು
|
ಪರಿಚಯ:
ಸಮಾಜದಲ್ಲಿನ ಆರ್ಥಿಕ ದುರ್ಬಲವಾಗಿರುವ ವರ್ಗದ ಗುಂಪಿನವರಿಗೆ, ಹಾಗೂ ಎನ್‌ಜಿಒ ಅಥವಾ ಸಣ್ಣ ಹಣಕಾಸು ಸಂಸ್ಥೆಗಳಿಂದ ಹಣ ತೆಗೆದು ಕೊಂಡಂತಹ ಜನರಿಗಾಗಿ ಅಥವಾ ಎಸ್ಎಚ್‌ಜಿ ಮೂಲಕ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದುಕೊಂಡಿರುವವರಿಗೆ ಕಡಿಮೆ ವಚ್ಚದಲ್ಲಿ ಜೀವ ವಿಮಾ ರಕ್ಷಣೆ ಒದಗಿಸುವುದು ಈ ಉತ್ಪನ್ನದ ಉದ್ದೇಶವಾಗಿದೆ. ಎಸ್ಎಚ್‌ಜಿ ಒಂದು ಹಳ್ಳಿಯ ಬಡವರ ಗುಂಪಾಗಿದ್ದು ಇದು ತನ್ನ ಸದಸ್ಯರುಗಳು ಬಡತನ ನಿರ್ಮೂಲನೆಗೆಂದು ಸಂಘಟಿತವಾದ ಸ್ವಯಂಸೇವಾ ಸಂಸ್ಥೆಯಾಗಿದೆ.
ಗ್ರಾಮೀಣ್ ಸೂಪರ್ ಸುರಕ್ಷವು ಗ್ರಾಮೀಣ ಜನರಿಗೆ ಕಡಿಮೆ ವೆಚ್ಚದಲ್ಲಿ ಗ್ರೂಪ್ ಟರ್ಮ್ ಅಶ್ಯುರೆನ್ಸ್ ಪ್ಲಾನ್ ಆಗಿದ್ದು ಯಾರು ಬೇಕಾದರೂ ಲೈಫ್ ಇನ್ಶುರೆನ್ಸ್ ಯೋಜನೆಯನ್ನು ಮೆಚ್ಯುರಿಟಿಯ ಪ್ರಯೋಜನವಿಲ್ಲದೇ ಪಡೆಯಬಹುದಾಗಿದೆ.
|
ಪ್ರಮುಖ ವೈಶಿಷ್ಟ್ಯಗಳು:
|
| • |
ಪ್ಲಾನ್‌ನ ಅವಧಿ: 5 ವರ್ಷಗಳುನಿಗದಿತ.
|
| • |
ಪಾಲಿಸಿಯನ್ನು ಪ್ರಾರಂಭಿಸುವಾಗ ವಯಸ್ಸು : |
| |
• |
ಕೊನೆ ಜನ್ಮದಿನದಿಂದ ಕನಿಷ್ಟ 18 ವರ್ಷಗಳ ವಯಸ್ಸು. |
| |
• |
ಕೊನೆ ಜನ್ಮದಿನದಿಂದ ಗರಿಷ್ಟ 50 ವರ್ಷಗಳ ವಯಸ್ಸು.
|
| • |
ಸಮ್ ಅಷೂರ್‌ಡ್:ಗರಿಷ್ಟ ಹಾಗೂ ಕನಿಷ್ಟ ಪ್ರೀಮಿಯಂ ಮೊಬಲಗು ಮತ್ತು ಪ್ರೀಮಿಯಂ ಮೋಡ್‌ನಂತೆ.
|
| • |
ಪ್ರೀಮಿಯಂ ಫ್ರೀಕ್ವನ್ಸಿ: ಸಿಂಗಲ್ ಪ್ರೀಮಿಯಂ ಅಥವಾ ವಾರ್ಷಿಕ ಪ್ರೀಮಿಯಂ ಗುಂಪಿನ ಮಾಸ್ಟರ್ ಪಾಲಿಸಿದಾರನ ಆಯ್ಕೆಯಂತೆ.
|
| |
• |
ಸಿಂಗಲ್ ಪ್ರೀಮಿಯಮ್: ಸಿಂಗಲ್ ಪ್ರೀಮಿಯಂನ ಮೊಬಲಗುವಿನ 30 ಬಾರಿ (ಸೇವಾ ತೆರಿಗೆ ಹೊರತುಪಡಿಸಿ).
|
| |
• |
ರೆಗ್ಯುಲರ್ ಪ್ರೀಮಿಯಂ: ಸಿಂಗಲ್ ಪ್ರೀಮಿಯಂನ ಮೊಬಲಗುವಿನ 30 ಬಾರಿ (ಸೇವಾ ತೆರಿಗೆ ಹೊರತುಪಡಿಸಿ).
|
| • |
ಪ್ರೀಮಿಯಂ ಫ್ರೀಕ್ವನ್ಸಿ:ಸಿಂಗಲ್ ಪ್ರೀಮಿಯಂ ಅಥವಾ ವಾರ್ಷಿಕ ಪ್ರೀಮಿಯಂ ಗುಂಪಿನ ಮಾಸ್ಟರ್ ಪಾಲಿಸಿದಾರನ ಆಯ್ಕೆಯಂತೆ.
|
| • |
ಗ್ರೂಪ್ ಸದಸ್ಯರಿಂದ ಅವಶ್ಯಕತೆ:ಸದಸ್ಯತ್ವದ ಫಾರ್ಮ್‌ನಲ್ಲಿ ಉತ್ತಮ ಆರೋಗ್ಯದ ದೃಢೀಕರಣ ಮತ್ತು ನಾಮಿನೇಷನ್ ಕ್ಲಾಜ್ ಒಳಗೊಂಡಿದ್ದು ಇದನ್ನು ಸಹಿ ಮಾಡುವುದು ಸ್ವಯಂಚಾಲಿತವಾಗಿ ಸಮ್ಮತಿಸುವುದಕ್ಕೆ ಸಂಬಂಧಿತವಾಗಿದೆ.
|
ಪ್ರಯೋಜನಗಳು:
|
| • |
ಮರಣ ಪ್ರಯೋಜನಗಳು:
ಪಾಲಿಸಿ ಕವರ್ ಆರಂಭವಾದ ಮಾಡಿದ ದಿನಾಂಕದ ಮೊದಲ 45 ದಿನಗಳು ಅಥವಾ ರಿವೈವಲ್ ದಿನಾಂಕದ ನಂತರ - ಮರಣದ ಕ್ಲೈಮ್ ಅನ್ನು ಅಂಗೀಕರಿಸುವುದಿಲ್ಲ (ಆಪಘಾತದ ಮರಣವನ್ನು ಒಳಗೊಂಡಂತೆ ).
46ನೇ ದಿನದಿಂದ ಪಾಲಿಸಿ ಕವರ್‌ನ ಆರಂಭಿಸಿದ ದಿನಾಂಕ / ರಿವೈವಲ್ ದಿನಾಂಕ - ಸಮ್ ಅಷೂರ್‌ಡ್ ಅನ್ನು ಪಾವತಿಸಲಾಗುತ್ತದೆ.
|
| • |
ಮೆಚ್ಯುರಿಟಿ ಪ್ರಯೋಜನಗಳು:ಮೆಚ್ಯುರಿಟಿ ಪ್ರಯೋಜನಗಳನ್ನು ಪಾವತಿಸಲಾಗುವುದಿಲ್ಲ.
|
| • |
ರಿಯಾಯಿತಿ ಅವಧಿ:
ಒಂದೇ ರೀತಿಯ ಮಾಸ್ಟರ್ ಪಾಲಿಸಿ ಅಡಿಯಲ್ಲಿರುವ ಗ್ರೂಪ್‌ನ ಎಲ್ಲಾ ಸದಸ್ಯರಿಗೆ ಸಾಮಾನ್ಯವಾಗಿ ಪ್ರೀಮಿಯಂ ಪಾವತಿಸುವ ಡ್ಯೂ ದಿನಾಂಕದಿಂದ 30 ದಿನಗಳ ಅವಧಿ ದೊರೆಯುತ್ತದೆ. ರಿಯಾಯಿತಿ ಅವಧಿಯಲ್ಲಿ, ಕ್ಲೈಮ್ ಮೊಬಲಗು ಬಾಕಿಯಿರುವ ಪ್ರೀಮಿಯಂ ಮೊಬಲಗುವನ್ನು ಕಡಿತಗೊಳಿಸಿ ಪಾವತಿಸಲಾಗುತ್ತದೆ.
|
| • |
ರಿವೈವಲ್ ಅವಧಿ:
ಮೊದಲ ಪಾವತಿಸದ ಪ್ರೀಮಿಯಂನ ಡ್ಯೂ ದಿನಾಂಕದಿಂದ 2 ವರ್ಷಗಳು ಮತ್ತು ಅಂಡರ್‌ರೈಟಿಂಗ್‌ನ ನಿರ್ಧಾರಕ್ಕೆ ಅನುಗುಣವಾಗಿ ಪಾಲಿಸಿ ಟರ್ಮ್‌ನ ಕವರ್‍ನೊಳಗೆ. ಎಲ್ಲಾ ಪಾವತಿಸದ ಪ್ರೀಮಿಯಂಗಳನ್ನು ಪಾವತಿಸುವಾಗ ಬಡ್ಡಿ (9%ವರ್ಷಕ್ಕೆ) ಜೊತೆಗೆ ಪಾವತಿಸ ಬೇಕು. ರಿವೈವಲ್ ದಿನಾಂಕದಿಂದ ಹೊಸ 45 ದಿನಗಳ ಹೊರಗಿರಿಸುವ ಅವಧಿ ಅನ್ವಯವಾಗುತ್ತದೆ.
|
| • |
ಸರೆಂಡರ್ ಮೌಲ್ಯ :ಇದು ಬರಿಯ ಟರ್ಮ್ ಅಷೂರೆನ್ಸ್ ಉತ್ಪನ್ನವಾಗಿರುವುದರಿಂದ ಯಾವುದೇ ಸರೆಂಡರ್ ಮೌಲ್ಯವಿರುವುದಿಲ್ಲ
|
| • |
ಹೊರಗಿಡುವಿಕೆಗಳು: |
| |
• |
ಸ್ಕೀಮ್ ಸೇರಿದ/ರಿವೈವಲ್ ದಿನಾಂಕದಿಂದ 45 ದಿನಗಳು: ಮರಣ ಕ್ಲೈಮ್ ಅನ್ನು ಸಮ್ಮತಿಸಲಾಗುವುದಿಲ್ಲ. |
| |
• |
ಒಂದೇ ಗುಂಪಿನ ಸದಸ್ಯರಲ್ಲಿ ಕ್ರಮವಾಗಿ ಒಂದಕ್ಕಿಂತ ಹೆಚ್ಚು ಮರಣ ಕ್ಲೈಮ್ ಆಗುವ ಸಂದರ್ಭದಲ್ಲಿ, ಡೆತ್ ಕ್ಲೈಮ್ ಆಗಿ ಪ್ರತಿ ಸದಸ್ಯರಿಗೆ ಗರಿಷ್ಠ ರೂ.50,000/- ಗಳನ್ನು ಮಾತ್ರ ಪಾವತಿಸಲಾಗುತ್ತದೆ. ಇತರ ಎಲ್ಲಾ ಕ್ಲೈಮ್‌ಗಳನ್ನು ನಿರಾಕರಿಸಲಾಗುತ್ತದೆ ಮತ್ತು ನಾಮಿನಿಗೆ ಪ್ರೀಮಿಯಂನ ನಿವ್ವಳ ಸೇವಾ ತೆರಿಗೆ ಮತ್ತು ಸ್ಟಾಂಪ್ ಡ್ಯೂಟಿಯನ್ನು ಮುರಿದುಕೊಂಡು ಮರುಪಾವತಿಸಲಾಗುತ್ತದೆ.
|
| |
• |
ಪಾಲಿಸಿ ಮೊದಲ ವರ್ಷದೊಳಗಿನ ಆತ್ಮಹತ್ಯೆ: ಸಿಂಗಲ್ ಪ್ರೀಮಿಯಂ ಮೋಡ್ - ನಾಮಿನಿಗೆ ಪ್ರೀಮಿಯಂನ ನಿವ್ವಳ ಸೇವಾ ತೆರಿಗೆ ಮತ್ತು ಸ್ಟಾಂಪ್ ಡ್ಯೂಟಿಯನ್ನು ಮುರಿದುಕೊಂಡು ಮರುಪಾವತಿಸಲಾಗುತ್ತದೆ. ರೆಗ್ಯೂಲರ್ ಪ್ರಿಮೀಯಂ ಮೋಡ್ - ಯಾವುದೇ ಪ್ರಯೋಜನಗಳನ್ನು ಪಾವತಿಸಲಾಗುವುದಿಲ್ಲ. |